ತಿಕೋಟಾ: ಪ್ರಜಾಪ್ರಭುತ್ವದಲ್ಲಿ ಸಂವಿಧಾನ ನೀಡಿರುವ ಹಕ್ಕನ್ನು ಪ್ರತಿಯೊಬ್ಬರೂ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸುವಂತೆ ಮಾಡಲು ಎಲ್ಲರೂ ಸಹಕರಿಸಬೇಕು. ಈ ಕುರಿತು ಮಕ್ಕಳಿಗೆ ಈಗಿನಿಂದಲೆ ಮಾರ್ಗದರ್ಶನ ನೀಡಬೇಕು. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಕ್ಲಬ್ ಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ರಾಜ್ಯ ಚುನಾವಣಾ ಸಾಕ್ಷರತಾ ಕ್ಲಬ್ ನ ರಾಜ್ಯ ಅಧ್ಯಕ್ಷ ಬಿ.ಎಸ್. ಹಿರೇಮಠ ಹೇಳಿದರು.
ತಾಲ್ಲೂಕಿನ ಸಿದ್ದಾಪುರ (ಕೆ) ಸರಕಾರಿ ಪ್ರೌಢ ಶಾಲೆಗೆ ಗುರುವಾರ ಭೇಟಿ ನೀಡಿ ಶಾಲೆಯಲ್ಲಿ ಚುನಾವಣಾ ಜಾಗೃತಿಗಾಗಿ ಕೈಗೊಂಡಿರುವ ಕ್ರಮಗಳನ್ನು ಪರೀಶಿಲಿಸಿ ಅವರು ಮಾತನಾಡಿದ ಅವರು ಹದಿನೆಂಟು ವರ್ಷ ಪೂರ್ಣಗೊಂಡ ಎಲ್ಲಾ ಅರ್ಹ ಮತದಾರರು ಕಡ್ಡಾಯವಾಗಿ ನೋಂದಣಿ ಮಾಡಬೇಕು.
ಶಾಲೆಯಲ್ಲಿಯ ಕ್ಲಬ್ ನ ಅಡಿಯಲ್ಲಿ ಕೈಗೊಂಡಿರುವ ಕಾರ್ಯಗಳನ್ನು ಪ್ರಶಂಸೆ ವ್ಯಕ್ತಪಡಿಸಿದರು. ಚುನಾವಣಾ ಸಾಕ್ಷರತಾ ಕ್ಲಬ್ ಆಸಕ್ತಿದಾಯಕ ಚಟುವಟಿಕೆಗಳ ಮೂಲಕ ಶಾಲಾ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ವೇದಿಕೆಯಾಗಿದೆ. ಚುನಾವಣಾ ಹಕ್ಕುಗಳ ಬಗ್ಗೆ ಅವರಿಗೆ ಅರಿವು ಮೂಡಿಸಲು ನೋಂದಣಿ ಮತ್ತು ಮತದಾನದ ಚುನಾವಣಾ ಪ್ರಕ್ರಿಯೆಯೊಂದಿಗೆ ಅವರಿಗೆ ಪರಿಚಿತರಾಗಲು ಅನುಭವವನ್ನು ನೀಡುತ್ತದೆ ಎಂದರು.
ಶಾಲೆಯಲ್ಲಿ ಇರುವ ಆಟದ ಮೈದಾನ ಹಾಗೂ ಕ್ರೀಡಾ ಕೋಣೆ ಮತ್ತು ವಿಜ್ಞಾನ ಲ್ಯಾಬ್ ಗಳನ್ನು ವೀಕ್ಷಿಸಿ ಶಾಲೆಯು ಉತ್ಕೃಷ್ಟ ಮಟ್ಟದ ಭೌತಿಕ ಸೌಲಭ್ಯಗಳನ್ನು ಹೊಂದಲು ಇಲಾಖೆ, ಗ್ರಾಮ ಪಂಚಾಯತಿ ಹಾಗೂ ಗ್ರಾಮಸ್ಥರ ಕಾಳಜಿಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಎಸ್.ಎಂ.ಅವಟಿ ಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ನೋಡಲ್ ಅಧಿಕಾರಿ ಎಸ್. ಬಿ.ಬಿರಾದಾರ, ಬಿ.ಎನ್.ಹಿರೇಮಠ, ಜಿ.ಬಿ.ಗಳವೆ, ಎಚ್. ಎಸ್. ಕಡಗಂಚಿ, ಜೆ.ಸಿ.ಹಿರೇಮಠ, ಎಚ್. ಎಚ್. ವಾಲಿಕಾರ, ಅರ್. ಎಸ್. ಟಕ್ಕಳಕಿ, ಇಮ್ತಿಯಾಜ ಅಹ್ಮದ, ಗ್ರಾಮ ಆಡಳಿತಾಧಿಕಾರಿ ಸಂತೋಷ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

