ಕೆಂಭಾವಿ: ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಗಣಕ ವಿಜ್ಞಾನದ ಮುಖ್ಯಸ್ಥೆ ಪೂಜಾ ಹೊನ್ನುಟಗಿಯವರು, ಡಾ.ವಿ.ಡಿ. ಮೈತ್ರಿ ಮಾರ್ಗದರ್ಶನ ಹಾಗೂ ಡಾ.ಲಲಿತಾ ವೈ.ಎಸ್ ಸಹ ಮಾರ್ಗದರ್ಶನದಲ್ಲಿ ” ಅಂಡರ್ವಾಟರ್ ಚಿತ್ರಗಳು ಮತ್ತು ವೀಡಿಯೊಗಳನ್ನು ವರ್ಧಿಸಲು ಫ್ಯೂಷನ್ ಆಧಾರಿತ ತಂತ್ರ” ಎಂಬ ಶೀರ್ಷಿಕೆ ಕುರಿತು ಸಂಶೋಧನಾ ಮಹಾಪ್ರಬಂಧ ಮಂಡಿಸಿ, 2023-24 ನೇ ಸಾಲಿನಲ್ಲಿ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ “ಡಾಕ್ಟರ್ ಆಫ್ ಫಿಲಾಸಫಿ” ಪದವಿ ಪಡೆದ ಪ್ರಯುಕ್ತ ಕಾಲೇಜಿನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಪ್ರಾಂಶುಪಾಲ ಡಾ.ನಾಗಪ್ಪ ಚವಲ್ಕರ್, ಡಾ.ನಂದಾ ವಾರದ, ಡಾ.ಬಸಮ್ಮ ಎಸ್, ನಸ್ರೀನ್ ತಾಜ್, ಡಾ.ಸಿದ್ದಲಿಂಗ ರಾಠೋಡ್, ಡಾ.ಯಂಕನಗೌಡ ಪಾಟೀಲ, ಡಾ.ಉಪೇಂದ್ರ ನಾಯಕ್, ಮಲ್ಲಣ್ಣ ಬಿಳೇಬಾವಿ, ಶರಣಪ್ಪ ನಡಕೂರ, ಪ್ರದೀಪ್ ಸಂಶಿಕರ್, ಸಂದೀಪ್ ಸಂಶಿಕರ್, ಪವನ ಕುಲ್ಕರ್ಣಿ, ಮಂಜುನಾಥ ಚೆಟ್ಟಿ, ಬಸವರಾಜ ಹೋಳಿಕಟ್ಟಿ, ಮರಿಸ್ವಾಮಿ, ಬಸವರಾಜ ಪಾಟೀಲ, ಶರಣಬಸವ ಅಂಗಡಿ, ಮಲ್ಲಿಕಾರ್ಜುನ ಕಲಾಲ್, ಜಟ್ಟೆಪ್ಪ ಹೊಸ್ಮನಿ, ಪಾರ್ವತಿ, ಜ್ಯೋತಿ, ಸೇರಿದಂತೆ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು, ಶುಭ ಹಾರೈಸಿ ಹರ್ಷ ವ್ಯಕ್ತಪಡಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

