ಬಸವನಬಾಗೇವಾಡಿ: ೧೨ ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿರುವ ವಚನ ಸಾಹಿತ್ಯ ನಮ್ಮ ಬದುಕಿಗೆ ದಾರಿದೀಪವಾಗಿದೆ. ಇಂತಹ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ ಮೂಲಕ ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ವಚನ ಸಾಹಿತ್ಯ ಮುಕುಟಪ್ರಾಯವಾಗುವಂತೆ ಮಾಡಿದ ಕೀರ್ತಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಡಾ.ಫ.ಗು.ಹಳಕಟ್ಟಿ ಅವರು ಮನೆ ಮನೆಗೆ ಹಾಗೂ ಮಠ-ಮಂದಿರಗಳಿಗೆ ಭೇಟಿ ನೀಡಿ ಅಲ್ಲಿರುವ ಬಸವಾದಿ ಶರಣರ ವಚನಗಳ ಕಟ್ಟನ್ನು ಪಡೆದು ಸಂಪಾದಿಸಿ ಪರಿಷ್ಕರಣೆ ಮಾಡುವ ಮೂಲಕ ವಚನ ಸಾಹಿತ್ಯದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು. ನಾಡಿನಲ್ಲಿ ವಚನ ಸಾಹಿತ್ಯದ ಪ್ರಚಾರದ ಜೊತೆಗೆ ಅವುಗಳ ಮುದ್ರಣ ಕಾರ್ಯಕ್ಕೆ ಮುಂದಾಗಿ ಮುದ್ರಣವಾಗುವಂತೆ ಮಾಡಿದರು. ಅವರು ಸದಾ ಕಾಲ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಸರಳ ಜೀವನ ಸಾಗಿಸಿದರು. ಅವರ ಆದರ್ಶಮಯ ಬದುಕು ಇಡೀ ನಾಡಿಗೆ ಆದರ್ಶಪ್ರಾಯವಾಗಿದೆ. ವಚನ ಸಾಹಿತ್ಯದ ಪ್ರಚಾರದೊಂದಿಗೆ ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಾಪನೆ ಸೇರಿದಂತೆ ಹತ್ತು-ಹಲವಾರು ಸಾಮಾಜಿಕ ಸೇವೆ ಸಲ್ಲಿಸಿದ್ದು ಸ್ಮರಣೀಯ ಎಂದರು.
ಪ್ರತಿಯೊಬ್ಬರೂ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದಾಗ ಬದುಕು ಆದರ್ಶಪ್ರಾಯವಾಗುತ್ತದೆ. ಬಸವನಾಡಿನವರಾದ ನಾವೆಲ್ಲರೂ ಬಸವಾದಿ ಶರಣರ ವಚನಗಳ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ನ್ಯಾಕ್ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಪಿ.ಧಡೇಕರ, ಐಕ್ಯೂಎಸಿ ಹಾಗೂ ರಾಜ್ಯಶಾಸ್ತ್ರದ ಮುಖ್ಯಸ್ಥ ಪ್ರೊ.ಡಿ.ಎನ್.ಕೊನಂತಲಿ, ಎನ್ಎಸ್ಎಸ್ ಹಾಗೂ ಸಮಾಜಶಾಸ್ತ್ರ ಮುಖ್ಯಸ್ಥ ಡಾ.ವೈ.ಬಿ.ನಾಯಕ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಂದ್ರಗೌಡ ಕೆ., ವಿದ್ಯಾರ್ಥಿ ಒಕ್ಕೂಟ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಡಿ.ಎಸ್.ಲಗಳಿ, ಪ್ರೊ.ಎಸ್.ಜೆ.ಸೂರ್ಯವಂಶಿ, ಪ್ರೊ.ಪಿ.ಎಸ್.ನಾಟೀಕಾರ, ಪ್ರೊ.ಜಯರಾಮರಡ್ಡಿ, ಪ್ರೊ.ಎಂ.ಆರ್.ಮಮದಾಪೂರ, ಪ್ರೊ.ಪಿ.ಎಸ್.ಹೊರಕೇರಿ, ಡಾ.ಎಸ್.ಬಿ.ಜನಗೊಂಡ, ಪ್ರೊ.ಆರ್.ಎನ್.ರಾಠೋಡ, ಮಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

