ವಿಜಯಪುರ: ವಚನ ಸಾಹಿತ್ಯ ಹಾಗು ಶರಣ ಸಂಸ್ಕೃತಿ ಇಂದಿನ ಜೀವನಕ್ಕೆ ತೀರಾ ಅತ್ಯಗತ್ಯ. ಇಂದಿನ ಯಾಂತ್ರಿಕ ಯುಗದಲ್ಲಿಯೂ ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ.
ಗಡಿನಾಡ ಭಾಗದಲ್ಲಿ ಕನ್ನಡ ಸಾಹಿತ್ಯವನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯ ಗಡಿನಾಡ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಡುತ್ತಿದೆ ಎಂದು ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಷ ಛಾಯಾಗೋಳ ಅಭಿಪ್ರಾಯ ವ್ಯಕ್ತಪಡಿಸಿದರು
ಜಿಲ್ಲಾ, ತಾಲೂಕ, ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ದಿ: ಶಿವಮೂತೆ೯ಪ್ಪ ಅ ಪಾಟೀಲ ದತ್ತಿ. ದತ್ತಿ ದಾನಿಗಳಾದ ಡಾ: ಶಿವಲಿಂಗಪ್ಪ ಶಿವಮೂತೆ೯ಪ್ಪ ಪಾಟೀಲ ವಿಜಯಪುರ
ವಿಷಯ: ಕನ್ನಡ ವಚನ ಸಾಹಿತ್ಯ ಕುರಿತು ಚಿಂತನ ಗೋಷ್ಠಿ.
ದಿ:ದುಂಡಪ್ಪ ವೀರಭದ್ರಪ್ಪ ಸಕ್ರಿ ದತ್ತಿ: ದತ್ತಿದಾನಿಗಳಾದ ವೀರಭದ್ರಪ್ಪ ದುಂಡಪ್ಪ ಸಕ್ರಿ ವಿಷಯ. ಶರಣ ಸಂಸ್ಕೃತಿ. ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಸದಾ ಕನ್ನಡ ಪರ ಕೆಲಸ ಮಾಡಿದ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಬೆಳವಣಿಗೆಗೆ ಕಾರಣವಾಗಿದ್ದಾರೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಪ್ರೊ ದೊಡ್ಡಣ್ಣ ಬಜಂತ್ರಿ ಮಾತನಾಡಿ ವಚನಗಳಿಗೆ ಮನ ಪರಿವತ೯ನೆ ಮಾಡುವ ಶಕ್ತಿಯಿದೆ. ಕಾಯಕ ಮತ್ತು ದಾಸೋಹ ವಚನ ಸಾಹಿತ್ಯದ ಶ್ರೇಷ್ಠ ಸಿದ್ಧಾಂತಗಳು ಎಂದರು.
ವಚನ ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಶರಣ ಚಿಂತಕ ಎಂ ಬಿ ಕಟ್ಟಿಮನಿ ವಚನ ಸಾಹಿತ್ಯ ಅಮೂಲ್ಯವಾದುದು. ಸಾಮಾನ್ಯ ವ್ಯಕ್ತಿಗಳು ಕೂಡ ಸಾಹಿತ್ಯ ರಚಿಸುವಂತೆ ಪ್ರೇರಣೆ ನೀಡಿದ್ದು ವಚನ ಸಾಹಿತ್ಯ. ಪ್ರತಿಷ್ಟೆಗಾಗಿ ಬದುಕದೆ ಸಾಮಾಜಕ್ಕಾಗಿ ಬದುಕಿದವರು ಶರಣರು ಎಂದರು.
ಶರಣ ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದ ಸಾಹಿತಿ ಕವಿತಾ ಕಲ್ಯಾಣಪ್ಪಗೋಳ ಮಾತನಾಡಿ ನಡೆ-ನುಡಿ ಒಂದಾಗಿ ಬದುಕಿದವರು ಶರಣರು. ಜನಸಾಮಾನ್ಯರ ನೋವನ್ನು ಅರಿತು, ಜಾತಿ ಮತ್ತು ವೃತ್ತಿ ತಾರತಮ್ಯವಿಲ್ಲದೇ ನರನನ್ನು ಹರನನ್ನಾಗಿ ಮಾಡಿದವರು ಶರಣರು ಎಂದರು.
ವೇದಿಕೆಯಲ್ಲಿದ್ದ ಹಿರಿಯ ನ್ಯಾಯವಾದಿ ಉಸ್ಮಾನಬಾದಶಾಹ ಆಲಗೋರ, ಮಹಮ್ಮದ ಸರ್ದಾರ್ ಅಲಿಖಾನ್, ವಿಶ್ರಾಂತ ಶಿಕ್ಷಕ ಅಮೋಘಸಿದ್ಧ ಪೂಜಾರ,ಶರಣ ಚಿಂತಕಿ ಭಾಗಿರಥಿ ಶಿಂಧೆ,ಮಾತನಾಡಿದರು.
ಜಿಲ್ಲಾ ದತ್ತಿ ಸಂಚಾಲಕ ರಾಜಸಾಬ್ ಶಿವನಗುತ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲಿಕಾರ ವೇದಿಕೆಯಲ್ಲಿದ್ದರು. ಶಾಂತಾ ವಿಭೂತಿ ಪ್ರಾರ್ಥಿಸಿದರು, ಮಹಮ್ಮದ ಗೌಸ್ ಹವಾಲ್ದಾರ ಸ್ವಾಗತಿಸಿ ಗೌರವಿಸಿದರು, ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು,
ಅನ್ನಪೂರ್ಣ ಬೆಳ್ಳೆನವರ ನಿರೂಪಿಸಿದರು,ಶೋಭಾ ಬಡಿಗೇರ ವಂದಿಸಿದರು.
ಕಾರ್ಯಕ್ರಮದಲ್ಲಿ ವಿ. ಎಂ. ಬಗಾಯತ ಬಿ.ಎಂ ಅಜೂರ, ಸಿದ್ದು ಸಾವಳಸಂಗ, ಭಾರತಿ ಸಾವಳಸಂಗ,ಅಭಿಷೇಕ್ ಚಕ್ರವರ್ತಿ, ಶಿಲ್ಪಾ ಮಾಯಾಚಾರಿ, ಶ್ರೀಮತಿ ಲತಾ ಗುಂಡಿ, ಕುಮಾರಿ ಗಂಗಮ್ಮ ರೆಡ್ಡಿ, ಜಂಗಮಶೆಟ್ಟಿ ಕೆ ಎಸ್ ಹನುಮಾಣಿ ಜಿಎಸ್ ಬಳ್ಳೂರ್, ಎಸ್ ವಿ ನಾಡಗೌಡ, ಯುವರಾಜ್ ಚೊಳಕೆ, ವಿಜಯಲಕ್ಷ್ಮಿ ಹೆಚ್, ಆರ್ ಎಂ ದೊಡ್ಡಮನಿ, ಲಕ್ಷ್ಮಿ ಕಾತ್ರಾಳ, ಬಸವರಾಜ ಕಂಕನವಾಡಿ, ಪ್ರದೀಪ್ ನಾಯ್ಕೋಡಿ, ಅರ್ಜುನ ಶಿರೂರ್, ಶಿಲ್ಪಾ ಮಾಯಾಚಾರಿ ಪ್ರವೀಣ್ ಬಡಿಗೇರ, ಮಹಾದೇವಿ ತೆಲಗಿ, ಪರಸು ಚಲವಾದಿ, ಆಲಿಸಾಬ ಖಡಕೆ ಕಮಲಾ ಮುರಾಳ ಚೈತನ್ಯ ಮುದ್ದೇಬಿಹಾಳ ಮತ್ತಿತರರು ಉಪಸ್ಥಿತರಿದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

