ಇಂಡಿ: ಕಳೆದ ಹಂಗಾಮಿನಲ್ಲಿ ತೊಗರಿ ಬೆಳೆಗೆ ಇನ್ಸುರೆನ್ಸ ಕಟ್ಟಿ ನಾಲ್ಕು ಲಕ್ಷ ೫೦ ಸಾವಿರ ರೂ ಪಡೆದಿದ್ದಾನೆ ಎಂದು ಕೃಷಿ ಸಹಾಯಕ ಅಧಿಕಾರಿ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.
ಪಟ್ಟಣದ ಕೃಷಿ ಅಧಿಕಾರಿಗಳ ಕಚೇರಿಯಲ್ಲಿ ತಾಲೂಕಿನ ಸಾತಲಗಾಂವ ಪಿಎ ರೈತ ಸಾಹೇಬರಾವ ರಾವುತರಾಯ ಪಾಟೀಲ ಇವರಿಗೆ ಸಂಬಂದಿತ ಇನ್ಸುರೆನ್ಸ ಪತ್ರ ನೀಡಿ ಮಾತನಾಡುತ್ತಿದ್ದರು.
ರೈತ ಸಾಹೇಬಗೌಡ ಪಾಟೀಲರು ತಮ್ಮ ಹೊಲದಲ್ಲಿ ೪೨ ಎಕರೆ ತೊಗರಿ ಹಾಕಿದ್ದರು. ಮತ್ತು ಪ್ರತಿ ಎಕರೆಗೆ ರೂ ೩೦೦ ಇನ್ಸುರೆನ್ಸ ಕಟ್ಟಿದ್ದರು. ಒಟ್ಟು ೧೨೬೦೦ ರೂ ಇನ್ಸುರೆನ್ಸ ಹಣ ಕಟ್ಟಿದ್ದರು.
ಅವರಿಗೆ ಡಿಶೆಂಬರ್ ತಿಂಗಳಲ್ಲಿ ೨ ಲಕ್ಷ ೮೫ ಸಾವಿರ ರೂ ಹಣ ಜೂನ ತಿಂಗಳಲ್ಲಿ ಮತ್ತು ೧ ಲಕ್ಷ ೬೫ ಸಾವಿರ ಹಣ ಒಟ್ಟು ಎರಡು ಕಂತುಗಳಲ್ಲಿ ಬಂದಿರುತ್ತದೆ ಎಂದರು.
ರೈತ ಸಾಹೇಬಗೌಡ ಪಾಟೀಲರು ಮಾತನಾಡಿ ನಾನು ೨೦೨೦ ರಿಂದ ಪ್ರತಿ ವರ್ಷ ಇನ್ಸುರೆನ್ಸ ಕಟ್ಟುತ್ತ ಬಂದಿದ್ದೇನೆ. ಒಮ್ಮೆಮ್ಮೆ ಮಳೆ ಬಾರದಿದ್ದರೆ ಅಥವಾ ಬೆಳೆಗೆ ರೋಗ ಭಾದೆ ಯಾದರೆ ಎಂದು ಇನ್ಸುರೆನ್ಸ ಕಟ್ಟುತ್ತ ಬಂದಿದ್ದೇನೆ. ಕನಿಷ್ಟ ಗೊಬ್ಬರ, ಬೀಜ, ಯೂರಿಯಾ ಹಣವಾದರೂ ಮರಳಿತು ಎಂಬ ಕಲ್ಪನೆಯಲ್ಲಿ ಕಟ್ಟಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಮಹಾಂತೇಶ ಶೆಟ್ಟಿಣ್ನನವರ, ಪಿ.ಎಸ್.ವಗ್ಗಿ, ಭೀಮರಾಯಗೌಡ ಪಾಟೀಲ, ಗಣೇಶ ನಾಗಶೆಟ್ಟಿ, ಉಮೇಶ ಚಾಂದಕವಟೆ, ಸತೀಶ ಇಂಗಳಗಿ, ಶ್ರೀಶೈಲ ಮಾದರ, ಮಲ್ಲಪ್ಪ ಜಕಾತಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

