ದೇವರಹಿಪ್ಪರಗಿ: ವೃತ್ತಿಯಲ್ಲಿ ನಿವೃತ್ತಿಯವರೆಗೆ ತೃಪ್ತಿಯಿಂದ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ನಿವೃತ್ತಿ ಜೀವನ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಪಟ್ಟಣ ಪಂಚಾಯಿತಿ ನಿವೃತ್ತ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಹೇಳಿದರು.
ಪಟ್ಟಣದ ಪಂಚಾಯಿತಿ ಆವರಣದಲ್ಲಿ ಸೋಮವಾರ ಸೇವಾನಿವೃತ್ತಿ ಹೊಂದಿದ ನಿಮಿತ್ಯ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು, ಪಟ್ಟಣಗಳಲ್ಲಿ ಸರ್ಕಾರಿ ಸೇವೆ ಸಲ್ಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲಿ ಮುಖ್ಯಾಧಿಕಾರಿಯಾಗಿ ವೃತ್ತಿ ಮಾಡಿದವರು ಎಲ್ಲ ವೃತ್ತಿಯೂ ಮಾಡಬಲ್ಲರು. ದಿನನಿತ್ಯ ಕಷ್ಟನಷ್ಟ ಸಾಮಾನ್ಯ. ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಕಾರ್ಯ ನಿರ್ವಹಿಸಬೇಕು. ಜೊತೆಗೆ ತಾಳ್ಮೆ ಬೆಳೆಸಿಕೊಳ್ಳಬೇಕು. ಸುಮಾರು ೯ ವರ್ಷಗಳ ಕಾಲ ಪಟ್ಟಣ ಪಂಚಾಯಿತಿಯಲ್ಲಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ಸೇವೆಯಲ್ಲಿ ಏಳು ಬೀಳುಗಳನ್ನು ಸಹಿಸಿಕೊಂಡು ಸಾರ್ಥಕ ಸೇವೆ ನೀಡಿದ್ದೇನೆ ಎಂದರು.
ಆಡಳಿತಾಧಿಕಾರಿ ಪ್ರಕಾಶ ಸಿಂದಗಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಶಾಂತಯ್ಯ ಜಡಿಮಠ, ಕಾಸುಗೌಡ ಬಿರಾದಾರ(ಜಲಕತ್ತಿ), ರಮೇಶ ಮಸಬಿನಾಳ, ಸಿಂಧೂರ ಡಾಲೇರ, ಸುಮಂಗಲಾ ಸೇಬೆನವರ, ಬಷೀರ್ ಅಹ್ಮದ್ ಬೇಪಾರಿ, ಕಾಶೀನಾಥ ಬಜಂತ್ರಿ, ಕಾಸು ಜಮಾದಾರ ಸೇರಿದಂತೆ ಪ್ರಕಾಶ ಮಲ್ಲಾರಿ, ಸೋಮು ದೇವೂರ, ವಿನೋದ ಚವ್ಹಾಣ, ಮಹಿಬೂಬ್ ಹುಂಡೇಕಾರ, ಜಗದೀಶ ಮಣೂರ ಇತರರು ಇದ್ದರು.
Subscribe to Updates
Get the latest creative news from FooBar about art, design and business.
ದೇವರಹಿಪ್ಪರಗಿ ಪ.ಪಂ ಮುಖ್ಯಾಧಿಕಾರಿ ಮುಲ್ಲಾ ಸೇವಾ ನಿವೃತ್ತಿ ;ಸನ್ಮಾನ
Related Posts
Add A Comment

