ಮುದ್ದೇಬಿಹಾಳ: ಪಟ್ಟಣದ ಸಂತ ಕನಕದಾಸ ಶಾಲೆಯಲ್ಲಿ ಶಾಲಾ ಸಂಸತ್ತು ರಚಿಸಲಾಯಿತು. ಚುನಾವಣಾ ಆಯೋಗದ ನೀತಿ ನಿಯಮಗಳಂತೆ ಚುನಾವಣಾ ದಿನಾಂಕ ಘೋಷಣೆ, ನಾಮಪತ್ರ ಸಲ್ಲಿಕೆಗೆ ಗಡವು, ಹಿಂಪಡೆಯುವಿಕೆಗೆ ಅವಕಾಶ, ಚುನಾವಣಾ ಚಿಹ್ನೆ ನೀಡುವುದು, ಮತ ಪ್ರಚಾರಕ್ಕೆ ಅವಕಾಶ, ಮತದಾನ, ಫಲಿತಾಂಶ ಘೋಷಣೆ ಹೀಗೆ ನಿಯಮಬದ್ಧವಾಗಿ ಚುನಾವಣೆಯ ಎಲ್ಲ ಪ್ರಕ್ರೀಯೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆಯ ಅರಿವು ಮೂಡಿಸಲಾಯಿತು.
ಚುನಾವಣೆಯ ಬಳಿಕ ಮಂತ್ರಿಮಂಡಲ ರಚನೆ ಹಾಗೂ ಖಾತೆ ಹಂಚಿಕೆ, ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಪ್ರಧಾನ ಮಂತ್ರಿಯಾಗಿ ಸಮರ್ಥ ಮಡಿವಾಳರ, ವಾರ್ತಾ & ಕ್ರೀಡಾ ಮಂತ್ರಿಯಾಗಿ ನಕುಲ್ ಇಂಗಳೇಶ್ವರ, ಪರಿಸರ ಸಂರಕ್ಷಣಾ ಮಂತ್ರಿಯಾಗಿ ನಿವೇದಿತಾ ದಡ್ಡಿ, ಸಂಸ್ಕೃತಿಕ & ಪ್ರವಾಸೋದ್ಯಮ ಮಂತ್ರಿಯಾಗಿ ಅಮೃತಾ ಉಪ್ಪಲದಿನ್ನಿ, ಆರೋಗ್ಯಮಂತ್ರಿಯಾಗಿ ಸಾನಿಯಾಬೇಗಂ ನಧಾಪ, ವಿರೋದ ಪಕ್ಷದ ನಾಯಕಿ ಸೃಷ್ಟಿ ಪಣೇದಕಟ್ಟಿ ಆಯ್ಕೆಯಾದರು.
ಈ ಪ್ರಕ್ರೀಯೆಯಲ್ಲಿ ಶಾಲಾ ಬೋಧಕ ಸಿಬ್ಬಂದಿಗಳಾದ ಮುಖ್ಯ ಚುನಾವಣಾ ಅಧಿಕಾರಿಗಳಾಗಿ ಎಮ್.ಎನ್.ಯರಝರಿ, ಸಹ ಚುನಾವಣಾ ಅಧಿಕಾರಿ ಎಮ್.ಸಿ.ಕಬಾಡೆ, ಗೋಪಾಲ ಹೂಗಾರ, ಎಲ್.ಎಚ್.ಗುಬಚಿ, ಬಿ.ಎ.ಬರದೇನಾಳ, ಆರ್.ವಾಯ್.ಪಾಟೀಲ, ಜಿ.ಕೆ.ವಾಲಿಕಾರ, ಬಿ.ವಾಯ್.ಮಳಗೌಡರ ಕರ್ತವ್ಯ ನಿರ್ವಹಿಸಿದರು.
ಶಾಲೆಯ ಕಾರ್ಯದರ್ಶಿ ಬಿ.ಎಸ್.ಮೇಟಿ ಸೇರಿದಂತೆ ಕೆಲ ಪಾಲಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

