ಜಿಲ್ಲಾ ಕಾಂಗ್ರೆಸ್ ಘಟಕದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಸನ್ಮಾನ
ವಿಜಯಪುರ: ಜೂ.೨೭ ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆಗಾಗಿ ವಿಜಯಪುರಕ್ಕೆ ಆಗಮಿಸಿದ್ದ ಸಚಿವ ದಿನೇಶ ಗುಂಡುರಾವ ಅವರು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಲೋಣಿ ರವರು ಹಾಗೂ ಪಕ್ಷದ ಮುಖಂಡರು ಸಚಿವರನ್ನು ಸ್ವಾಗತಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದಿನೇಶ ಗುಂಡುರಾವ ಅವರು, ಪಕ್ಷದ ವತಿಯಿಂದ ಸಚಿವರಾದವರು ತಪ್ಪದೇ ಪಕ್ಷದ ಕಛೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ಮಾಡುವದು ಅತೀ ಅವಶ್ಯ. ಇದರಿಂದ ಕಾರ್ಯಕರ್ತರಿಗೆ ಹುಮ್ಮಸ್ಸು ಬರುತ್ತದೆ. ಅವರ ಕೆಲಸ ಕಾರ್ಯಗಳ ಬಗ್ಗೆ ಸ್ಪಂದಿಸುವದು ಸಚಿವರಾದ ನಮ್ಮ ಕರ್ತವ್ಯ ಎಂದು ಹೇಳಿದರು.
ಪಕ್ಷದ ಜಿಲ್ಲಾ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಅಂಗ ಘಟಕಗಳ ಅಧ್ಯಕ್ಷರುಗಳು ಹಾಗೂ ಪಕ್ಷದ ಮುಖಂಡರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ನಾಗಠಾಣ ಶಾಸಕರಾದ ವಿಠ್ಠಲ ಕಟಕಧೋಂಡ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಕೆಪಿಸಿಸಿ ಸದಸ್ಯರಾದ ಅಬ್ದುಲ್‌ಹಮೀದ ಮುಶ್ರೀಫ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹ್ಮದರಫೀಕ ಟಪಾಲ, ಡಾ.ಪ್ರಭುಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಸ ಛಾಯಾಗೋಳ, ಆಜಾದ ಪಟೇಲ, ಸುಭಾಸ ಕಾಲೇಬಾಗ, ಅಫ್ಜಲ್ ಜಾನವೆಕರ, ಡಾ.ವಿಶ್ವನಾಥ ಮಠ, ಡಾ.ಗಂಗಾಧರ ಸಂಬಣ್ಣಿ, ಡಿ.ಎಚ್. ಕಲಾಲ, ಬಿಡಿಎ ಅಧ್ಯಕ್ಷ ಕನ್ನಾನ ಮುಶ್ರೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಮೀರಅಹ್ಮದ ಬಕ್ಷಿ, ಸುರೇಶ ಹಾರಿವಾಳ, ಬಾಳನಗೌಡ ಪಾಟೀಲ, ಕಲ್ಲನಗೌಡ ಬಿರಾದಾರ, ಶಹಜಾನ ಮುಲ್ಲಾ, ಆರ್.ಡಿ. ಹಕ್ಕೆ, ಅಂಗ ಘಟಕಗಳ ಅಧ್ಯಕ್ಷರಾದ ವಿದ್ಯಾರಾಣಿ ತುಂಗಳ, ನಿಂಗಪ್ಪ ಸಂಗಾಪೂರ, ರಾಜೇಶ್ವರಿ ಚೋಳಕೆ ಶಂಕರಸಿಂಗ ಹಜೇರಿ, ಮಲ್ಲೇಶಿ ನಾವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಾಹೇಬಗೌಡ ಬಿರಾದಾರ, ರಜಾಕ ಹೊರ್ತಿ, ವಸಂತ ಹೊನಮೊಡೆ,ಐ ಎಂ ಇಂಡಿಕರ,ಅಫ್ತಾಬ್ ಖಾದ್ರಿ ಇನಾಂದಾರ್, ಚನಬಸಪ್ಪ ನಂದರಗಿ, ಜಾಕೀರ ಮುಲ್ಲಾ, ಹಾಜಿಲಾಲ ದಳವಾಯಿ, ಸಮದ ಸುತಾರ,ದೇಸು ಚವ್ಹಾಣ, ಅಯಾಜ ರೋಜಿವಾಲೆ, ಪಯಾಜ ಕಲಾದಗಿ, ದಸ್ತಗೀರ ಸಾಲೋಟಗಿ, ಮಂಜುಳಾ ಗಾಯಕವಾಡ, ಭಾರತಿ ಹೊಸಮನಿ, ಗಂಗುಬಾಯಿ ಧುಮಾಳೆ, ವಿದ್ಯಾ ಮುಳಸಾವಳಗಿ, ಶಕೀಲಾ ರಿಸಾಲದಾರ, ಚನ್ನಮ್ಮ ಚೌರ, ದಾನಮ್ಮ ಜತ್ತಿ, ಅಂಜಲಿ ಭೋವಿ, ಪ್ರಕಾಶ ಕಟ್ಟಿಮನಿ, ಇಲಿಯಾಸಅಹ್ಮದ ಸಿದ್ದಿಕಿ, ಸೈಫನ ಡಾಂಗೆ, ಫಿರೋಜ್ ಶೇಖ್,ಕಲ್ಲಪ್ಪ ಪಾರಶೆಟ್ಟಿ, ಎ.ಆರ್. ಕೆಂಬಾವಿ, ರಮಜಾನ ಹೆಬ್ಬಾಳ, ದಿಲೀಪ ಪ್ರಭಾಕರ, ಗುಲಾಬ ಚವ್ಹಾಣ, ಎಂ.ಎ. ಬಕ್ಷಿ, ಎ.ಪಿ. ನಿಂಬರಗಿ, ಚಂದು ರಾಠೋಡ, ಅಕಬರ ನಾಯಕ, ನಾರಾಯಣ ವಾಘಮೊಡೆ, ತಾಜುದ್ದೀನ ಖಲೀಫಾ, ರಜಾಕ ಕಾಖಂಡಕಿ, ಹುಸೇನ ವಾಲಿಕಾರ, ಪ್ರದೀಪ ಸೂರ್ಯವಂಶಿ, ವಸೀಮ ತಾವರಗೇರಿ, ಚನಬಸಪ್ಪ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

