ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತಾಯಂದಿರರ ಮತ್ತು ಮಕ್ಕಳ ಉತ್ತಮ ಆರೋಗ್ಯದ ಹಿತದೃಷ್ಟಿಯಿಂದ ವಿವಿಧ ರೀತಿಯ ಪೌಷ್ಟಿಕ ಆಹಾರವನ್ನು ಒದಗಿಸುತ್ತಿದೆ ಆದರೆ ಜಿಲ್ಲೆಯ ಬಹುತೇಕ ಅಂಗನವಾಡಿ ಕೇಂದ್ರಗಳು ಅಂಗನವಾಡಿ ಕಾರ್ಯಕರ್ತೆಯರ ಕುಟುಂಬದ ಆರ್ಥಿಕ ಅಭಿವೃದ್ದಿಗೆ ನಿರ್ಮಾಣವಾದಂತೆ ಭಾಸವಾಗುತ್ತಿವೆ.
ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳೇ ಇರುವುದಿಲ್ಲ, ಆದರೂ ಆ ದಿನದ ಹಾಜರಾತಿ ಪೂರ್ತಿಯಾಗಿ ತೋರಿಸಿ ಆ ಮಕ್ಕಳಿಗೆ ಬರುವ ಎಲ್ಲಾ ರೀತಿಯ ಸೌಲಭ್ಯಗಳನ್ನು (ಆಹಾರ ಕಿಟ್) ಹೊರಗಡೆ ಖಾಸಗಿ ವ್ಯಕ್ತಿಗಳಿಗೆ ಮಾರಿಕೊಳ್ಳುತ್ತಿರುವ ಸಂಗತಿ ಜಿಲ್ಲೆಯಾದ್ಯಂತ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಅಂಗನವಾಡಿ ಕೇಂದ್ರಗಳು ಕೇವಲ ಸರಕಾರಕ್ಕೆ ಖೊಟ್ಟಿ ವರದಿ ನೀಡುವ ಕೇಂದ್ರಗಳಾಗಿ ನಿರ್ಮಾಣವಾಗುತ್ತಿರುವುದು ವಿಷಾದನೀಯ ಸಂಗತಿ. ಈ ಕಹಿ ಸತ್ಯವು ತಮಗೂ ಸೇರಿದಂತೆ ಇಲಾಖೆಯ ಬಹುತೇಕ ಸಿಬ್ಬಂದಿಗಳಿಗೆ ತಿಳಿದ ವಿಷಯವೇ ಆದರೂ ಈ ವಿಷಯದ ಬಗ್ಗೆ ತಾವು ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿರುವುದಿಲ್ಲ. ಆದ್ದರಿಂದಾಗಿ ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ ಕರ್ನಾಟಕ ರಾಷ್ಟ ಸಮಿತಿ ಪಕ್ಷವು ತಮ್ಮ ಕಚೇರಿಯ ಮುಂದೆ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಎಚ್ಚರಿಕೆ ನೀಡಿದರು.
ಇದೆ ಸಂದರ್ಭದಲ್ಲಿ ಹಮಿದ ಇನಾಮದಾರ, ವಿಕ್ರಮ್ ವಾಘಮೋರೆ, ದುರ್ಗಪ್ಪ ಬೂದಿಹಾಳ, ಕಾಂತುಗೌಡ ಬೆಂಡವಾಡ, ಪ್ರವೀಣ ಕನಸೇ, ರಾಕೇಶ ಇಂಗಳಗಿ ರಾಘವೇಂದ್ರ ಛಲವಾದಿ, ಸುರೇಂದ್ರ ಕುನಸಲೇ, ಭೀಮಾಶಂಕರ ಕಾಂಬಳೆ, ಲಕ್ಷ್ಮಣ ಚಡಚಣ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
ಅಂಗನವಾಡಿ ಕೇಂದ್ರಗಳ ಅಕ್ರಮಕ್ಕೆ ಕಡಿವಾಣ ಹಾಕಲು ಕೆಆರೆಸ್ ಆಗ್ರಹ
Related Posts
Add A Comment

