ದೇವರಹಿಪ್ಪರಗಿ: ಗ್ರಾಮದ ಮುಖ್ಯರಸ್ತೆಯ ಕಾಮಗಾರಿ ವಿಳಂಬವಾಗಿದ್ದು, ತ್ವರಿತವಾಗಿ ಪೂರ್ಣಗೊಳಿಸಿ ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ರಾಜ್ಯಹೆದ್ದಾರಿ ೪೧ರಲ್ಲಿ ಪ್ರತಿಭಟನಾ ಧರಣಿ ಕೈಗೊಂಡರು.
ತಾಲ್ಲೂಕಿನ ಚಿಕ್ಕರೂಗಿ ಗ್ರಾಮದ ಬಸ್ ನಿಲ್ದಾಣದ ರಾಜ್ಯಹೆದ್ದಾರಿಯಲ್ಲಿ ಶುಕ್ರವಾರ ಸಭೆ ಸೇರಿ, ಮುಖ್ಯ ರಸ್ತೆಯ ಕಾಮಗಾರಿ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ ಮುಳಜಿ ಹಾಗೂ ಎಂ.ಡಿ.ಕಣಮೇಶ್ವರ ಮಾತನಾಡಿ, ಕಳೆದ ಒಂದೂವರೆ ವರ್ಷಗಳ ಹಿಂದೆ ೨೦೨೨-೨೩ನೇ ಸಾಲಿನಲ್ಲಿ ಅಂದಿನ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಭೂಮಿಪೂಜೆ ನೆರವೇರಿಸಿ, ಮುಖ್ಯರಸ್ತೆಯ ಎಡಬದಿ ಚರಂಡಿಗಳ ಸಹಿತ ೫೦೦ ಮೀಟರ್ ಉದ್ದದ ದ್ವೀಪಥ ರಸ್ತೆಗೆ ಚಾಲನೆ ನೀಡಿದ್ದರು. ನಂತರ ಗುತ್ತಿಗೆದಾರರು ರಸ್ತೆಯನ್ನು ಅಗೆದು ನಂತರ ಕಾರ್ಯ ನಿಲ್ಲಿಸಿದರು. ಈಗ ಅಗೆದ ರಸ್ತೆ ಗ್ರಾಮಸ್ಥರಿಗೆ ಶಾಪವಾಗಿ ಕಾಡುತ್ತಿದ್ದು ಅಪಘಾತಗಳಿಗೂ ಆಹ್ವಾನಿಸುವಂತಿದೆ. ಆದ್ದರಿಂದ ಕೂಡಲೇ ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸಿ ರಸ್ತೆ ಎಂದು ಪೂರ್ಣಗೊಳಿಸಲಾಗುವುದು ಎಂಬುದರ ಕುರಿತು ನಿಖರ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಪ್ರಕಾಶ ಸಿಂದಗಿ ಹಾಗೂ ಪಿಎಸ್‌ಐ ಬಸವರಾಜ ತಿಪ್ಪಾರೆಡ್ಡಿ ಗ್ರಾಮಸ್ಥರೊಂದಿಗೆ ಮಾತನಾಡಿ, ಸೋಮವಾರದಂದು ಗುತ್ತಿಗೆದಾರರೊಂದಿಗೆ ಗ್ರಾಮಕ್ಕೆ ಆಗಮಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂಬ ಭರವಸೆ ನೀಡಿದ ನಂತರ ಪ್ರತಿಭಟನಾ ಧರಣಿ ಹಿಂಪಡೆಯಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ಧಗೊಂಡಪ್ಪಗೌಡ ಪಾಟೀಲ, ಸದಸ್ಯರಾದ ಶಶಿಕಾಂತ ಚಂಡಕಿ, ರಾಜಾಸಾಬ್ ಕೆಂಗನಾಳ, ಶರಣಪ್ಪ ಕುಂಬಾರ, ಬಸವರಾಜ ಕುಂಬಾರ, ಡಾ.ಜಿ.ಎಮ್.ಪಾಟೀಲ ವಿಠ್ಠಲಗೌಡ ಬಿರಾದಾರ, ವಿಶ್ವನಾಥ ಚಂಡಕಿ, ಭೀಮರಾಯಗೌಡ ಬಿರಾದಾರ, ರಾಜು ಚಂಡಕಿ, ಬಿ.ವ್ಹಿ.ಬಿರಾದಾರ, ಕುಮಾರಗೌಡ ಬಿರಾದಾರ, ಗಂಗಣ್ಣ ಸಾರವಾಡ, ದೇವಾನಂದ ಬಿರಾದಾರ, ಹಣಮಂತ ಕಡ್ಲೇವಾಡ, ಮಲ್ಲಿಕಾರ್ಜುನ ಕುಂಬಾರ, ಮಲ್ಲಿಕಾರ್ಜುನ ಹೊನ್ನಳ್ಳಿ, ಜಟ್ಟೇಪ್ಪ ಚಂಡಕಿ, ಶ್ರೀಪತಿ ಬಾಗಲಕೋಟ, ಶಶಿಕಾಂತ ಕಾಮಗೊಂಡ, ಈರಣ್ಣಗೌಡ ಬಿರಾದಾರ, ಸಾಯಬಣ್ಣ ಸಿಂದಗಿ, ದೇವಾನಂದ ಅಂಜುಟಗಿ, ಅಣ್ಣಾರಾಯ ಬಾಗಲಕೋಟಿ, ಸಿದ್ಧಾರ್ಥ ಮುಳಸಾವಳಗಿ, ವಿಶ್ವನಾಥ ಇಮ್ಮನ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

