ದೇವರಹಿಪ್ಪರಗಿ: ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಪ್ರಮಖರ ಉಪಸ್ಥಿತಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಯಿತು.
ಪಟ್ಟಣದ ೧೦೦೮ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಗುರುವಾರ ಬೆಳಿಗ್ಗೆ ೯ ಗಂಟೆಗೆ ಆಯೋಜಿಸಲಾಗಿದ್ದ ಜಯಂತಿ ಕಾರ್ಯಕ್ರಮಕ್ಕೆ ಕೆಂಪೇಗೌಡರ ಭಾವಚಿತ್ರದ ಮೆರವಣಿಗೆಗೆ ಪಟ್ಟಣ ಪಂಚಾಯಿತಿ ಆವರಣದಲ್ಲಿ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಶಾಲಾ ಮಕ್ಕಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದ ಮೆರವಣಿಗೆ ಮೊಹರೆ ಹಣಮಂತ್ರಾಯ, ಅಂಬೇಡ್ಕರ್ ವೃತ್ತಗಳ ಮಾರ್ಗವಾಗಿ ಕಲ್ಯಾಣ ಮಂಟಪ ತಲುಪಿತು. ಇಲ್ಲಿ ಉಪನ್ಯಾಸ, ಪಾರಿತೋಷಕ ವಿತರಣೆಗಳು ಜರುಗಿದವು.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಿಗೆ ತಹಶೀಲ್ದಾರ ಪ್ರಕಾಶ ಸಿಂದಗಿ ಆಹ್ವಾನ ನೀಡಿದ್ದರೂ ಬಹುತೇಕರು ಬರದೇ ಇದ್ದು, ಜೊತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದು ಕಂಡು ಬಂತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ ಪ್ರಕಾಶ ಸಿಂದಗಿ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್.ಬಸವರಡ್ಡಿ, ದಲಿತ ಸಂಘರ್ಷ ಸಮೀತಿಯ ಪದಾಧಿಕಾರಿ ಪ್ರಕಾಶ ಗುಡಿಮನಿ ಮಾತನಾಡಿದರು.
ಗ್ರೇಡ-೨ ತಹಶೀಲ್ದಾರ ಎಸ್.ಎಚ್.ರಾಠೋಡ, ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಕಂದಾಯ ನಿರೀಕ್ಷಕ ಸಂಗಮೇಶ ಗ್ವಾಳೇದ, ಎಎಸ್‌ಐ ಕೆ.ಎಚ್.ಉಪ್ಪಾರ, ವಿಜಯಲಕ್ಷ್ಮೀ ನವಲಿ, ಮುತ್ತುರಾಜ್ ಹಿರೇಮಠ, ರಮೇಶ ಈಳಗೇರ, ಪಿಂಟೂ ಭಾಸುತ್ಕರ್ ಸೇರಿದಂತೆ ಶಿಕ್ಷಕ, ಶಿಕ್ಷಕಿಯರು, ಪೊಲೀಸ್ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

