Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವೃತ್ತಪತ್ರಿಕೆಗಳು ಮಾನವ ಕಳಕಳಿಯ ಪ್ರತಿಬಿಂಬಗಳು

ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ನನ್ನ ಸಂಕಲ್ಪ

ವೈದ್ಯಕೀಯ ಚಿಕಿತ್ಸೆಗೆ ನಾವಿನ್ಯತೆಯ ಸ್ಪರ್ಶನೀಡಿ ಆಯುರ್ವೇದ ಉಳಿಸಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಡೆಂಗಿ ಜ್ವರ ನಿಯಂತ್ರಣಕ್ಕೆ ಸೂಕ್ತ ಜಾಗೃತಿ, ತಿಳುವಳಿಕೆ ಮೂಡಿಸಿ
(ರಾಜ್ಯ ) ಜಿಲ್ಲೆ

ಡೆಂಗಿ ಜ್ವರ ನಿಯಂತ್ರಣಕ್ಕೆ ಸೂಕ್ತ ಜಾಗೃತಿ, ತಿಳುವಳಿಕೆ ಮೂಡಿಸಿ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಡೆಂಗಿ ನಿಯಂತ್ರಣಕ್ಕೆ ಲಾರ್ವಾಹಾರಿ ಮೀನು ಬಿಡುವ ಕಾರ್ಯಕ್ರಮಕ್ಕೆ
ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಚಾಲನೆ

ವಿಜಯಪುರ: ಡೆಂಗಿ ನಿಯಂತ್ರಣಕ್ಕಾಗಿ ರಾಜ್ಯದಾದ್ಯಂತ ಹಮ್ಮಿಕೊಂಡ ಪ್ರತಿ ಶುಕ್ರವಾರ ಈಡೀಸ್ ಲಾರ್ವಾ ನಿರ್ಮೂಲನಾ ದಿನ ಹಾಗೂ ಲಾರ್ವಾಹಾರಿ ಮೀನು ಬಿಡುಗಡೆ ಅಭಿಯಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ದಿನೇಶ ಗುಂಡೂರಾವ್ ಅವರು ಶುಕ್ರವಾರ ನಗರದ ದರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಿದರು.
ಇಂದು ನಗರದ ದರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಈ ಕಾರ್ಯಕ್ರಮ ರಾಜ್ಯದಾದ್ಯಂತ ಏಕ ಕಾಲದಲ್ಲಿ ಪ್ರತಿ ಜಿಲ್ಲೆ, ತಾಲೂಕು ಮಟ್ಟಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಮೂಲಕ ಡೆಂಗಿ ರೋಗ ಹರಡದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಡೆಂಗಿ ಜ್ವರದ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಪ್ರತಿ ಗ್ರಾಮದ ಮನೆ-ಮನೆಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕರಿಗೆ ಮನೆಯಲ್ಲಿರುವ ಪಾತ್ರೆಗಳಲ್ಲಿ ನೀರನ್ನು ಹೆಚ್ಚು ದಿನ ತುಂಬಿ ಇಡದಂತೆ ಹಾಗೂ ಮುಚ್ಚಳ ಹಾಕುವಂತೆ, ಸುತ್ತಮುತ್ತಲಿನ ಪರಿಸರದಲ್ಲಿ ಅನಗತ್ಯ ನೀರು ನಿಲ್ಲದಂತೆ ನೋಡಿಕೊಂಡು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳುವಳಿಕೆ ನೀಡಬೇಕು ಎಂದು ಹೇಳಿದರು.
ಮಳೆಗಾಲ ಆರಂಭವಾಗಿರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಮಳೆಯ ನೀರು ಒಂದೇ ಕಡೆ ನಿಲ್ಲದೆ, ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಬಾವಿ, ಕೆರೆ, ಹೊಂಡಗಳಲ್ಲಿ ಲಾರ್ವಾ ಹಾಗರಿ ಮೀನು ಮರಿಗಳನ್ನು ಬಿಡುವುದರಿಂದ ಸೊಳ್ಳೆಗಳು ನಾಶವಾಗಿ ಡೆಂಗಿ ಜ್ವರವನ್ನು ನಿಯಂತ್ರಿಸಬಹುದಾಗಿದ್ದು, ಈ ಕುರಿತು ಸೂಕ್ತ ಜಾಗೃತಿ ಹಾಗೂ ತಿಳುವಳಿಕೆ ಮೂಡಿಸಬೇಕು. ಪ್ರತಿ ಶುಕ್ರವಾರ ಆಶಾ-ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಿ ಲಾರ್ವಾ ಮೀನು ಮರಿ ವಿತರಣೆ ಹಾಗೂ ಫೆಮಿಫಾಸ್ಟ್ ಸಿಂಪರಣೆಗೆ ಕ್ರಮ ಕೈಗೊಳ್ಳಬೇಕು. ಈ ಕಾರ್ಯವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಅನುಷ್ಠಾನಗೊಳಿಸುವಂತೆ ಅವರು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್‌ವಿಬಿಡಿಸಿ ಉಪನಿರ್ದೇಶಕ ಶರೀಫ ಅವರು ಮಾತನಾಡಿ, ರಾಜ್ಯದಲ್ಲಿ ಡೆಂಗಿ ಜ್ವರ ಹೆಚ್ಚು ಕಂಡು ಬಂದಿದ್ದು ಡೆಂಗಿ ಜ್ವರ ನಿಯಂತ್ರಿಸಲು ಪ್ರತಿ ಶುಕ್ರವಾರ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಇದರಿಂದ ಡೆಂಗಿ ಜ್ವರ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಲಾರ್ವಾಹಾರಿ ಮೀನುಮರಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಡೆಂಗಿ ರೋಗ ನಿಯಂತ್ರಣ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ,ಎನ್.ಎಚ್.ಎಮ್ ಎಮ್.ಡಿ ನವೀನ ಭಟ್, ಆಯುಕ್ತರಾದ ಡಿ. ರಂದೀಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕನ್ನಾನ ಅಬ್ದುಲ್ ಹಮೀದ ಮುಶ್ರೀಪ್, ಮಲ್ಲಿಕಾರ್ಜುನ ಲೋಣಿ, ಅಬ್ದುಲ್ ರಜಾಕ ಹೊರ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ, ಡಾ.ಸಂಪತ್ ಗುಣಾರಿ, ಡಾ.ಪಿ.ಎ. ಹಿಟ್ನಳ್ಳಿ, ಡಾ. ಈರಣ್ಣ ಧಾರವಾಡಕರ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ಹಾಗೂ ಇತರರು ಉಪಸ್ಥತರಿದ್ದರು. ನೂರಅಹಮ್ಮದ ಬಾಗವಾನ ಸ್ವಾಗತಿಸಿ ವಂದಿಸಿದರು.
ಸಚಿವರಿಂದ ಜಿಲ್ಲಾಸ್ಪತ್ರೆಗೆ ಭೇಟಿ-ಪರಿಶೀಲನೆ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಜಿಲ್ಲಾ ಆಸ್ಪತ್ರೆಗೆ ಬೆಟಿ ನೀಡಿ ವಿವಿಧ ಕಟ್ಟಡಗಳನ್ನು ವಾರ್ಡ್ ಗಳನ್ನು ಭೇಟಿ ಮಾಡಿ ಕೆಲಸ ಕಾರ್ಯಗಳನ್ನು ಪರಿಶೀಲಿಸಿದರು.
ಪುಟ್ಟರಾಜ ಗವಾಯಿ ಟ್ರಾಮಾ ಸೆಂಟರಕ್ಕೆ ಭೇಟಿ ನೀಡಿ ಅಲ್ಲಿಯ ಕೆಲಸ ಕಾರ್ಯಗಳನ್ನು ಪರಿಶೀಲಿಸಿದ ಅವರು, ಟ್ರಾಮಾ ಕೇಂದ್ರ ಕಾರ್ಯಾರಂಭಕ್ಕೆ ಸೂಚನೆ ನೀಡಿದರು.
ಸೂಪರ್ ಸ್ಪೆಷಾಲಿಟಿ ಕಾಮಗಾರಿಯನ್ನು ಪರಿಶೀಲಿಸಿ ಆದಷ್ಟು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ನೂತನ ೨೫೦ ಬೆಡ್ಡಿನ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಸಂಬಂಧಿಸಿದ ಅಭಿಯಂತರರಿಗೆ ಸೂಚಿಸಿದರು.
ನಂತರ ವಿವಿಧ ವಾರ್ಡ್ ಗಳಿಗೆ ಭೇಟಿ ನೀಡಿದ ಸಚಿವರು, ಅಲ್ಲಿರುವ ರೋಗಿಗಳ ಜೊತೆ ಸಮಾಲೋಚಿಸಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಲ್ಪಿಸಲಾಗುತ್ತಿರುವ ವೈದ್ಯಕೀಯ ಸೇವೆ ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.
ಕಣ್ಣಿನ ವಿಭಾಗ ಮಕ್ಕಳ ವಿಭಾಗ ಡಿ ಎನ್ ಸಿ ಇನ್ನಿತರ ವಿಭಾಗಗಳಿಗೆ ಭೇಟಿ ನೀಡಿ ಅಲ್ಲಿಯ ಕಾರ್ಯದ ಬಗ್ಗೆ ಆಸ್ಪತ್ರೆಯ ಸ್ವಚ್ಛತೆ ಸಿಬ್ಬಂದಿಗಳು ರೋಗಿಗಳ ಜೊತೆ ನಡೆದುಕೊಳ್ಳುವ ರೀತಿ ಇನ್ನಿತರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಶಿವಾನಂದ್ ಮಾಸ್ತಿಹೊಳಿ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಹರ್ಷ ಗುಪ್ತಾ, ಆಯುಕ್ತರಾದ ಡಿ ರಂದೀಪ್, ಅಭಿಯಾನ ನಿರ್ದೇಶಕರಾದ ನವೀನ್ ಭಟ್. ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಿಷಿ ಆನಂದ್ ಸೇರಿದಂತೆ ಆರೋಗ್ಯ ಇಲಾಖೆಯ ಅಪರ ನಿರ್ದೇಶಕರುಗಳು ಜಂಟಿ ನಿರ್ದೇಶಕರುಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ ಆಸ್ಪತ್ರೆಯ ಎಲ್ಲ ವೈದ್ಯರುಗಳು ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವೃತ್ತಪತ್ರಿಕೆಗಳು ಮಾನವ ಕಳಕಳಿಯ ಪ್ರತಿಬಿಂಬಗಳು

ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ನನ್ನ ಸಂಕಲ್ಪ

ವೈದ್ಯಕೀಯ ಚಿಕಿತ್ಸೆಗೆ ನಾವಿನ್ಯತೆಯ ಸ್ಪರ್ಶನೀಡಿ ಆಯುರ್ವೇದ ಉಳಿಸಿ

ಬಾಂಗ್ಲಾದ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ಒದಗಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವೃತ್ತಪತ್ರಿಕೆಗಳು ಮಾನವ ಕಳಕಳಿಯ ಪ್ರತಿಬಿಂಬಗಳು
    In (ರಾಜ್ಯ ) ಜಿಲ್ಲೆ
  • ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ನನ್ನ ಸಂಕಲ್ಪ
    In (ರಾಜ್ಯ ) ಜಿಲ್ಲೆ
  • ವೈದ್ಯಕೀಯ ಚಿಕಿತ್ಸೆಗೆ ನಾವಿನ್ಯತೆಯ ಸ್ಪರ್ಶನೀಡಿ ಆಯುರ್ವೇದ ಉಳಿಸಿ
    In (ರಾಜ್ಯ ) ಜಿಲ್ಲೆ
  • ಬಾಂಗ್ಲಾದ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ಒದಗಿಸಿ
    In (ರಾಜ್ಯ ) ಜಿಲ್ಲೆ
  • ಕರಡಕಲ್ ಗ್ರಾಪಂ ಅಧ್ಯಕ್ಷರಾಗಿ ದೇವಿಂದ್ರಪ್ಪ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಗಣಿತ ಜೀವನದ ಅವಿಭಾಜ್ಯ ಅಂಗ :ಶಿಕ್ಷಕ ಸಂಗನಬಸವ
    In (ರಾಜ್ಯ ) ಜಿಲ್ಲೆ
  • ವಿವಾದಗಳಿಗೆ ಸಂಧಾನದ ಮಾರ್ಗ: ಜ೨ ರಿಂದ ಮಧ್ಯಸ್ಥಿಕೆ ಅಭಿಯಾನ
    In (ರಾಜ್ಯ ) ಜಿಲ್ಲೆ
  • ಮನೆಯಿಂದಲೇ ಇ-ಖಾತಾ ಪಡೆವ ಕುರಿತು ಜಾಗೃತಿ
    In (ರಾಜ್ಯ ) ಜಿಲ್ಲೆ
  • ಕುಡಿವ ನೀರು ಸಮರ್ಪಕ ಪೂರೈಕೆಗೆ ಆಗ್ರಹಿಸಿ ಗ್ರಾಮಸ್ಥರಿಂದ ಮನವಿ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕರು ಜನಸಂಪರ್ಕ ಸಭೆಗೆ ಬರದಂತೆ ಕಾರ್ಯನಿರ್ವಹಿಸಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.