ವಿಜಯಪುರ: ಶಾಲೆ ಕಾಲೇಜುಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡುವುದರಿಂದ ಇತರ ವಿಧ್ಯಾರ್ಥಿಗಳಿಗೆ ಸ್ಪೂರ್ತಿ ಹಾಗು ಪ್ರೇರಣೆ ನೀಡುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಶುಕ್ರವಾರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ತಿಕೋಟಾ ಹಾಗು ಮುರಾರ್ಜಿ ದೇಸಾಯಿ ವಸತಿ ಶಾಲೆ ತಿಕೋಟಾ ಸಂಯುಕ್ತ ಆಶ್ರಯದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ತಿಕೋಟಾದಲ್ಲಿ ಜರುಗಿದ ತಿಕೋಟಾ ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಹಾಗು ಪಿಯುಸಿ ವಿಜ್ಞಾನ, ಕಲಾ. ವಾಣಿಜ್ಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ ಮಾಡುವದು ಸರ್ಕಾರ ಹಾಗು ಸಂಘ ಸಂಸ್ಥೆಗಳ ಕತ೯ವ್ಯವಾಗಿದೆ. ಇದರಿಂದ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ಹಾಗು ಸ್ಪೂರ್ತಿ ನೀಡುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಖ್ಯಾತ ಕೀತ೯ನಕಾರ ಬಾಬುರಾವ ಮಹಾರಾಜ ಹೊನವಾಡ ಮಾತನಾಡಿ, ಮಕ್ಕಳು ಪಠ್ಯಕ್ರಮದ ಅನುಸಾರ ಪರಿಪೂರ್ಣ ಜ್ಞಾನ ಪಡೆಯಬೇಕು. ವಗ೯ದ ಕೋಣೆಯಲ್ಲಿ ಮಗುವಿನ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಡಾ ಸಂಗಮೇಶ ಮೇತ್ರಿ ಮಾತನಾಡಿ, ಮಕ್ಕಳು ಪುಸ್ತಕ ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು. ಓದಿದ ವಿಷಯ ಮನನ ಮಾಡಿಕೊಳ್ಳಬೇಕು. ಭವಿಷ್ಯದ ದೃಷ್ಟಿಯಿಂದ ಹಗಲಿರುಳು ಅಭ್ಯಾಸ ಮಾಡಬೇಕೆಂದರು.
ತಿಕೋಟಾ ಕಸಾಪ ಘಟಕದ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಪ್ರಾಸ್ತಾವಿಕ ಮಾತನಾಡಿದರು.
ತಿಕೋಟಾ ಕಸಾಪ ಗೌರವ ಕಾರ್ಯದರ್ಶಿಗಳಾದ ಎಸ್ ಬಿ ಬಿರಾದಾರ ಹಾಗು ಶಿಲ್ಪಾ ಹಂಜಿ. ವಿಶ್ರಾಂತ ಶಿಕ್ಷಕ ಬಾಪುರಾಯ ದೇವನಾಯಕ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ಶಿಕ್ಷಕ ಎಸ್ ಆರ್ ನಾಟಿಕಾರ ವಹಿಸಿ ಮಾತನಾಡಿದರು.
ಕಸಾಪ ತಿಕೋಟಾ ತಾಲೂಕ ನಿಕಟ ಪೂರ್ವ ಅಧ್ಯಕ್ಷ ಸೋಮಶೇಖರ ಜತ್ತಿ, ಡಾ ಸೂಯ೯ಕಾಂತ ಹೊಸಮನಿ ಮಾತನಾಡಿದರು.
ಗಣಪತಿ ಗಳವೆ, ಚಂದ್ರಶೇಖರ ಹಿರೇಮಠ ವೇದಿಕೆ ಮೇಲಿದ್ದರು.
ಶಿಕ್ಷಕರರಾದ ರೂಪಾ ಪಾಟೀಲ ರಿಯಾಜ ದರೋಜಿ, ಲಿಂಗರಾಜ ಪಾಟೀಲ, ಬಿ ಟಿ ಮಾನೋಜಿ, ಪೋಲೀಸಪಾಟೀಲ, ಧೈಹಿಕ ಶಿಕ್ಷಕ ತುಬಚಿ ಉಪಸ್ಥಿತರಿದ್ದರು.
ತಿಕೋಟಾ ತಾಲೂಕ ಪ್ರೌಢ ವಿಭಾಗದಲ್ಲಿ
ಪ್ರಥಮ: ಮಾಧವಗೌಡ ಝಳಕಿ
ದ್ವಿತೀಯ :ವಷೀ೯ನಿ ಕಲಾದಗಿ
ತೃತೀಯ: ಪ್ರತೀಕಗೌಡ ಝಳಕಿ.
ಪಿಯುಸಿ ಕಲಾ ವಿಭಾಗದಲ್ಲಿ
ಪ್ರಥಮ : ಶೃತಿ ಪೂಜಾರಿ.
ದ್ವಿತೀಯ :ಮಾಂತೇಶ ಧನಗೊಂಡ.
ತೃತೀಯ: ಭಾರತಿ ವೊಡಕೆ. ತ
ತೃತೀಯ:ಭೀಮಣ್ಣ ಜೊತೆಗಿನ.
ಪಿಯುಸಿ ವಾಣಿಜ್ಯ ವಿಭಾಗ.
ಪ್ರಥಮ :ಶಿಲ್ಪಾ ಗೇಹರೂಚ
ದ್ವಿತೀಯ: ದೀಪಾ ಜನಾಯಿ.
ತೃತೀಯ: ಭೀಮಣ್ಣ ಜೋತೆಖಾನ.
ಪಿಯುಸಿ ವಿಜ್ಞಾನ ವಿಭಾಗ.
ರಕ್ಷೀತಾ ರೇವಡಿಹಾಳ.
ದ್ವಿತೀಯ : ಮಾಂತೇಶ ದೂಳಖೇಡ.
ತೃತೀಯ: ಹೇಮಂತ ಸರ್ಕಾರ ಬಹುಮಾನ ಪಡೆದರು
ಇದೇ ಸಂದರ್ಭದಲ್ಲಿ ಸಾಧನೆಗೈದ ಶಿಕ್ಷಕರಾದ ಅಸ್ಲಮ್ ಮುಲ್ಲಾ, ಪೋಲೀಸ ಪಾಟೀಲ ಇವರನ್ನು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನಿಸಿ ಗೌರವಿಸಲಾಯಿತು.
ಅಂಜಲಿ ರಜಪೂತ ಹಾಗು ತಂಡ ಅದ್ಭುತ ರಂಗೋಲಿ ಹಾಕಿ ಮನಸೆಳೆದರು.
ರೂಪಾ ಹೊನಕಟ್ಟಿ ತಂಡ ಸ್ವಾಗತ ಗೀತೆ ಹಾಡಿದರು. ಸಂಗೀತ ಶಿಕ್ಷಕಿ ಪ್ರಾಥ೯ನೆ ಮಾಡಿದರು. ರಿಯಾಜ ದರೋಜಿ ವಂದಿಸಿದರು.
Subscribe to Updates
Get the latest creative news from FooBar about art, design and business.
ವಿದ್ಯಾರ್ಥಿಗಳಿಗೆ ಸ್ಪೂರ್ತಿ-ಪ್ರೇರಣೆ ನೀಡುವ ಪ್ರತಿಭಾ ಪುರಸ್ಕಾರ :ವಾಲಿಕಾರ
Related Posts
Add A Comment

