ದೇವರಹಿಪ್ಪರಗಿ: ಅಂಗನವಾಡಿ ಕೇಂದ್ರದ ಮೂಲಕ ನೀಡಲಾಗುತ್ತಿರುವ ಆರು ಸೇವೆಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಅತ್ಯಂತ ಪ್ರಮುಖ ಸೇವೆಯಾಗಿದೆ ಎಂದು ಬಸವನಬಾಗೇವಾಡಿ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಮಲಾ ಸುರಪುರ ಹೇಳಿದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಉಜ್ವಲ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಶಿಕ್ಷಣಯಾತ್ರೆ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಸವನ ಬಾಗೇವಾಡಿ ಇವರ ಸಹಯೋಗದಲ್ಲಿ ಜರುಗಿದ ಅಂಗನವಾಡಿ ಕಾರ್ಯಕರ್ತೆಯರ ಮೂರು ದಿನಗಳ ಶಾಲಾ ಪೂರ್ವ ಶಿಕ್ಷಣ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.
ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಸರಿಯಾಗಿ ಅನುಷ್ಠಾನಗೊಂಡರೇ, ಪಾಲಕರು ತಾವಾಗಿಯೇ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳಿಸುತ್ತಾರೆ. ಆದರೆ ಇಂದು ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಇಲಾಖೆಯ ಸಹಯೋಗದ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂದ ಶಾಲಾ ಪೂರ್ವ ಶಿಕ್ಷಣದ ಅನುಷ್ಠಾನಕ್ಕೆ ಅಡಚಣೆಯುಂಟಾಗುತ್ತಿದೆ. ಅದಾಗ್ಯೂ ಕಾರ್ಯಕರ್ತೆಯರು ಈ ತರಬೇತಿಯನ್ನು ಪಡೆದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಇದರಿಂದ ನಿಮಗೂ ಹಾಗೂ ಇಲಾಖೆಗೆ ಒಳ್ಳೆಯ ಹೆಸರು ಬರುವಂತಾಗುತ್ತದೆ ಎಂದರು.
ಉಜ್ವಲ ಸಂಸ್ಥೆಯ ಸಂಯೋಜಕ ಸಾಗರ ಘಾಟಗೆ ಮಾತನಾಡಿ, ತಾಲ್ಲೂಕಿನ ಯಾವುದೇ ಮಗು ಶಾಲೆಯಿಂದ ಹೊರಗೆ ಉಳಿಯಬಾರದು. ಈ ನಿಟ್ಟಿನಲ್ಲಿ ಎರಡು ಹಂತದ ತರಬೇತಿಗಳನ್ನು ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಅಕ್ಕಮ್ಮ ಬಿರಾದಾರ, ವಿಜಯಲಕ್ಷ್ಮೀ ಹಿಪ್ಪರಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಮೇಲ್ವಿಚಾರಕರಾದ ಕಮಲಾ ಹುಮನಾಬಾದಿ, ಜ್ಯೋತಿ ಬಿರಾದಾರ, ಸಾವಿತ್ರಿ ಬಾತಖಾನಿ ಸೇರಿದಂತೆ ಸಂಸ್ಥೆಯ ಶಶಿಕಾಂತ ಸುಂಗಠಾಣ, ಕಸ್ತೂರಿಬಾಯಿ ಬಿರಾದಾರ, ಸುರೇಖಾ ಹಿರೇಮಠ, ಭಾಗಣ್ಣ ಹಾಳಕಿ ಇದ್ದರು.
Subscribe to Updates
Get the latest creative news from FooBar about art, design and business.
ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಲಾ ಪೂರ್ವ ಶಿಕ್ಷಣ ತರಬೇತಿಗೆ ಚಾಲನೆ
Related Posts
Add A Comment

