ವಿಜಯಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊಸದಾಗಿ ಮಂಜೂರಾದ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯ(೧೦೦ ವಿದ್ಯಾರ್ಥಿಗಳು), ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ(೧೦೦ ವಿದ್ಯಾರ್ಥಿಯರು)ಕ್ಕಾಗಿ ಬಾಡಿಗೆ ಕಟ್ಟಡಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಸತಿ ನಿಲಯಗಳ ಸಂಖ್ಯಾಬಲಕ್ಕೆ ಅನುಗುಣವಾಗಿ ಸಾಕಷ್ಟು ಸ್ಥಳಾವಕಾಶವಿರುವ ಸುಸಜ್ಜಿತ ಮೂಲಭೂತ ಸೌಕರ್ಯಗಳುಳ್ಳ ( ಹತ್ತು ವಿದ್ಯಾರ್ಥಿಗಳಿಗೆ ಒಂದರಂತೆ ಶೌಚಾಲಯ ಹಾಗೂ ಸ್ನಾನದ ಗೃಹಗಳು, ಸೋಲಾರ್ ವಾಟರ್ ಹೀಟರ್, ಸಾಕಷ್ಟು ಪ್ರಮಾಣದಲ್ಲಿ ನೀರು) ಕಟ್ಟಡಗಳ ಅವಶ್ಯಕತೆಯಿರುವುದರಿಮದ ಆಸಕ್ತಿಯುಳ್ಳ ಕಟ್ಟಡ ಮಾಲೀಕರು ಸರ್ಕಾರ ನಿಗಧಿ ಪಡಿಸಿದ ಮಿತಿಯಲ್ಲಿ ಬಾಡಿಗೆ ಮೊತ್ತಕ್ಕೆ ಬಾಡಿಗೆ ರೂಪದಲ್ಲಿ ಕೊಡಲು ಇಚ್ಚಿಸಿದಲ್ಲಿ ಜುಲೈ ೫ರ ಒಳಗಾಗಿ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಡಿ.ದೇವರಾಜ ಅರಸು ಭವನ, ಜಿಲ್ಲಾ ಪಂಚಾಯತ್ ಕಚೇರಿ ಹತ್ತಿರ ಕನಕದಾಸ ಬಡಾವಣೆ ಇವರಿಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ೦೮೩೫೨-೨೬೭೯೯೩ ಹಾಗೂ ಮೊಬೈಲ್ ಸಂಖ್ಯೆ: ೯೬೧೧೫೧೮೪೭೬ನ್ನು ಸಂಪರ್ಕಿಸಬಹುದು ಎಂದು ವಿಜಯಪುರ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
