ವಿಜಯಪುರ: ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕು ಘಟಕದ ರೈತಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಈರಣ್ಣ ಗುರುನಾಥ ಭಜಂತ್ರಿ ಅವರಿಗೆ ಜೂ.೨೩ರಂದು ಬೆಂಗಳೂರಿನ ಅಕ್ಕಮಹಾದೇವಿ ಸಬಾಂಗಣದಲ್ಲಿ ಜರುಗಿದ ಬೆಳಕು ಸಂಭ್ರಮದ ಕಾರ್ಯಕ್ರಮದಲ್ಲಿ ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಾಷ್ಟ್ರಮಟ್ಟದ ’ರೈತರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಲಬುರ್ಗಿ ಜಿಲ್ಲೆಯಲ್ಲಿ ಈರಣ್ಣ ಭಜಂತ್ರಿ ಅವರ ಹಲವಾರು ವರ್ಷಗಳ ರೈತಪರ ಕಾಳಜಿ, ರೈತಪರ ಹೋರಾಟಗಳ ಗಣನೀಯ ಸಾಧನೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಬೆಳಕು ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ತಿಳಿಸಿದರು.
ಬೆಳಕು ಸಂಭ್ರಮದ ಸರ್ವಾಧ್ಯಕ್ಷೆ, ಸ್ವರಮಧುರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯ ಪ್ರಾಂಶುಪಾಲೆ ಶ್ರೀಮತಿ ಗೌರಿಶಂಕರ ಚಟ್ಟಿ ಸೇರಿದಂತೆ ಹಲವು ಗಣ್ಣರು ವೇದಿಕೆ ಮೇಲಿದ್ದರು.
Subscribe to Updates
Get the latest creative news from FooBar about art, design and business.
ರೈತಸಂಘ ಅಧ್ಯಕ್ಷ ಈರಣ್ಣ ಭಜಂತ್ರಿಗೆ ’ರೈತರತ್ನ’ ಪ್ರಶಸ್ತಿ ಪ್ರದಾನ
Related Posts
Add A Comment

