ಆಲಮಟ್ಟಿ: ಇಲ್ಲಿನ ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಕಚೇರಿ ಎದುರು ನಾನಾ ಬೇಡಿಕೆ ಈಡೇರಿಕೆಗೆ
ಆಗ್ರಹಿಸಿ ಕೃಷ್ಣಾತೀರ ಗುತ್ತಿಗೆದಾರರ ಸಂಘದ ಆಶ್ರಯದಲ್ಲಿ ಜೂ.19ರಿಂದ
ಗುತ್ತಿಗೆದಾರರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೋಹನರಾಜ್ ಕೆ.ಪಿ. ಅವರ ಭರವಸೆ ಮೇರೆಗೆ ಬುಧವಾರ
ಅಂತ್ಯಗೊಳಿಸಿದರು.
ಧರಣಿ ಸ್ಥಳಕ್ಕೆ ಕೆಬಿಜೆಎನ್ಎಲ್ ಎಂಡಿ ಆಗಮಿಸಿದಾಗ ಧರಣಿ ನಿರತರು ತಮ್ಮ ನಾನಾ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಎಂಡಿ ಮೋಹರಾಜ ಕೆ.ಪಿ. ಮಾತನಾಡಿ, ಕಳೆದ ವರ್ಷದಲ್ಲಿ ಕರೆಯಲಾದ ಎಲ್ಲ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕ ಕಾಯ್ದೆ ಅನುಸಾರ ಕ್ರಮಕೈಗೊಂಡು ಕಾಮಗಾರಿಗಳ ಬಿಡ್‌ನಲ್ಲಿ ಭಾಗವಹಿಸಿದ ಗುತ್ತಿಗೆದಾರರ ಮುಂಗಡ ಹಣವನ್ನು
ಆಯಾ ಗುತ್ತಿಗೆದಾರರಿಗೆ ಮರಳಿಸಲಾಗಿದೆ. ಕಾಲುವೆಗಳ ದುರಸ್ತಿ, ನೂತನ ಮುಖ್ಯ ಕಾಲುವೆ, ವಿತರಣಾ ಕಾಲುವೆ, ಸೀಳು ಕಾಲುವೆ, ಉಪಕಾಲುವೆಗಳ ನಿರ್ಮಾಣ ಕಾಮಗಾರಿಗಳನ್ನು ಪ್ಯಾಕೇಜ್
ಪದ್ದತಿಗೆ ಅಳವಡಿಸದೆ ವಿಂಗಡಣೆ ಮಾಡಿ ಟೆಂಡರ್ ಕರೆಯುವುದು ಸೇರಿದಂತೆ ಇತರೆ ಎಲ್ಲ ಬೇಡಿಕೆಗಳನ್ನು ಕಾನೂನು ಚೌಕಟ್ಟಿನಲ್ಲಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಧ್ಯಕ್ಷ ಎಂ.ಎ.ಮೇಟಿ, ಉಪಾಧ್ಯಕ್ಷ ಎಸ್.ಎಸ್.ಗದಿಗೆಪ್ಪಗೌಡರ, ಕಾರ್ಯದರ್ಶಿ ವೈ.ವೈ.ಬಿರಾದಾರ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ, ಖಜಾಂಚಿ ಬಸವರಾಜ
ದಂಡಿನ, ಗೋಪಾಲ ಬಂಡಿವಡ್ಡರ, ಮಹಾಂತೇಶ ಡೆಂಗಿ. ಮಹಾಂತೇಶ ಬೆಳಗಲ್ಲ, ಬಸವರಾಜ ಬಿರಾದಾರ,
ಸಂತೋಷ ಪಾಟೀಲ, ಮುತ್ತು ಕಿರಸೂರ, ಎಂ.ಡಿ.ಆಲಮಟ್ಟಿ, ಮಕಸೂದ ಮಕಾನದಾರ, ಬಿ.ಟಿ.ರಾಠೋಡ,
ಹನುಮಂತ ಪೂಜಾರಿ, ಸಂತೋಷ ಲಮಾಣಿ, ಯಲ್ಲಪ್ಪ ನಾಗರಾಳ, ಸಿ.ಜಿ.ವಿಜಯಕರ,
ವಿ.ಎಂ.ಹಿರೇಮಠ, ಜಕ್ಕಪ್ಪ ಮಾಗಿ, ಟಿ.ಎಸ್.ಅಫಜಲಪುರ, ಕೆ.ವಿ.ಶಿವಕುಮಾರ, ಬಸವರಾಜ
ಬಾದರದಿನ್ನಿ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

