ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುಧಾನಿತ ಬಸವೇಶ್ವರ ಪದವಿಪೂರ್ವ ಕಾಲೇಜು ಹಾಗೂ ಕಲಕೇರಿ ಪೋಲಿಸ್ ಠಾಣೆ ಇವರ ಸಹಯೋಗದಲ್ಲಿ ಬುಧವಾರ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ದದ ಅಂತರಾಷ್ಟ್ರೀಯ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಲಕೇರಿ ಪಿಎಸ್‌ಐ ಗಂಗಾ ಬಿರಾದಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸುಮಾರು ೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿರುವಾಗ ಮನಸ್ಸು ಚಂಚಲತೆಯಿಂದ ಇರುವುದು ಸಾಮಾನ್ಯ. ಯುವ ಪೀಳಿಗೆ ಮಾದಕ ವಸ್ತುಗಳಿಂದ ದೂರವಿದ್ದು ತಮ್ಮ ಉಜ್ವಲ ಭವಿಷ್ಯವನ್ನು ನಿರ್ಮಿಸಿಕೊಳ್ಳುವತ್ತ ಮುಂದಾಗಬೇಕು ಎಂದು ಅವರು ಈ ಸಂದರ್ಬದಲ್ಲಿ ಹೆಳಿದರು.
ಬಸವೆಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ಸಿ ಎಸ್ ಹಿರೇಮಠ, ಪ್ರೋ ಎಸ್ ಎಸ್ ಕಲಶೇಟ್ಟಿ ಮಾತನಾಡಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಮಾದಕವಸ್ತುಗಳ ಕುರಿತ ಬೀತಿ ಪತ್ರಗಳನ್ನು ವಿತರಿಸಿ ನಂತರ ಮಾದಕ ವಸ್ತುಗಳಿಂದ ನಾವು ದೂರವಿರುತ್ತೆವೆ ಎಂಬ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಗುರುರಾಜ್ ಮೆಡೆದಾರ, ಬಿ ಜಿ ಚನಗೊಂಡ, ಶಾಂತವೀರ ಧುರ್ಗಿ,ಆರ್ ಎಂ ಗುಮಶೇಟ್ಟಿ, ವಿರೇಶ ಝಳಕಿ, ಬಸವರಾಜ್ ಕುಂಬಾರ ಪೋಲಿಸ ಇಲಾಖೆಯ ಸಂಗಮೇಶ ಉಪ್ಪಲದಿನ್ನಿ, ರಾಜಕುಮಾರ ಬಿರಾದಾರ, ಉಮೇಶ ಅವರಾದಿ,ಸಿದ್ರಾಮ ಜುಲ್ಪಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

