ವಿಜಯಪುರ: ಬಹುಜನ ದಲಿತ ಸಂಘರ್ಷ ಸಮಿತಿ (ರಿ), ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ ರವರ ೧೩೩ನೇ ವರ್ಷದ ಜಯಂತಿ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಶೈಕ್ಷಣಿಕ ಜಾಗೃತಿ ಸಮಾವೇಶ ಹಾಗೂ ಡಾ. ವಿಜಯಲಕ್ಷ್ಮೀ ಪಾಟೀಲ ರವರು ರಚಿಸಿದ ಅನಿತಾ ದೇಸಾಯಿ ಆ್ಯನ್ ಇಂಡಿಯನ್ ನೋವೆಲಿಸ್ಟ್ ಎಂಬ ಕೃತಿ ಬಿಡುಗಡೆ ಮತ್ತು ಸನ್ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ.ಶೇ.೮೫ ರಷ್ಟು ಮತ್ತು ದ್ವಿತೀಯ ಪಿ.ಯು.ಸಿ.ಶೇ. ೯೦ ರಷ್ಟು ಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಿ : ೩೦-೦೬-೨೦೨೪ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ವಿಜಯಪುರ ನಗರದ ಕಂದಗಲ್ ಹಣಮಂತ್ರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಬಹುಜನ ದಲಿತ ಸಂಘರ್ಷ ಸಮಿತಿ ಮಖಂಡರು, ಕಳೆದ ಎರಡು ದಶಕಗಲಿಂದ ಇಲ್ಲಿಯವರೆಗೆ ಬಹುಜನ ದಲಿತ ಸಂಘರ್ಷ ಸಮಿತಿ (ರಿ) ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬಹುಜನರ ಹಿತಕ್ಕಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುತ್ತಾ ಬಂದಿದೆ. ಆದಕಾರಣ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.೮೫ ರಷ್ಟು ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.೯೦ ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಜೂನ್. ೨೮ರ ಒಳಗಡೆ ತಮ್ಮ ಸ್ವವಿವರಗಳೊಂದಿಗೆ ಮೊಬೈಲ್ ನಂ. ೯೯೮೦೩೦೬೩೭೫, ೭೬೧೯೩೧೦೯೨೬ ಹಾಗೂ ಆರ್ಯಭಟ್ಟ ಕರಿಯರ್ ಅಕಾಡೆಮಿ, ವಿಜಯಪುರ ಮೀನಾಕ್ಷಿ ಚೌಕ್ ಓಂ ಶಾಂತಿ ಕಚೆರಿ ಹತ್ತಿರ, ಮಲಘಾಣ ಬಿಲ್ಡಿಂಗ್, ವಿಜಯಪುರ ಈ ವಿಳಾಸಕ್ಕೆ ಸಂಪರ್ಕಿಸಬಹುದೆಂದು ದಲಿತ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ಪರಶುರಾಮ ಲಂಬು, ಉತ್ತರ ಕರ್ನಾಟಕ ಅಧ್ಯಕ್ಷ ರಾಜಶೇಖರ ಕುದರಿ ಎಂ.ಆರ್. ದೊಡಮನಿ, ಜಿಲ್ಲಾಧ್ಯಕ್ಷರು, ಇವರು ತಿಳಿಸಿದರು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷ ಪರಶುರಾಮ ಗರಸಂಗಿ, ಜಿಲ್ಲಾ ಉಪಾಧ್ಯಕ್ಷರಾದ ಶಿವಶರಣ ಕೆಂಗನಾಳ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ಜಯಶ್ರೀ ಬ್ಯಾಕೋಡ, ಉತ್ತರ ಕರ್ನಾಟಕ ಮಹಿಳಾ ಘಟಕ ಅಧ್ಯಕ್ಷರಾದ ಡಾ.ವಿಜಯಲಕ್ಷ್ಮೀ ಪಾಟೀಲ, ಜಿಲ್ಲಾ ಮಹಿಳಾ ಘಟಕ ಉಪಾಧ್ಯಕ್ಷೆ ಅಕ್ಕಮಹಾದೇವಿ ಪಾಟೀಲ ಇನ್ನಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

