ಬಸವನಬಾಗೇವಾಡಿ: ಭಾರತ ದೇಶವು ಜಗತ್ತಿನ ಅನೇಕ ಕೊಡುಗೆಗಳನ್ನು ನೀಡಿದೆ. ಈ ಕೊಡುಗೆಗಳಲ್ಲಿ ಯೋಗವು ಒಂದು ಅತ್ಯುನ್ನತ ಕೊಡುಗೆಯಾಗಿದೆ ಎಂದು ಸಿವ್ಹಿಲ್ ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಹೇಳಿದರು.
ಪಟ್ಟಣದ ನ್ಯಾಯಾಲಯದ ಮುಂಭಾಗ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿಶ್ವ ಯೋಗ ದಿನಾಚಾರಣೆಯಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪ್ರಾಚೀನರು ನಮ್ಮ ದೇಹದ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವ ಜೊತೆಗೆ ಯಾವಾಗಲೂ ಚೈತನ್ಯದಿಂದ ಇರಲು ಯೋಗವನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದಾರೆ. ಇಂದು ಇಡೀ ಜಗತ್ತಿನಲ್ಲಿ ಯೋಗದ ಮಹತ್ವದ ಗೊತ್ತಾಗಿದೆ. ಯೋಗವು ಶಿಸ್ತನ್ನು ಕಲಿಸುವುದರ ಜೊತೆಗೆ ನಮ್ಮ ಗುರಿ ಸಾದನೆಗೆ ಅತ್ಯಂತ ಬಲವಾದ ಸಾಧನವಾಗಿದೆ. ಯೋಗಕ್ಕಿರುವ ಶಕ್ತಿ ಬೇರೆ ಯಾವ ಔಷಧಿಗೂ ಇಲ್ಲ. ಪ್ರತಿಯೊಬ್ಬರೂ ಯೋಗದ ಮಹತ್ವವನ್ನು ತಿಳಿದುಕೊಂಡು ಪ್ರತಿನಿತ್ಯ ಒಂದು ಗಂಟೆ ಕಾಲ ಯೋಗಾಸ ಮಾಡುವ ಮೂಲಕ ಸುಂದರ ಜೀವನವನ್ನು ರೂಪಿಸಿಕೊಳ್ಳಬೇಕೆಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ ಮಾತನಾಡಿ, ಯೋಗದಿಂದ ರೋಗವನ್ನು ದೂರವಿಡಬಹುದು. ಯೋಗದಿಂದ ಅಗಾಧವಾದ ಜ್ಞಾನವನ್ನು, ಧ್ಯಾನವನ್ನು ಸಂಪಾದಿಸಬಹುದು. ಯೋಗವನ್ನು ನಮ್ಮ ದಿನನಿತ್ಯದ ಬದುಕಿನ ಭಾಗವನ್ನಾಗಿ ಮಾಡಿಕೊಂಡರೆ ಜೀವನ ಆರೋಗ್ಯದಿಂದ ಇರುವ ಜೊತಗೆ ಉಲ್ಲಾಸದಿಂದ ಇರುತ್ತದೆ ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಅವಟಿ ಅವರು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕತೆಯನ್ನು ತೋರಿಸಿ ಅವುಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶೆ ಸೌಮ್ಯ ಹೂಲಿ, ಸಹಾಯಕ ಸರ್ಕಾರಿ ಅಭಿಯೋಜಕ ರಾಹುಲ ಶಾಹ, ಸಹಾಯಕ ಸರ್ಕಾರಿ ಅಭಿಯೋಜಕಿ ರಾಜರಾಜೇಶ್ವರಿ ಸುತಾರ ಇದ್ದರು. ಮಹೇಶ ಕೆ.ಎಸ್. ಸ್ವಾಗತಿಸಿ, ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸುಮಾರು ೬೦ ಜನ ನ್ಯಾಯಾಲಯದ ಸಿಬ್ಬಂದಿ, ನ್ಯಾಯವಾದಿಗಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
ಯೋಗಕ್ಕಿರುವ ಶಕ್ತಿ ಬೇರೆ ಯಾವ ಔಷಧಿಗೂ ಇಲ್ಲ :ನ್ಯಾ.ತೇಜಸ್ವಿನಿ
Related Posts
Add A Comment

