ಮುದ್ದೇಬಿಹಾಳ: ಯೋಗಾಭ್ಯಾಸವನ್ನು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೇ ದಿನನಿತ್ಯ ಅಭ್ಯಾಸಿಸಿದಲ್ಲಿ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು ಎಂದು ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತ್ತಕುಮಾರ ಬಳೂಲಗಿಡದ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಯೋಗದಿಂದ ರೋಗ ಮುಕ್ತ ಎನ್ನುವಂತೆ ದಿನಿನಿತ್ಯ ಯೋಗಾಭ್ಯಾಸ ಮಾಡುವದರಿಂದ ಎಲ್ಲ ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮನಸ್ಸು ಮತ್ತು ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು ಎಂದರು.
ಕಿರಿಯ ಶ್ರೇಣಿ ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಆಹೇರಿ, ನ್ಯಾಯವಾದಿಗಳ ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ ಮಾತನಾಡಿದರು. ನ್ಯಾಯವಾದಿ ಎಂ.ಆರ್.ಪಾಟೀಲ, ನ್ಯಾಯಾಲಯದ ಸಿಬ್ಬಂದಿಗಳಾದ ಎಸ್.ಎಸ್.ಬಳಗಾನೂರ, ಅರವಿಂದ ಕುಂಬಾರ, ನರ್ಮದಾ ಮರೋಳ, ಎಲ್.ಬಿ.ಗುರಿಕಾರ, ಜೆ.ಎಸ್.ಹೆಬ್ಬಾಳ, ರೇಣುಕಾ ಜಾನಮಟ್ಟಿ, ಅಕ್ಕಮಹಾದೇವಿ ಪಟ್ಟಣಶೆಟ್ಟಿ, ಬಿ.ಎಂ.ಖಾಜಿ, ಆಯ್.ಆರ್.ಹಿರೇಮಠ, ಶ್ರೀಕಾಂತ ಸಂಕೀನ, ಪಾಂಡು ಚೌದರಿ, ಮಹಾಂತೇಶ ಹಚರೆಡ್ಡಿ, ಇಸಾಕ ಒಂಟಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

