ವಿಜಯಪುರ: ಇಂಡಿ ಸರಕಾರಿ ಆದರ್ಶ ವಿದ್ಯಾಲಯದಲ್ಲಿ 2024-25 ನೇ ಸಾಲಿನಲ್ಲಿ 7, 8 ಮತ್ತು 9ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ಮಾನ್ಯ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ರವರ ಸುತ್ತೋಲೆಯ ಮೇರೆಗೆ ತರಗತಿವಾರು ಮತ್ತು ರೋಸ್ಟರ್ ಆಧಾರದ ಮೇಲೆ ಈ ಸಂಸ್ಥೆಯಲ್ಲಿ ಖಾಲಿ ಇರುವ ತರಗತಿವಾರು ಸೀಟುಗಳು ಅರ್ಜಿ ಕರೆಯಲಾಗಿದೆ.
7ನೇ ತರಗತಿಯಲ್ಲಿ 22 ಸೀಟುಗಳು, 8ನೇ ತರಗತಿಯಲ್ಲಿ 08 ಸೀಟುಗಳು, 9ನೇ ತರಗತಿಯಲ್ಲಿ 08 ಸೀಟುಗಳು. ಖಾಲಿ ಇದ್ದು, ಆಸಕ್ತಿಯುಳ್ಳ ವಿದ್ಯಾರ್ಥಿಗಳು ಜೂನ 20 ರಿಂದ ಜೂನ 26 ವರೆಗೆ ಸರಕಾರಿ ಆದರ್ಶ ವಿದ್ಯಾಲಯ ಇಂಡಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿಕೊಳ್ಳಲು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ ಮತ್ತು ಮುಖ್ಯೋಪಾಧ್ಯಾಯ ಎಸ್.ಜಿ.ಬನಸೋಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪರೀಕ್ಷಾ ದಿನಾಂಕ ಜೂನ 29, ಪರೀಕ್ಷಾ ಸಮಯ: 10.30 ರಿಂದ 01.00 ಗಂಟೆಯವರೆಗೆ, ಹೆಚ್ಚಿನ ಮಾಹಿತಿಗಾಗಿ 8970716054 , 6360904885 ಈ ನಂಬರಗಳಿಗೆ ಸಂಪರ್ಕಿಸಿ.
Subscribe to Updates
Get the latest creative news from FooBar about art, design and business.
Related Posts
Add A Comment
