ಮುದ್ದೇಬಿಹಾಳ: ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇರುವ ಸಿದ್ದೇಶ್ವರ ಹೋಟಲ್ ನಲ್ಲಿ ಬುಧವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಕಾಮರಾಜ ಬಿರಾದಾರ ಅವರನ್ನ ಸಾಹಿತಿಗಳು, ಕನ್ನಡಾಭಿಮಾನಿಗಳು, ಪ್ರಗತಿಪರ ಚಿಂತಕರು, ಅವರ ಅಭಿಮಾನಿಗಳು ಸೇರಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ ಮಾತನಾಡಿ ತಾಲೂಕಿನಲ್ಲಿ ಕನ್ನಡದ ರಥ ಎಳೆಯುವ ಸಾರಥ್ಯ ಸೂಕ್ತವಾಗಿರುವ ವ್ಯಕ್ತಿಗೆ ಸಿಕ್ಕಿರುವದು ಸಂತೋಷ ತಂದಿದೆ. ಹೋರಾಟಗಾರರಾಗಿ, ಮಾಜಿ ಪುರಸಭೆ ಸದಸ್ಯರಾಗಿ, ಯುವ ಮುಖಂಡರಾಗಿ ಕಾಮರಾಜ ಅವರು ಸಾಕಷ್ಟು ಕ್ಷೇತ್ರಗಳಲ್ಲಿ ಅನುಭವ ಹೊಂದಿದ್ದಾರೆ. ಅವರ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗುವ ವಿಶ್ವಾಸ ನಮಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಮರಾಜ ಅವರು, ಈ ಹುದ್ದೆಯನ್ನು ನಾನು ನಮ್ಮ ತಂದೆಯವರ ಪಾದಕ್ಕೆ ಅರ್ಪಿಸುವೆ. ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಈ ಹುದ್ದೆಗೆ ಆಯ್ಕೆ ಮಾಡಿದ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ಅವರನ್ನು ಮೊದಲು ಮಾಡಿ ಎಲ್ಲ ಕನ್ನಡಾಭಿಮಾನಿಗಳಿಗೆ, ಸಾಹಿತಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಯಾವುದೇ ಅಧ್ಯಕ್ಷ ಹುದ್ದೆಯಿದ್ದರೂ ಅದೊಂದು ಮುಳ್ಳಿನ ಹಾಸಿಗೆ ಇದ್ದಂತೆ. ಈ ಸ್ಥಾನವನ್ನು ನಿಭಾಯಿಸಿಕೊಂಡು ಹೋಗಲು ನಾನು ಎಲ್ಲ ಸಾಹಿತಿಗಳ, ಕನ್ನಡಾಭಿಮಾನಿಗಳ ಸಹಕಾರವನ್ನು ಕೋರುವೆ. ಎಲ್ಲರೂ ಸೇರಿ ಕನ್ನಡದ ತೇರದನ್ನು ಎಳೆಯೋಣ ಎಂದರು.
ಇದೇ ವೇಳೆ ಪ್ರೊ ಐ.ಬಿ.ಹಿರೇಮಠ, ಬಾಗವಾನ ಬ್ಯಾಂಕ್ ಅಧ್ಯಕ್ಷ ಪಿಂಟು ಸಾಲಿಮನಿ, ಶಿಕ್ಷಕ ಜೆ.ಡಿ.ಮುಲ್ಲಾ, ಮತ್ತೀತರರು ಮಾತನಾಡಿದರು. ಅಶೋಕ ಚಟ್ಟೇರ, ಸದಾಶಿವ ಮಠ, ಹರೀಶ ಬೆವೂರ, ಜಗದೀಶ ಲಕ್ಷಟ್ಟಿ, ರವಿ ಅಮರಣ್ಣವರ, ಹುಸೇನ ಮುಲ್ಲಾ, ಬಸಲಿಂಗಪ್ಪಣ್ಣ ರಕ್ಕಸಗಿ, ಬಬಲು ಹುಣಚಗಿ, ಮುತ್ತಣ್ಣ ರಾಯಗೊಂಡ, ಮಹೆಬೂಬ ಗೊಳಸಂಗಿ, ಟಿ.ಭಾಸ್ಕರ, ಶ್ರೀಶೈಲ ಪೂಜಾರಿ, ಶ್ರೀಕಾಂತ ಹಿರೇಮಠ, ವಿನಾಯಕ ಭಟ್ಟ, ರಂಜಾನ ನದಾಫ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

