ಮುದ್ದೇಬಿಹಾಳ: ಪೆಟ್ರೋಲ್, ಡೀಸಲ್ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಭಾಜಪಾ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ಶುರುವಾದ ಪ್ರತಿಭಟನಾ ಮೆರವಣಿಗೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಶೀಲ್ದಾರ ಕಚೇರಿಯ ವರೆಗೆ ಸಾಗಿತು. ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಜಗದಿಶ ಪಂಪಣ್ಣವರ, ಸಂಗಮ್ಮ ದೇವರಳ್ಳಿ, ಸಿದ್ದರಾಜ ಹೊಳಿ ಮತ್ತೀತರರು ಮಾತನಾಡಿ ಕಾಂಗ್ರೇಸ್ ಸರ್ಕಾರಕ್ಕೆ ಕುಟುಕಿದರು. ನೇಹಾ ಹತ್ಯೆ ಕೊಲೆ ಪ್ರಕರಣ ಪ್ರಕರಣ ಸೇರಿದಂತೆ ಬೆಲೆ ಏರಿಕೆ, ಗ್ಯಾರಂಟಿಗಳ ವಿರುದ್ಧ ಹರಿಹಾಯ್ದರು.
ಪುರಸಭೆ ಸದಸ್ಯೆ ಸಹನಾ ಬಡಿಗೇರ ಮನವಿ ಪತ್ರ ಓದಿದರು.
ಈ ವೇಳೆ ಮುತ್ತಣ್ಣ ಹುಗ್ಗಿ, ಸಂಜು ಬಾಗೇವಾಡಿ, ಹಣಮಂತ ನಲವಡೆ, ರಾಜು ಬಳ್ಳೊಳ್ಳಿ, ಶೇಖರ ಢವಳಗಿ, ಗುರು ರಾಯಗೊಂಡ, ಪರಶುರಾಮ ನಾಲತವಾಡ, ಮುತ್ತಣ್ಣ ಹುಗ್ಗಿ, ಪ್ರೀತಿ ಕಂಬಾರ, ಸುಭಾಷ ಕಟ್ಟಿಮನಿ, ಶಂಕರ ಡಮನಾಳ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
ಬೆಲೆ ಏರಿಕೆ ಹಿಂದಕ್ಕೆ ಪಡೆಯಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ
Related Posts
Add A Comment

