ಚಡಚಣ: ಪಟ್ಟಣದ ಚೌಡೇಶ್ವರಿ ದೇವಾಸ್ಥಾನದಲ್ಲಿ ಹೊನ್ನುಗ್ಗಿ ನಿಮಿತ್ಯ ನೂರಕ್ಕೂ ಅಧಿಕ ಸುಮಂಗಲೆಯರ ಉಡಿತುಂಬುವುದು ಹಾಗೂ ಹಟಗಾರ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ವಿರಕ್ತ ಮಠದ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಪಟ್ಟಣದಲ್ಲಿ ಬಹುಸಂಖ್ಯಾತರಾಗಿದ್ದ ಹಟಗಾರ ಸಮುದಾಯ ಸರಳ ಸಜ್ಜನೆಕೆಗೆ ಹೆಸರಾಗಿದ್ದಾರೆ. ಪ್ರತಿ ವರ್ಷ ಹೊನ್ನುಗ್ಗಿ ನಿಮಿತ್ಯ ಸಮುದಾಯದ ಎಲ್ಲ ಸುಮಂಗಲೆಯರನ್ನು ದೇವಾಸ್ಥಾನಕ್ಕೆ ಕರೆತಂದು ಉಡಿತುಂಬಿ ತಾಯಿ ಚೌಡೇಶ್ವರಿ ದೇವಿ ಆಯುಷ್ಯ ಆರೋಗ್ಯ ಕಲ್ಪಿಸುವಂತೆ ಆಶಿರ್ವಾದ ಪಡೆದುಕೊಳ್ಳುವದರ ಜೊತೆಗೆ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರತಿಬಾ ಪುರಸ್ಕಾರ ಮಾಡಿ ಗೌರವಿಸುವ ಕಾರ್ಯ ಮಾಡುತ್ತಾ ಬಂದಿರುವುದು ಶ್ಲಾಘನನೀಯ ಕಾರ್ಯ ಎಂದರು.
ಸಮಾಜದ ಅಧ್ಯಕ್ಷ ಬಸವರಾಜ ಯಂಕಂಚಿ ಮಾತನಾಡಿ, ಪಟ್ಟಣದಲ್ಲಿ ಸುಮಾರು 500ಕ್ಕೂ ಹೆಚ್ಚು ಕುಟುಂಬವಿರುವ ನಮ್ಮ ಸಮುದಾಯ ಒಗ್ಗಟ್ಟಿನಿಂದ ಕೂಡಿದೆ. ಎಲ್ಲರ ಶ್ರಮವಹಿಸಿ ನೂತನ ಬೃಹುತ್ ಮಂಗಲಕಾರ್ಯಾಲಯ ಮುಗಿಸುವ ಮಹತ್ತರ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಗುರುದೇವಾಶ್ರನದ ಯೋಗಾನಂದ ಸ್ವಾಮೀಜಿ, ಮೈಂದರಿಗಿಯ ಮೃತ್ಯೂಂಜಯ ಸ್ವಾಮೀಜಿ ಆಶಿರ್ವಾದ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಂಜೀವ ಐಹೊಳ್ಳಿ, ಮಂಡಲ ಅಧ್ಯಕ್ಷ ಕಾಂತೂಗೌಡ ಪಾಟೀಲ, ಸಮಾಜದ ಕಾರ್ಯದರ್ಶಿ ಗುರುಪಾದಪ್ಪ ಜೀರಂಕಲಗಿ, ಮುಖಂಡರಾದ ಸಿದ್ದು ಮಾಲಾಪೂರ, ಮಲ್ಲಪ್ಪ ಉಮರಾಣಿ, ಮಹಾದೇವ ಯಂಕಂಚಿ, ಬಸವರಾಜ ಭಂಡರಕವಟೆ, ರಾಜೂ ಕೋಟಿ, ಡಾ. ಡಿ,ಬಿ ಕಟಗೇರಿ, ಮಲ್ಲಪ್ಪ ಭಂಡರಕವಟೆ, ವಿಶ್ವನಾಥ ಭಂಡರಕವಟೆ, ಗಂಗಪ್ಪ ಭಂಡರಕವಟೆ, ವಿಶ್ವನಾಥ ಡೋಣಗಾಂವ ಸೇರಿದಂತೆ ಸಮಾಜದ ಮುಖಂಡರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

