ದೇವರಹಿಪ್ಪರಗಿ: ಪಟ್ಟಣದ ಯೋಗ ಉತ್ಸವದಲ್ಲಿ ಸುಮಾರು ಐದು ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಪ್ರಭುಗೌಡ ಬಿ.ಎಲ್.(ಚಬನೂರ) ತಿಳಿಸಿದರು.
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪದವಿಪೂರ್ವ ಕಾಲೇಜಿನ ಆವರಣಕ್ಕೆ ಗುರುವಾರ ಸಾಯಂಕಾಲ ಭೇಟಿ ನೀಡಿ ಪೂರ್ವತಯಾರಿ ವೀಕ್ಷಿಸಿದರು. ಶುಕ್ರವಾರ ಬೆಳಿಗ್ಗೆ ೬ ಗಂಟೆಗೆ ಆರಂಭಗೊಳ್ಳುವ ಯೋಗ ಉತ್ಸವದಲ್ಲಿ ಅಂತರಾಷ್ಟ್ರೀಯ ಯೋಗಾಚಾರ್ಯರಾದ ಬಾಲಗಾಂವ ಗುರುದೇವ ಆಶ್ರಮದ ಅಮೃತಾನಂದ ಸ್ವಾಮೀಜಿ ಪಾಲ್ಗೊಂಡು, ಯೋಗದ ಮಹತ್ವ ತಿಳಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಠಾಧೀಶರು, ಗಣ್ಯರು, ಯೋಗಪಟುಗಳು, ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಶಿಕ್ಷಣ ಇಲಾಖೆ ಸಾವಿರಾರು ವಿದ್ಯಾರ್ಥಿಗಳು, ವಿವಿಧ ಸಂಘಟನೆ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಳಲಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ,ಎಸ್.ಎನ್.ಬಸವರಡ್ಡಿ, ರಮೇಶ ಮಸಬಿನಾಳ, ಕೆ.ಎ.ಸಾಲಕ್ಕಿ, ಕೆ.ಎಸ್.ಕೋರಿ, ಬಸವರಾಜ ತಾಳಿಕೋಟಿ, ಪ್ರವೀಣ ಹುಗ್ಗಿ, ಆಯೂಷ್ ವೈದ್ಯರಾದ ಎಸ್.ಎನ್.ಬಿರಾದಾರ, ಸುರೇಶ ಸಜ್ಜನ, ಆಯ್.ಎಸ್.ಹಿರೇಮಠ, ಗುರುರಾಜ್ ಗಡೇದ, ಕಾಶೀನಾಥ ಯಾಳಗಿ, ಅರವಿಂದ ರಾಠೋಡ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಸಂಗನಗೌಡ ಬಿರಾದಾರ, ಪ್ರಕಾಶ ಮಲ್ಲಾರಿ, ಗಂಗಾಧರ ಬಬಲೇಶ್ವರ, ಮುರ್ತುಜಾ ತಾಂಬೋಳಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

