ಆಲಮಟ್ಟಿ: ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೃಷ್ಣಾ ತೀರ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಇಲ್ಲಿನ ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಠಾವಧಿ ಧರಣಿ ಗುರುವಾರವೂ ಮುಂದುವರೆಯಿತು.
ಧರಣಿ ನಿರತರು ಅರೆಬೆತ್ತಲೆಯಾಗಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಖಜಾಂಚಿ ಬಸವರಾಜ ದಂಡಿನ, ಅಧ್ಯಕ್ಷ ಎಂ.ಎ.ಮೇಟಿ, ಗೋಪಾಲ ಬಂಡಿವಡ್ಡರ ಮಾತನಾಡಿ, ಕಳೆದ ವರ್ಷ ಕರೆದ ಕಾಮಗಾರಿಗಳ ಬಿಡ್‌ನಲ್ಲಿ ಭಾಗವಹಿಸಿದ ಗುತ್ತಿಗೆದಾರರ ಮಂಗಡ ಹಣ ಆಯಾ ಗುತ್ತಿಗೆದಾರರಿಗೆ ಮರಳಿಸದ ಕಾರಣ ಹಾಗೂ ಒಂದು ವರ್ಷದಿಂದ ಯಾವುದೇ ಕಾಮಗಾರಿ ಕರೆಯದ ಗುತ್ತಿಗೆದಾರರ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ನಮ್ಮ ನ್ಯಾಯಯುತ ನಾನಾ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಧರಣಿ ನಡೆಸಲಾಗುತ್ತಿದೆ. ಸಂಬಂಧಿತ ಅಧಿಕಾರಿಗಳು, ಸಚಿವರು ಶೀಘ್ರ ಕ್ರಮಕೈಗೊಳ್ಳಬೇಕು. ಜೂ.೨೨ರಿಂದ ಅಹೋರಾತ್ರಿ ಧರಣಿ ಆರಂಭಿಸಲಾಗುತ್ತಿದ್ದು ೨೫ ರಂದು ಆಲಮಟ್ಟಿಯ ಮುಖ್ಯ ಎಂಜಿನಿಯರ್ ರ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದರು.
ಉಪಾಧ್ಯಕ್ಷ ಶಿವಗೊಂಡಪ್ಪ ಗದಿಗೆಪ್ಪಗೌಡರ, ಪ್ರಧಾನ ಕಾರ್ಯದರ್ಶಿ ಎಚ್.ಬಿ.ಸಂಗಮ, ಬಸವರಾಜ ಬಾದರದಿನ್ನಿ, ರಾಯಪ್ಪ ವಾಲಿಕಾರ, ವಿ.ಎಂ.ಹಿರೇಮಠ, ಹಾಸಿಂಪೀರ ಯಂಡಿಗೇರಿ, ಸಲೀಂ ಮುಲ್ಲಾ, ಕಳಕಪ್ಪ ಮ್ಯಾಗೇರಿ, ನಿಂಗಪ್ಪ ಅಮರಗೋಳ, ರವಿ ಇಟಗಿ, ಭೀಮಸಿ ಬಂಡಿವಡ್ಡರ, ಬಾಬು ಬಂಡಿವಡ್ಡರ, ವೈ.ವೈ.ಬಿರಾದಾರ, ಅಂದಾನಯ್ಯ ಮುಷ್ಠಿಗೇರಿ, ಟಿ.ಎಸ್.ಅಫಜಲಪುರ, ಬಿ.ಪಿ.ರಾಠೋಡ, ವೈ.ಎಚ್.ನಾಗಣ , ಮುತ್ತು ಕಿರಸೂರ, ಸಂತೋಷ ಪಾಟೀಲ, ಮಂಜುನಾಥ ಕುರಗೋಡ, ಮಹಾಂತೇಶ ಬೆಳಗಲ್ಲ, ಮಹಾಂತೇಶ ಬಿಜಾಪುರ, ಎಲ್.ಎಚ್.ಗಡ್ಡಿ, ಎಂ.ಆರ್.ಕಮತಗಿ, ಜಕ್ಕಪ್ಪ ಮಾಗಿ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

