ಕುಡಿವ ನೀರಿನ ಘಟಕ ಕಾರ್ಯಾರಂಭಗೊಳಿಸಿದ ಅಧಿಕಾರಿಗಳು

ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನೀರು ಬಾರದೇ ಇಲ್ಲಿನ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದರು. ಈ ಬಗ್ಗೆ ’ಉದಯರಶ್ಮಿ’ ಪತ್ರಿಕೆಯ ಬುಧವಾರದ ಸಂಚಿಕೆಯಲ್ಲಿ “ಇದ್ದೂ ಇಲ್ಲದಂತಿರುವ ಶುದ್ಧ ನೀರಿನ ಘಟಕ” ಎಂಬ ತಲೆಬರಹದಡಿ ಜೂ.೨೦ ರಂದು ವರದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿ ಕೊಟ್ಟಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಘಟಕವನ್ನು ನಿರ್ವಹಣೆ ಮಾಡುವವರಿಗೆ ತಿಳಿಹೇಳಿ ಕಾಯಿನ್ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದರು.

