ವಿಜಯಪುರ: ಇತ್ತೀಚೆಗೆ ನಡೆದ ಐದನೇ ಮತ್ತು ಎಂಟನೇ ತರಗತಿಯ ಮೌಲ್ಯಾಂಕನ ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯವು ಸೂಸುತ್ರವಾಗಿ ನಡೆದಿದ್ದು ವಿಜಯಪುರ ಗ್ರಾಮೀಣವಲಯದ ಐದನೇ ತರಗತಿ ಮೌಲ್ಯಮಾಪನ ಕಾರ್ಯವು ನಗರದ ಮದಿನಾ ನಗರದ ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು.
ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ ಎಲ್ಲ ಶಿಕ್ಷಕರಿಗೂ ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಚಿದಾನಂದ ಅವಟಿಯವರು ಮೌಲ್ಯಮಾಪನ ಕಾರ್ಯಕ್ಕೆ ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು. ಎಲ್ಲ ಸಿಬ್ಬಂದಿಗಳಿಗೆ ಮಧ್ಯಾಹ್ನ ರುಚಿಕಟ್ಟಾದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಬಗೆಬಗೆಯ ಪಲ್ಯೆ, ರೊಟ್ಟಿ, ಚಟ್ನಿ , ಹೋಳಿಗೆ, ಪಾಯಸ, ಚಹಾ, ತಂಪು ಪಾನೀಯ ಮಜ್ಜಿಗೆ, ಕಲ್ಲಂಗಡಿ ಸಹಿತ ಊಟವನ್ನು ಸಿಬ್ಬಂದಿಗಳು ಸವಿದರು.
ಮೌಲ್ಯಮಾಪನ ಕೇಂದ್ರಕ್ಕೆ ಆಗಮಿಸಿದ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ ಆರ್.ಕೆ. ಮಾತನಾಡಿ ಮೌಲ್ಯಾಂಕನ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆಯಾಗಿದೆ. ಮೌಲ್ಯಮಾಪನ ನಂತರ ಎಲ್ಲ ಉತ್ತರ ಪತ್ರಿಕೆಗಳನ್ನು ಆಯಾ ಶಾಲೆಗಳಿಗೆ ಸರಬರಾಜು ಮಾಡಲು ತಿಳಿಸಿದರು. ಎಲ್ಲ ಸಿಬ್ಬಂದಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಹಾಗೂ ರುಚಿಕರವಾದ ವಿಭಿನ್ನ ತೆರನಾದ ಊಟದ ವ್ಯವಸ್ಥೆ ಕಲ್ಪಿಸಿದ ಚಿದಾನಂದ ಅವಟಿ ದಂಪತಿಗಳಿಗೆ ಅಭಿನಂದನೆ ತಿಳಿಸಿ ಇಲಾಖೆ ವತಿಯಿಂದ ಸನ್ಮಾನಿಸಿದರು.