ದೇವರಹಿಪ್ಪರಗಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಕುಡಿಯುವ ನೀರಿನ ಮೂಲಗಳ ಪರೀಕ್ಷೆ ಅತ್ಯಂತ ಅಗತ್ಯವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಾನಂದ ಮೂಲಿಮನಿ(ಪಂಚಾಯತ್ ರಾಜ್) ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿನ ಪ್ರವಾಸಿಮಂದಿರದಲ್ಲಿ ಬುಧವಾರ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ನೀರುಗಂಟಿ(ವಾಟರ್‌ಮ್ಯಾನ್), ಡಾಟಾಎಂಟ್ರಿ ಆಪರೇಟರ್‌ಗಳಿಗೆ ಏರ್ಪಡಿಸಲಾದ ಒಂದು ದಿನದ ತರಬೇತಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಅಶುದ್ಧ ನೀರು ಜನ ಮತ್ತು ಜಾನುವಾರಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಜೀವಕ್ಕೆ ಕಂಟಕ ಆಗಲೂಬಹುದು. ಆದ್ದರಿಂದ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಳಹಂತದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ನೀರುಗಂಟಿ, ಡಾಟಾ ಆಪರೇಟರ್‌ಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಜಿಲ್ಲಾ ನೀರು ಪರೀಕ್ಷಾ ಕೇಂದ್ರದ ಸೋಮನಾಥ ಚನ್ನಗೌಡ ಮಾತನಾಡಿ, ನೀರುಗಂಟಿಗಳಿಗೆ ನೀರು ಪರೀಕ್ಷೆಯ ಕನಿಷ್ಟ ಜ್ಞಾನ ಅವಶ್ಯಕ. ಕಲುಷಿತ ನೀರು, ಅಶುದ್ಧ ನೀರು, ಕುಡಿಯಲು ಯೋಗ್ಯವಲ್ಲದ ನೀರು ಇವುಗಳ ಬಗ್ಗೆ ಎಚ್ಚರ ವಹಿಸಿ ಶುದ್ಧ ನೀರು ಒದಗಿಸಲು ನೀರು ಪರೀಕ್ಷೆ ಕಡ್ಡಾಯವಾಗಿದೆ ಮಾಡಿ ಪೂರೈಸಬೇಕು ಎಂದು ಹೇಳುತ್ತಾ, ಫಿಲ್ಡ್ ಟೆಸ್ಟ್ ಕಿಟ್ ಮುಖಾಂತರ ನೀರಿನ ಪಿಎಚ್, ಗಡಸುತನ, ಕ್ಲೋರೈಡ್, ಫ್ಲೋರೈಡ್, ಕಬ್ಬಿಣ, ನೈಟ್ರೇಟ್ ಗಳು ಯಾವ ಪ್ರಮಾಣದಲ್ಲಿ ಇರಬೇಕು ಎಂಬುದನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳ ವಾಟರ್‌ಮ್ಯಾನ್‌ಗಳು ತಂದಂತ ಕುಡಿಯುವ ನೀರಿನ ವಿವಿಧ ಮೂಲಗಳ ಮಾದರಿಗಳನ್ನು ಅವರಿಂದಲೇ ಪರೀಕ್ಷೆ ಮಾಡಿಸಲಾಯಿತು.
ತಾ.ಪಂ. ಯೋಜನಾಧಿಕಾರಿ ಶ್ರೀನಿವಾಸ ಪವಾರ, ಪಿಡಿಓ, ವಿವಿಧ ಗ್ರಾಮ ಪಂಚಾಯಿತಿಗಳ ವಾಟರ್‌ಮ್ಯಾನ್‌ಗಳು, ಕಂಪ್ಯೂಟರ್ ಆಪರೇಟರ್‌ಗಳು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

