ಮುದ್ದೇಬಿಹಾಳ: ತಾಲ್ಲೂಕಿನಲ್ಲಿ ಜನವರಿಯಿಂದ ಜೂನ ತಿಂಗಳ ಅಂತ್ಯದವರೆಗೆ ಸಾಮಾನ್ಯ ಮಳೆ ೧೭೪ ಮಿ. ಮಿ. ಇದ್ದು ಇದಕ್ಕೆ ೩೦೯.೨ ಮಿ.ಮಿ. ಮಳೆಯಾಗಿದೆ. ಈ ಬಾರಿ ಒಳ್ಳೆಯ ಮಳೆಯಾಗಿದ್ದರಿಂದ ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ಮುಂಗಾರು ಹಂಗಾಮಿಗೆ ತಾಲೂಕಿಗೆ ೧೨೩೦೪೧ ಹೆಕ್ಟರ್ ಕ್ಷೇತ್ರದಲ್ಲಿ ಬಿತ್ತನೆಯ ಗುರಿ ಹಾಕಿಕೊಳ್ಳಲಾಗಿದ್ದು ಇದಕ್ಕನುಗುಣವಾಗಿ ಇಲ್ಲಿಯವರೆಗೆ ತೊಗರಿ ೩೯೦೬೨ ಹೆಕ್ಟರ್, ಸಜ್ಜೆ ೯೦೫ ಹೆಕ್ಟರ್, ಮುಸುಕಿನಜೋಳ ೫೮೭ ಹೆಕ್ಟರ್ ಬಿತ್ತನೆಯಾಗಿ ಒಟ್ಟು ೪೭೩೪೩ ಹೆ ಬಿತ್ತನೆಯಾಗಿದ್ದು ತೊಗರಿ ಬಿತ್ತನೆ ಕ್ಷೇತ್ರ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ ಹೇಳಿದರು.
ಬಿದರಕುಂದಿ ಗ್ರಾಮದ ಜಮೀನೊಂದರಲ್ಲಿ ತೊಗರಿ ಬಿತ್ತನೆ ಕಾರ್ಯಕ್ಕೆ ಸಲಹೆ ನೀಡಿ ಮಾತನಾಡಿದ ಅವರು, ಈಗಾಗಲೆ ಪಟ್ಟಣದ ಸೇರಿದಂತೆ ತಾಲ್ಲೂಕಿನ ಢವಳಗಿ, ನಾಲತವಾಡ ಹಾಗೂ ತಾಳಿಕೋಟಿ ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ ಖಿS೩-ಖ , ಉಖಉ- ೮೧೧, ಉಖಉ -೧೫೨ ತಳಿಗಳು , ಗೋವಿನ ಜೋಳ, ಸರ‍್ಯಕಾಂತಿ , ಸಜ್ಜೆ ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲಾಗುತ್ತಿದೆ. ಇಲ್ಲಿಯವರೆಗೆ ತೊಗರಿ – ೧೦೯೬.೩೫ ಕ್ವಿಂಟಲ್, ಸಜ್ಜೆ – ೫.೫ ಕ್ವಿಂಟಲ್, ಮುಸುಕಿನ ಜೋಳ – ೮೧.೯೬ ಕ್ವಿಂಟಲ್, ಸೂರ್ಯಕಾಂತಿ – ೦.೦೨ ಕ್ವಿಂಟಲ್ , ಹೆಸರು – ೬.೮ ಕ್ವಿಂಟಲ್ ವಿತ್ತರಣೆಯಾಗಿದೆ. ಸದ್ಯ ರೈತ ಸಂಪರ್ಕ ಕೇಂದ್ರಗಳಲ್ಲಿ ಯಾವುದೆ ಬೀಜದ ಕೊರತೆ ಇಲ್ಲ ಮತ್ತು ದಾಸ್ತಾನು ಇದೆ. ತಾಲ್ಲೂಕಿನಲ್ಲಿ ಯಾವುದೇ ಬೀಜ, ರಸಗೊಬ್ಬರಗಳ ಕೊರತೆ ಇಲ್ಲ. ಮುಂಗಾರು ಹಂಗಾಮಿನಲ್ಲಿ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆಯಲ್ಲಿ ರೈತರು ವಿಮೆ ಮಾಡಿಸಲು ಸರಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ಹೆಸರು ಬೆಳೆಗೆ ಜೂಲೈ-೧೫ ಇನ್ನುಳಿದ ಬೆಳೆಗಳಿಗೆ ಜೂಲೈ-೩೧ ವಿಮೆ ಕಂತು ತುಂಬಲು ಕೊನೆಯ ದಿನಾಂಕವಿದ್ದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ವಿಮೆ ಮಾಡುವಂತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಅಂಪರ್ಕ ಕೇಂದ್ರ ಇಲ್ಲವೆ ಪಟ್ಟಣದ ಕೃಷಿ ಇಲಾಖೆಗೆ ಸಂಪರ್ಕಿಸುವಂತೆ ತಿಳಿಸಿದರು.
ಈ ವೇಳೆ ಢವಳಗಿ ಗ್ರಾಮದ ಕೃಷಿ ಅಧಿಕಾರಿ ಗೋವಿಂದರೆಡ್ಡಿ ಮೆದಕಿನಾಳ ರೈತರಾದ ಮಂಜುನಾಥ ಬಾಳದಿನ್ನಿ, ಯಮನೂರಿ ಕಿಟ್ಟದ, ಉಮೇಶ ಬಾಣಿ, ಸಂಗಮೇಶ ಕಿಟ್ಟದ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
ಮುಂಗಾರು ಹಂಗಾಮಿಗೆ ೧೨೩೦೪೧ ಹೆಕ್ಟರ್ ಕ್ಷೇತ್ರದಲ್ಲಿ ಬಿತ್ತನೆ ಗುರಿ
Related Posts
Add A Comment

