ಆಲಮಟ್ಟಿ: ವಲಯದ ಎಲ್ಲ ಕಾಲುವೆಗಳು, ವಿದ್ಯುತ್ ಕಾಮಗಾರಿಗಳ ಹಾಗೂ ಇತರೆ ಕೆಲಸಗಳ ದುರಸ್ತಿ ಮತ್ತು ನಿರ್ವಹಣೆಗೆ ಹಣಕಾಸಿನ ಮಂಜೂರಾತಿ ನೀಡಬೇಕು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೃಷ್ಣಾ ತೀರ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿ ಕೆಬಿಜೆನ್ನೆಲ್ ಮುಖ್ಯ ಅಭಿಯಂತರರ ಕಚೇರಿ ಆವರಣದಲ್ಲಿ ಅನಿರ್ದಿಷ್ಟ ಧರಣಿ ಆರಂಭಿಸಿದರು.
ಸಂಘದ ಅಧ್ಯಕ್ಷ ಎಂ.ಎ.ಮೇಟಿ, ಗೌರವಾಧ್ಯಕ್ಷ ಜಿ.ಸಿ.ಮುತ್ತಲದಿನ್ನಿ, ಉಪಾಧ್ಯಕ್ಷ ಶಿವಗೊಂಡಪ್ಪ ಗದಿಗೆಪ್ಪಗೌಡರ, ಸಿ.ಜಿ.ವಿಜಯಕರ, ಬಸವರಾಜ ಬಾಗೇವಾಡಿ ಮಾತನಾಡಿ, ಕಳೆದ ಆರ್ಥಿಕ ವರ್ಷದಲ್ಲಿ ಕರೆಯಲಾದ ಎಲ್ಲ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ಕ್ರಮಕೈಗೊಂಡು ಕಾಮಗಾರಿಗಳ ಬಿಡ್‌ನಲ್ಲಿ ಭಾಗವಹಿಸಿದ ಗುತ್ತಿಗೆದಾರರ ಮಂಗಡ ಹಣ ಆಯಾ ಗುತ್ತಿಗೆದಾರರಿಗೆ ಮರಳಿಸಬೇಕು. ಆಲಮಟ್ಟಿ ವಲಯದ ೨೦೨೪-೨೫ನೇ ಆರ್ಥಿಕ ವರ್ಷದ ಕಾಮಗಾರಿಗಳ ಕ್ರಿಯಾಯೋಜನೆಗೆ ತಕ್ಷಣ ಮಂಜೂರಾತಿ ನೀಡಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಕಾಲುವೆಗಳ ದುರಸ್ತಿ ಮತ್ತು ನೂತನ ಮುಖ್ಯ ಕಾಲುವೆ, ವಿತರಣಾ ಕಾಲುವೆ, ಸೀಳು ಕಾಲುವೆ,
ಉಪಕಾಲುವೆಗಳ ನಿರ್ಮಾಣ ಕಾಮಗಾರಿಗಳನ್ನು ಪ್ಯಾಕೇಜ್ ಪದ್ಧತಿಗೆ ಒಳಪಡಿಸದೆ ವಿಂಗಡಣೆ
ಮಾಡಿ ಟೆಂಡರ್ ಕರೆಯಬೇಕು. ಒಂದು ಕೋಟಿ ರೂ.ಮೊತ್ತದ ಕಾಮಗಾರಿಗಳ ಟೆಂಡರ್‌ಗಳಲ್ಲಿ
ಭಾಗವಹಿಸುವ ಗುತ್ತಿಗೆದಾರರಿಗೆ ಅನವಶ್ಯಕ ಷರತ್ತುಗಳನ್ನು ಹಾಕುವುದನ್ನು ಹಾಗು ಕಾಮಗಾರಿಗಳನ್ನು ನಿರ್ವಹಿಸಿದ ಪ್ರಮಾಣ ಪತ್ರ ಕೇಳುವುದನ್ನು ನಿರ್ಭಂಸಬೇಕು ಎಂದರು.
ಕ್ಲೋಸರ್, ವಿಶೇಷ ದುರಸ್ತಿ ಹಾಗೂ ೧೦ ಲಕ್ಷ ರೂ.ಗಳ ಒಳಗಿನ ಕಾಮಗಾರಿಗಳನ್ನು ೪ಜಿ
ವಿನಾಯತಿ ಪಡೆದು ನೇರವಾಗಿ ಗುತ್ತಿಗೆದಾರರಿಗೆ ನೀಡಬೇಕು. ಬಜೆಟ್‌ನಲ್ಲಿ ಘೋಷಿಸಿದ್ದಂತೆ ಇತರೆ ಹಿಂದುಳಿದ ವರ್ಗಗಳಿಗೆ ಕಾಮಗಾರಿಗಳ ಟೆಂಡರನಲ್ಲಿ ಶೇ.೨೦ರಷ್ಟು ಮೀಸಲಾತಿ ನೀಡಬೇಕು. ಕಾಮಗಾರಿಗಳ ಟೆಂಡರ್ ಪ್ರಕ್ರಿಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ನಿರ್ಬಂಧ ಹಾಕಬೇಕು. ಪೂರ್ಣಗೊಂಡ ಕಾಮಗಾರಿಗಳ ಬಿಲ್ ವ್ಯವಸ್ಥಾಪಕ ನಿರ್ಧೇಶಕರ ಕಚೇರಿಗೆ ಸಲ್ಲಿಸಲಾಗಿದ್ದು ಈ ಬಿಲ್‌ಗಳಿಗೆ ಹಣ ಬಿಡುಗಡೆ ಮಾಡಬೇಕು. ಗುತ್ತಿಗೆದಾರರು ಪೂರ್ಣಗೊಳಿಸಿದ ಕಾಮಗಾರಿಗಳ ಹಣ ಮಂಜೂರಾತಿ ಪಡೆಯಲು ಬೆಂಗಳೂರಿಗೆ ಹೋಗುವ ಪರಿಪಾಠ ತಪ್ಪಿಸಬೇಕು. ಕೆಬಿಜೆನ್ನೆಲ್ ಕರೆಯಲಾಗುವ ಹಾಗೂ ಇತರ ಇಲಾಖೆಗಳಲ್ಲಿ ಕಾಮಗಾರಿಗಳ ಟೆಂಡರ್‌ಗಳಲ್ಲಿ ಭಾಗವಹಿಸುವ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಸಂತ್ರಸ್ತರ ಗುತ್ತಿಗೆದಾರರಿಗೆ ಆದ್ಯತೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ವೆಂಕಟೇಶ ನಾಯಕ, ಟಿ.ಎಸ್.ಅಫಜಲಪೂರ, ಯಲ್ಲಪ್ಪ ನಾಗರಾಳ, ಜಿ.ಸಿ.ರಾಠೋಡ, ಗೋಪಾಲ ಬಂಡಿವಡ್ಡರ, ವೈ.ವೈ.ಬಿರಾದಾರ,. ಎಚ್.ಎಲ್.ಲಮಾಣಿ, ಹನುಮಂತ ಪೂಜಾರಿ, ಬಸವರಾಜ
ಬಾದರದಿನ್ನಿ, ನಾಮದೇವ ರಾಠೋಡ, ಮಹಾಂತೇಶ ಡೆಂಗಿ, ಚನ್ನಪ್ಪ ಅಂಗಡಿ, ವಿಜಯ ಕಿರಸೂರ,
ಎಂ.ಆರ್.ಕಮತಗಿ, ಪ್ರದೀಪ ಪವಾರ, ಕೆ.ವಿ.ಶಿವಕುಮಾರ, ವೈ.ಕೆ.ಹಳೆಮನಿ, ವಿ.ಎಂ.ಹಿರೇಮಠ,
ಪರಶುರಾಮ ಬಯ್ಯಾಪೂರ, ಎಂ.ಡಿ.ಶೇಖ ಇತರರಿದ್ದರು.
Subscribe to Updates
Get the latest creative news from FooBar about art, design and business.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುತ್ತಿಗೆದಾರರ ಸಂಘ ಅನಿರ್ಧಿಷ್ಟ ಧರಣಿ
Related Posts
Add A Comment

