ಆಲಮೇಲ: ಜೂ.೨೦ ಸಂಜೆ ೬ ರ ಹೊತ್ತು ಯಳಮೇಲಿಯ ಶ್ರಿ ಗುರು ಸಂಸ್ಥನ ಹಿರೇಮಠದ ಆವರಣದಲ್ಲಿ ಪರಮ ತಪಸ್ವಿ ಲಿಂ.ಶ್ರಿ ಷ ಬ್ರ ಸಿದ್ದಲಿಂಗ ಶಿವಾಚಾರ್ಯರ ೬೭ ನೇ ಪುಣ್ಯಾರಾಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಗಾನಯೋಗಿ ಪಂ ಪಂಚಾಕ್ಷರಿ ಗವಾಯಿಗಳ ೮೦ನೇ ಹಾಗೂ
ಡಾ ಪಂ ಪುಟ್ಟರಾಜ ಕವಿ ಗವಾಯಿಗಳ ೧೪ ನೇ ಪುಣ್ಯಾರಾಧನೆ, ಸಂಗೀತೋತ್ಸವ ಮತ್ತು ಪುಸ್ತಕ ಜನಾರ್ಪಣೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ
ಕಲಾವಿದರು, ಸಂಗೀತ ಪ್ರೇಮಿಗಳು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯ ವಹಿಸಲಿರುವ ಪಟ್ಟಣದ ಗುರು ಸಂಸ್ಥಾನ ಹಿರೇಮಠದ ಷ.ಬ್ರ ಚಂದ್ರಶೇಖರ ಶಿವಾಚಾರ್ಯರು
ಬಂಡಾಯ ಹಿರಿಯ ಸಾಹಿತಿ ಸಿದ್ದರಾಮ ಉಪ್ಪಿನ್ ರವರ “ದೀಪ ಹಚ್ಚುವ ಸಮಯ” ಕಾದಂಬರಿ ಲೋಕಾರ್ಪಣೆಗೊಳಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆರಗು ಪ್ರಕಾಶನದ ಸಂಚಾಲಕ ಡಾ.ರಮೇಶ ಕತ್ತಿ ವಹಿಸಲಿದ್ದು, ಪುಸ್ತಕ ಕುರಿತು ಚಿಂತಕ/ವಾಗ್ಮಿ ಸಿ.ಎಂ.ಬಂಡಗಾರ ಮಾತನಾಡಲಿದ್ದಾರೆ.
ರೇಣುಕಾಚಾರ್ಯ ಗವಾಯಿಗಳು, ಯಶವಂತ ಬಡಿಗೇರ, ರಾಜಶೇಖರ
ಕಟ್ಟಿಸಂಗಾವಿ, ಅಪ್ಪು ಉಪ್ಪಿನ ಮುಂತಾದ ಹಿರಿ-ಕಿರಿ ಕಲಾವಿದರಿಂದ ಸಂಗೀತೋತ್ಸವ ಜರುಗುವುದು.
ಶಾಸಕ ಅಶೋಕ ಮನಗೂಳಿ, ಅಲ್ಲದೆ ಕಾದಂಬರಿಯ ಪಾತ್ರಧಾರಿಗಳಾದ ನಿತ್ಯಾನಂದ ಮಹಾರಾಜ್, ಶ್ರೀಶ್ಯೆಲಯ್ಯ ಸ್ವಾಮೀಜಿ, ತಾಲೂಕು ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ, ಡಾ ಶ್ರೀಶ್ಯೆಲ ಪಾಟೀಲ, ಶಂಕರ ಹಳಿಮನಿ, ಬಾಬು, ಶ್ರಿಶ್ಯೆಲ ಮಠಪತಿ, ಶಂಕರಬಾಯಿ ಹೂಗಾರ, ರಾಮನಗೌಡ ಮಹಾಜನ್, ಗುರುಬಸಪ್ಪ ಯಲಗೋಡ, ಷಣ್ಮುಖಪ್ಪ, ರಾಜಶೇಖರ ವಾರದ, ಚಿನ್ನಯ್ಯ, ಅಪ್ಪು ಶೆಟ್ಟಿ, ಡಿ ಜಿ ಬಳೂರಗಿ, ಈರಣ್ಣ ಮಾರಲಭಾವಿ, ಶರಣ ಗೊಲ್ಲಾಳಪ್ಪ ದೇವರಮನಿ, ರದ್ದೇವಾಡಗಿ ಮ್ಯೆತ್ರಾಬಾಯಿ, ಜಾನಕಿ, ಸವಿತಾ, ಮಂಗಳಾ ಗುಡಿ, ಸಿದ್ದರಾಮ ಹೂಗಾರ, ಅಶೋಕ ಕೊಳಾರಿ, ನಟ ಸಂತೋಷ, ಡಾ ನಿಂಬಾಳ, ಬಸವ ಶರಣರು, ರವಿ ವಾರದ, ಮಲ್ಲು ಅಚಲೇರಿ, ಯಶೋಧಾ ನಾರಾಯಣಕರ, ಕಲಶೆಟ್ಟಿ ಸರ್, ಬಿರಾದಾರ ಸರ್, ರಮೇಶ ಭಂಟನೂರ, ರುದ್ರಗೌಡ, ಬಡೇಸಾಹೇಬ ಟೇಲರ್, ರಾಗಂ, ಡಾ ಎಂ ಎಂ ಪಡಶೆಟ್ಟಿ, ಡಾ ಚನ್ನಪ್ಪ ಕಟ್ಟಿ, ಗುರುಬಸಯ್ಯ ಗದ್ದುಗೆ, ಶರಣ ಹೊಳೆಪ್ಪ ದೇವರಮನಿ ಪಾಲ್ಗೊಳ್ಳಲಿದ್ದು ಎಲ್ಲ ಸಾಹಿತ್ಯ ಮತ್ತು ಸಂಗೀತ ಪ್ರೇಮಿಗಳು ಬಾಗವಹಿಸಬೇಕೆಂದು ಸಾಹಿತಿ ಸಿದ್ಧರಾಮ ಉಪ್ಪಿನ ಪ್ರಕಟಣೆಯಲ್ಲಿ ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
ಇಂದು ಆಲಮೇಲದಲ್ಲಿ ಪುಣ್ಯ ಸ್ಮರಣೋತ್ಸವ, ಸಂಗೀತೋತ್ಸವ & ಕೃತಿ ಬಿಡುಗಡೆ
Related Posts
Add A Comment

