ವಿಜಯಪುರ: ಕಣ್ಣಿಗೆ ಕಾಣುವ ದೇವರು ಎಂದರೆ ಶಿಕ್ಷಕರು, ಜಗತ್ತಿನಲ್ಲಿ ಅತ್ಯಂತ ಪವಿತ್ರವಾದ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ ಎಂದು ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಮುಖ್ಯಸ್ಥ ಎನ್.ಎಂ.ಬಿರಾದಾರ ಹೇಳಿದರು.
ತಾಲ್ಲೂಕಿನ ಶಿವಣಗಿ ಗ್ರಾಮದ ಪ್ರಾಥಮಿಕ ಮತ್ತು ಎಸ್.ಆರ್.ಮರಿಮಠ ಪ್ರೌಢಶಾಲೆಯಲ್ಲಿ 1998-99 ನೇ ಸಾಲಿನಲ್ಲಿ ಎಸ್ಎಸ್ಎಲ್ ಸಿ ಕಲಿತ ವಿದ್ಯಾರ್ಥಿಗಳಿಂದ ರವಿವಾರ ನಡೆದ ಗುರುವಂದನಾ ಹಾಗೂ ಸುಮಧುರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.
ಗುರು ಮತ್ತು ಶಿಷ್ಯರ ಸಂಬಂಧ ಪವಿತ್ರವಾದದ್ದು, ಅದು ತುಂಬಾ ಪ್ರಾಮಾಣಿಕವಾಗಿ ಇರುವಂಥದ್ದು. ಶಿಕ್ಷಕರು ಕೇವಲ ಪಾಠ ಮಾಡುವುದಷ್ಟೇ ಅಲ್ಲದೇ ವಿದ್ಯಾರ್ಥಿಗಳು ತಮ್ಮ ಮಕ್ಕಳೆಂದು ತಿಳಿದು ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಪ್ರಯತ್ನಿಸುತ್ತಾರೆ. ಶಿಕ್ಷಕರನ್ನು ಗೌರವಿಸುವ ಹಾಗೂ ಸ್ಮರಿಸುವ ನಿಮ್ಮಂತಹ ವಿದ್ಯಾರ್ಥಿಗಳು ಶ್ರೇಷ್ಠ, ನೀವೇ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿರುತ್ತೀರಿ ಎಂದು ಹೇಳಿದರು.
ಸಾನಿಧ್ಯ ವಹಿಸಿ ಮಾತನಾಡಿದ ವೃಷಭಲಿಂಗ ಸ್ವಾಮೀಜಿ ಶಿಕ್ಷಕರ ವೃತ್ತಿ ಶ್ರೇಷ್ಠ ವೃತ್ತಿ ಗುರು ಶಿಕ್ಷಣ ಮತ್ತು ಸಂಸ್ಕಾರ ಎರಡನ್ನು ಕಲಿಸುತ್ತಾರೆ. ಇಂದಿನ ವಿಧ್ಯಾರ್ಥಿಗಳು ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕೆಂದು ಹೇಳಿದರು.
ಉದ್ಘಾಟಕರಾಗಿ ಆಗಮಿಸಿದ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮೀಜಿ ಮಾತನಾಡಿ ತಮಗೆ ವಿದ್ಯೆ ಕಲಿಸಿ ಬದುಕು ರೂಪಿಸಿದ ಎಲ್ಲಾ ಗುರುಗಳನ್ನು ಒಂದೇ ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸುವ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಗುರುಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿಶ್ವನಾಥ ಭೀಮರಾಯ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಹಳೆಯ ವಿಧ್ಯಾರ್ಥಿ ಗುರುನಾಥ ಮುರಡಿ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಗಯ್ಯ ಶರಣಯ್ಯ ಮರಿಮಠ, ಬಸಗೊಂಡ ಕೋರಿ, ಶೃವಣಕುಮಾರ ಕುಂಬಾರ, ಎಂ.ಎನ್.ನದಾಪ್, ವರದಾ ಎಸ್.ತಿಮ್ಮನಗೌಡರ, ಶ್ರೀನಾಥ ಪಾಟೀಲ,ಶಶಿಕಲಾ, ಬಾಬು ಹಡಗಲಿ, ಸವಿತಾ ಬೂಸಾರಿ, ಆರತಿ, ಪ್ರತಿಭಾ, ವಿಶಾಲಗೌಡ ಪಾಟೀಲ, ನಾಗೇಂದ್ರ ಗೊರನಾಳ, ರೇವಣ್ಣಸಿದ್ದ, ರಾಯಪ್ಪ, ಸಿದ್ದಲಿಂಗ ಗುನ್ನಾಪೂರ, ಬಸವರಾಜ, ಕರ್ನಾಳ, ಶಂಕರಲಿಂಗ, ಶಿವಶರಣ, ಸತೀಶ, ರಮೇಶ, ಜಗನಾಥ, ಮಹಾಂತೇಶ, ಮಾನಪ್ಪ, ಯಲ್ಲಾಲಿಂಗ, ಇರ್ಫಾನ್ ಚಟ್ಟರಕಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು, ಶಿವಣಗಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದ್ಯಸರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

