ಕಟಕದೊಂಡಗೆ ಟಿಕೆಟ್ :101 ತೆಂಗಿನಕಾಯಿ ಒಡೆದ ಅಭಿಮಾನಿ.
ಚಡಚಣ: ನಾಗಠಾಣ ಮೀಸಲು ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಅವರಿಗೆ ಟಿಕೆಟ್ ಘೋಷಣೆ ಹಿನ್ನೆಲೆ ಅಭಿಮಾನಿ ಜಿನ್ನೇಸಾಬ
ದೇವರ ನಿಂಬರಗಿ ಬಲಭೀಮ ದೇವರಿಗೆ 101 ಟೆಂಗು ಒಡೆಯುವ ಮೂಲಕ ಗುರುವಾರ ಹರಕೆ ತೀರಿಸಿದನು.
ಚಡಚಣ ತಾಲ್ಲೂಕಿನ ದೇವರ ನಿಂಬರಗಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ಜಿನ್ನೇಸಾಬ ಬಂಡರಕವಟೆ ಏ.1 ರಂದು ಶ್ರೀ ಬಲಭೀಮ ದೇವರ ಜಾತ್ರೆಯಲ್ಲಿ ಮೊಸರು ಗಡಿಗೆ ಒಡೆಯುವ ದಿವಸ ಶ್ರೀ ಬಲಭೀಮ ದೇವರಲ್ಲಿ ವಿಠ್ಠಲ ಕಟಕದೊಂಡ ಅವರ ಪಕ್ಕಾ ಅಭಿಮಾನಿಯಾಗಿ ಹರಕೆ ತೊಟ್ಟಿದರು. ಆದರೆ ಇಂದು ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ಬಿಡುಗಡೆಯಲ್ಲಿ ನಾಗಠಾಣ ಮೀಸಲು ಮತಕ್ಷೇತ್ರಕ್ಕೆ ವಿಠ್ಠಲ ಕಟಕದೊಂಡ ಹೆಸರು ಘೋಷಣೆ ಯಾದ ಹಿನ್ನೆಲೆ ದೇವಸ್ಥಾನಕ್ಕೆ ತೆರಳಿ ನೂರಾ ಒಂದು ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದಾನೆ.
ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಬಿರಾದಾರ ಮಾತನಾಡಿದರು.
ಈ ಸಂದರ್ಭದಲ್ಲಿ ಇಸಾಕ್ ಡಾಂಗೆ, ಅಲ್ಲು, ಚಾಂದಸಾಬ ಗುಳೇಕಾರ, ಶಕೀಲ್ ಬಂಡರಕವಟೆ , ತಾನಾಜಿ ಸಿಂಗೆ , ಚಿಕ್ಕಯ್ಯ ಹೊಕಳೆ, ಮುಸ್ತಾಕ್ ಮುಲ್ಲಾ ಇದ್ದರು.