ವಿಜಯಪುರ: 12 ನೇ ಶತಮಾನದ ಬಸವಣ್ಣ ಸಾಂಸ್ಕೃತಿಕ ನಾಯಕ ಅಷ್ಟೇ ಅಲ್ಲ, ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕತೆ ಕ್ಷೇತ್ರಗಳ ಸಮಗ್ರ ನಾಯಕ ಎಂದು ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತರಳಬಾಳು ಕಲಾಸಂಘ ಮತ್ತು ವಿದ್ಯಾಸಂಸ್ಥೆ ಸಿರಿಗೆರೆ ವಿದ್ಯಾರ್ಥಿಗಳಿಂದ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ದಿ.15 ಶನಿವಾರ ಸಂಜೆ ನಡೆದ “ಶರಣ ಸಂಕುಲ” ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ, ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಮೊದಲನೇ ಸಹಿ ನನ್ನದಾಗಿದೆ. ಆದರೆ ಬಸವಣ್ಣನವರು ಕೇವಲ ಸಾಂಸ್ಕೃತಿಕ ನಾಯಕರಾಗಿರದೆ ಸಮಗ್ರ ರಂಗಗಳ ನಾಯಕ ಆಗಿದ್ದಾರೆ. ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ಪರಿಚಯ ನೋಡಿದರೆ, ಪ್ರತಿಯೊಬ್ಬರು ಒಂದೊಂದು ವಿಷಯದಲ್ಲಿ ಪರಿಣತಿಯನ್ನು ಹೊಂದಿದ್ದರೆ, ಬಸವಣ್ಣನವರು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕ ರಂಗಗಳು ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಪರಿಣತಿಯನ್ನು ಸಾಧಿಸಿದ್ದಾರೆ ಎಂದರು.
ಜ್ಞಾನಯೋಗಾಶ್ರಮದ ಪ.ಪೂ ಬಸವಲಿಂಗ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಯೋಗ, ಪ್ರಾಣಾಯಾಮ, ಕ್ರೀಡೆಗಳಲ್ಲಿ ಭಾಗವಹಿಸಿದರೆ ಸದೃಢ ಶರೀರ ಹೊಂದಿ, ಬುದ್ದಿವಂತರಾಗುತ್ತಾರೆ ಎಂದರು.
ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ನೂರು ಜನ ಮಕ್ಕಳನ್ನು ಜೊತೆಯನ್ನಾಗಿ ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಮತ್ತು ಬಸವಣ್ಣನವರ ತತ್ವಾದರ್ಶಗಳನ್ನು ಕಾರ್ಯಕ್ರಮಗಳ ಮೂಲಕ ಜನರಿಗೆ ತಲುಪಿಸುವಂತ ಕಾರ್ಯ ಮಾಡುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳ ಪಾಂಡಿತ್ಯವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದ ಡಾ.ಶಿವಮೂರ್ತಿ ಶಿವಾಚಾರ್ಯರು, ಸಿದ್ದೇಶ್ವರ ಶ್ರೀಗಳಿಗೆ ಪ್ರೀಯವಾಗಿದ್ದ ಮಕ್ಕಳ ಕಾರ್ಯಕ್ರಮವನ್ನು ಅವರ ಆಶ್ರಮದಲ್ಲಿ ಏರ್ಪಡಿಸುವ ಮೂಲಕ ಅತ್ಯತ್ತಮ ನಮನ ಸಲ್ಲಿಸಿದ್ದಾರೆ ಎಂದರು.
ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರವರು ವಿದ್ಯಾರ್ಥಿಗಳಿಂದ ನಡೆದ ಮಲ್ಲಕಂಬ, ಮಲ್ಲಿಹಗ್ಗ ಸಾಹಸ ಕ್ರೀಡೆ ವೀಕ್ಷಿಸಿದರು.
ಇದೇ ಸಂದರ್ಭಲ್ಲಿ ವಿವಿಧ ಸಂಸ್ಥೆಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಹಣಮಂತ ಚಿಂಚಲಿ, ವಿಜಯಪುರ ನಗರ ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜ ತಳವಾರ, ಅರವಿಂದ ಗಬ್ಬೂರ, ಸುಭಾಸ ಕರಿಕಬ್ಬಿ, ಗಂಗಾಧರ ಸಂಬಣ್ಣಿ, ರವಿ ಖಾನಾಪುರ, ರಾಜು ಜಕ್ಕುಂಡಿ, ಮಧು ಕಲಾದಗಿ, ಮಯೂರ ಬಿರಾದಾರ, ವಿಶ್ವನಾಥ ಬಿಜ್ಜರಗಿ ಸೇರಿದಂತೆ ಹಲವರು ಈ ಕಾರ್ಯಕ್ರಮ ತನು-ಮನ-ಧನ ಅರ್ಪಿಸುವುದರ ಮೂಲಕ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಬಸವಣ್ಣ ಸಮಗ್ರ ರಂಗಗಳ ನಾಯಕ :ಸಿರಿಗೆರೆ ಡಾ.ಶಿವಮೂರ್ತಿ ಶ್ರೀ
Related Posts
Add A Comment

