ವಿಜಯಪುರ: ಬಹುಜನ ದಲಿತ ಸಂಘರ್ಷ ಸಮಿತಿ (ರಿ ) ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ಡಾ ಬಿ ಆರ್ ಅಂಬೇಡ್ಕರ್ ರವರ 133ನೆ ವರ್ಷದ ಜಯಂತಿ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಶೈಕ್ಷಣಿಕ ಜಾಗೃತಿ ಸಮಾವೇಶ ಹಾಗೂ ಡಾ ವಿಜಯಲಕ್ಷ್ಮಿ ಪಾಟೀಲ್ ರವರು ರಚಿಸಿದ ” ಅನಿತಾ ದೇಸಾಯಿ ಆನ್ ಇಂಡಿಯನ್ ನೋವೆಲಿಸ್ಟ್ ಎಂಬ ಕೃತಿ ಬಿಡುಗಡೆ ಮತ್ತು ಸನ್ 2023-24ನೆ ಸಾಲಿನ ಎಸ್ ಎಸ್ ಎಲ್ ಸಿ ಶೇಕಡಾ 85 ಮತ್ತು ದ್ವಿತೀಯ ಪಿಯುಸಿ ಶೇ 90 ರಷ್ಟು ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಿ.30-6-2024 ರಂದು ಬೆಳಗ್ಗೆ 11.30 ಗಂಟೆಗೆ ವಿಜಯಪುರ ನಗರದ ಕಂದಗಲ್ ಹನುಮಂತ್ರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬಹುಜನ ದಲಿತ ಸಂಘರ್ಷ ಸಮಿತಿ ಕಳೆದ ಎರಡು ದಶಕಗಳಿಂದ ಇಲ್ಲಿವರೆಗೂ ರಾಜ್ಯಾದ್ಯಂತ ಸಮಾಜಕ, ಶೈಕ್ಷಣಿಕ, ರಾಜಕೀಯ,ಸಾಹಿತ್ಯ, ಸಂಸ್ಕೃತಿಕ ಕ್ಷೇತ್ರದಲ್ಲಿ ಬಹುಜನರ ಹಿತಕ್ಕಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುತ್ತಾ ಬಂದಿದೆ. ಆದಕಾರಣ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಗಳು ಜೂನ್ 25ರ ಒಳಗಡೆ ತಮ್ಮ ಸ್ವ ವಿವರಗಳೊಂದಿಗೆ ಮೊಬೈಲ್ ನಂ.9980306375, 7619310926 ಹಾಗೂ ಆರ್ಯಭಟ್ಟ ಕರಿಯರ ಅಕಾಡೆಮಿ ವಿಜಯಪುರ ಮೀನಾಕ್ಷಿ ಚೌಕ್ ಓಂ ಶಾಂತಿ ಕಚೇರಿಯ ಹತ್ತಿರ, ಮಲಘಾಣ ಬಿಲ್ಡಿಂಗ್ ವಿಜಯಪುರ ಈ ವಿಳಾಸಕ್ಕೆ ಸಂಪರ್ಕಿಸಬಹುದೆಂದು ದಲಿತ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ಪರಶುರಾಮ್ ಲಂಬು, ಉತ್ತರ ಕರ್ನಾಟಕದ ಅಧ್ಯಕ್ಷ ರಾಜಶೇಖರ್ ಕುದರಿ, ಜಿಲ್ಲಾಧ್ಯಕ್ಷ ಎಂ ಆರ್ ದೊಡ್ಡಮನಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Subscribe to Updates
Get the latest creative news from FooBar about art, design and business.
Related Posts
Add A Comment
