ದೇವರಹಿಪ್ಪರಗಿ: ವಿಶ್ವಯೋಗ ದಿನದ ಅಂಗವಾಗಿ ಜರುಗುವ ಯೋಗ ಉತ್ಸವದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನತೆ ಅದರಲ್ಲೂ ವಿಶೇಷವಾಗಿ ಯುವಸಮೂಹ ಭಾಗವಹಿಸುವುದು ಅಗತ್ಯವಾಗಿದೆ ಎಂದು ನಿವಾಳಖೇಡ ಗ್ರಾಮದ ಸಿದ್ಧಕೃಪಾ ಮಲ್ಲಿಕಾರ್ಜುನ ಮಹಾಮಠದ ಬಸವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜು ಆವರಣದಲ್ಲಿ ಸೋಮವಾರ ಜರುಗಿದ ವಿಶ್ವ ಯೋಗ ದಿನದ ನಿಮಿತ್ಯ ಜರುಗುವ ಯೋಗ ಉತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಯೋಗ ಉತ್ಸವ ಒಂದು ಐತಿಹಾಸಿಕ ಕಾರ್ಯಕ್ರಮವಾಗಬೇಕು. ಅದಕ್ಕಾಗಿ ಕನಿಷ್ಟ ಐದು ಸಾವಿರ ಜನತೆ ಇದರಲ್ಲಿ ಭಾಗವಹಿಸಿ ಬಾಲಗಾಂವ ಗುರುದೇವ ಆಶ್ರಮದ ಅಮೃತಾನಂದ ಸ್ವಾಮೀಜಿಗಳಿಂದ ಯೋಗ ವಿಧಾನ ಹಾಗೂ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರು.
ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರತಜ್ಞ ಪ್ರಭುಗೌಡ ಬಿ.ಎಲ್(ಚಬನೂರ) ಮಾತನಾಡಿ, ಯೋಗ ಉತ್ಸವ ಯುವಜನತೆಯ ಆರೋಗ್ಯ ಹಾಗೂ ಸದ್ವಿಚಾರಗಳಿಗೆ ಪೂರಕವಾಗಿದ್ದು ದಿ: ೨೧ ರಂದು ಬೆಳಿಗ್ಗೆ ೬ ಗಂಟೆಗೆ ಎ.ಬಿ.ಸಾಲಕ್ಕಿ ಕಾಲೇಜು ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.
ಪಡಗಾನೂರ ಗ್ರಾಮದ ಖ್ಯಾತ ಯೋಗಪಟು ಮಡಿವಾಳಪ್ಪ ದೊಡಮನಿ ಮಾತನಾಡಿ, ಯೋಗ ಉತ್ಸವದಲ್ಲಿ ಭಾಗವಹಿಸುವವ ಉಡುಗೆ ಹಾಗೂ ಸಿದ್ಧತೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಟ್ಟಣದ ಹಿರಿಯ ವೈದ್ಯ ಆರ್.ಆರ್.ನಾಯಿಕ್, ಯೋಗಪಟು ಪಿ.ಎಸ್.ಮಿಂಚನಾಳ ಮಾತನಾಡಿ, ಅಮೃತಾನಂದ ಸ್ವಾಮೀಜಿವರಿಂದ ಜರುಗುತ್ತಿರುವ ಯೋಗ ಉತ್ಸವದ ಯಶಸ್ಸಿಗೆ ನಾವೆಲ್ಲಾ ಇಂದಿನಿಂದ ಕಾರ್ಯಾನ್ಮಖರಾಗೋಣ ಎಂದರು.
ಸಭೆಯಲ್ಲಿ ಮುಳಸಾವಳಗಿ ಅಮೋಘಸಿದ್ಧ ಮಠದ ನಿಂಗರಾಯರು, ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಮಂಜುನಾಥ ಮಠ, ಎ.ಕೆ.ನಾಡಗೌಡ, ಕಾಶೀನಾಥ ಸಾಲಕ್ಕಿ, ಬಾಬುಗೌಡ ಪಾಟೀಲ(ಜಿಡ್ಡಿಮನಿ), ಪ್ರಭುದೇವ ಹಿರೇಮಠ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಜಲಕತ್ತಿ, ರಮೇಶ ಮಸಬಿನಾಳ, ಗುರುರಾಜ ಗಡೇದ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಶಿವಪದ್ಮ ಕೂಟನೂರ, ಬಸವರಾಜ ತಾಳಿಕೋಟಿ, ಸೋಮು ಹಿರೇಮಠ, ಮಹೇಶ ಬಬಲೇಶ್ವರ, ಕಾಶೀನಾಥ ತಳಕೇರಿ, ಕಾಸು ಕೋರಿ, ಪ್ರಕಾಶ ಮಲ್ಲಾರಿ, ಸೋಮು ದೇವೂರ, ಕೆ.ಎಸ್.ಕೋರಿ, ಶ್ರೀಮಂತ ತಳವಾರ(ನಿವಾಳಖೇಡ), ಮಲ್ಲು ಜಮಾದಾರ, ಶಿವಾನಂದ ಕೋಟಿನ್, ಮುರ್ತುಜಾ ತಾಂಬೋಳಿ ರಹೆಮಾನ ಕಣಕಾಲ, ಶಿವಾನಂದ ಜಗನ್ನಾಥ, ಶ್ರೀಶೈಲ ಯಂಭತ್ನಾಳ, ಕಿರಣ ಬುದ್ನಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

