ಸಿಂದಗಿ: ಮತಕ್ಷೇತ್ರದ ಸಂಪೂರ್ಣ ಪ್ರಗತಿಗಾಗಿ ಪ್ರಾಮಾಣಿಕವಾಗಿ ನಾನು ಪ್ರಯತ್ನಿಸುವೆ. ನನ್ನ ನಡೆ ಹಳ್ಳಿ ಕಡೆ. ಗ್ರಾಮೀಣ ಭಾಗದ ಅಭಿವೃದ್ಧಿಯೆಡೆಗೆ ಮೊದಲಾದ್ಯತೆ ನೀಡಿ ಸರ್ವಾಂಗೀಣ ಬೆಳವಣಿಗೆಯತ್ತ ತೆಗೆದುಕೊಂಡು ಹೋಗುವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಮಂಗಳವಾರದಂದು ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವಿಜಯಪುರ, ಅನುಷ್ಠಾನ ಕೆ.ಆರ್.ಐ.ಡಿ.ಎಲ್. ವಿಜಯಪುರ, ೨೦೨೨-೨೩ ನೇ ಸಾಲಿನ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ರೂ.೫೦ ಲಕ್ಷಗಳ ಅನುದಾನದಲ್ಲಿ ಸಿಸಿ ರಸ್ತೆಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಿಂದಗಿ ಮತ ಕ್ಷೇತ್ರದಲ್ಲಿ ಅನೇಕ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ದ ಕುಡಿಯುವ ನೀರು, ಉತ್ತಮ ಸಿಸಿ ರಸ್ತೆ ನಿರ್ಮಾಣ, ವಿದ್ಯುತ್ಮ ಶಿಕ್ಷಣ ಹಾಗೂ ಆರೋಗ್ಯದ ಕಡೆಗೆ ಹೆಚ್ಚು ಗಮನ ಸೆಳೆಯಲಾಗುತ್ತಿದೆ. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತಿದ್ದು ಆ ನಿಟ್ಟಿನಲ್ಲಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಸಿಸಿ ರಸ್ತೆಯ ನಿರ್ಮಾಣದ ಕಾಮಗಾರಿ ಕಾರ್ಯ ಸದ್ಯ ಪ್ರಾರಂಭವಾಗುತ್ತದೆ. ಮುಂದಿನ ದಿನಮಾನಗಳಲ್ಲಿ ತಾಲೂಕಿನ ಎಲ್ಲ ಗ್ರಾಮಗಳ ಪರಿಶಿಷ್ಟ ಜಾತಿ ಕಾಲೋನಿಗಳನ್ನು ನಾನು ಪ್ರಾಮಾನಿಕವಾಗಿ ಅಭಿವೃದ್ದಿ ಪಡಿಸುವ ಕನಸನ್ನು ಹೊತ್ತುಕೊಂಡಿದ್ದೇನೆ ಎಂದ ಅವರು ಸಿಂದಗಿ ನಗರದಲ್ಲಿ ೨೪*೭ ಕುಡಿಯುವ ನೀರಿನ ವ್ಯವಸ್ಥೆ, ಹೊಸ ವಿದ್ಯುತ್ತ ಕಂಬಗಳ ಜೋಡಣೆ ಸೇರಿದಂತೆ ಹತ್ತು ಹಲವಾರು ಕಾಮಗಾರಿಯ ಭೂಮಿ ಪೂಜೆಯು ಇನ್ನು ಕೇಲವೆ ದಿನಗಳಲ್ಲಿ ಆರಂಭಗೊಳ್ಳಲಿವೆ ಎಂದರು.
ಈ ವೇಳೆ ಕಾಂಗ್ರೆಸ್ ಬ್ಲಾಕ್ ಸಮಿತಿ ತಾಲೂಕಾಧ್ಯಕ್ಷ ಸುರೇಶ ಪೂಜಾರಿ, ಶಿವಣ್ಣ ಕೋಟರಗಸ್ತಿ, ಚೇತನಗೌಡ ಪಾಟೀಲ ಯಂಕಂಚಿ, ಚಿಕ್ಕಸಿಂದಗಿ ಗ್ರಾಮದ ರವಿಸ್ವಾಮಿ ಹತ್ತರಕಿಹಾಳಮಠ, ಚಂದ್ರಕಾಂತ ಬೂದಿಹಾಳ, ಶ್ರೀನಿವಾಸ ಓಲೇಕಾರ, ಮಲ್ಲಿಕಾರ್ಜುನ ಅವಟಿ, ಸಂಜೀವ ಬಮ್ಮನಹಳ್ಳಿ, ಪರುಶುರಾಮ ಬಗಲಿ, ಅಜೀಜ ಅವಟಿ, ಬಂದೇನಮಾಜ ಅವಟಿ, ಷನ್ಮುಖ ಓಲೇಕಾರ, ನಾನಾಗೌಡ ನಾಗಾವಿ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

