ಬಸವನಬಾಗೇವಾಡಿ: ತಾಲೂಕಿನ ಡೋಣೂರ ಗ್ರಾಮದ ಆಸರೆ ಕಾಲೋನಿಯಲ್ಲಿ ಮಸೀದಿ ಜಾಗೆಯನ್ನು ಗುರುತಿಸಿ ಕೊಡುವಂತೆ ಮಂಗಳವಾರ ಗ್ರಾಮದ ಅಂಜುಮನ್-ಏ-ಇಸ್ಲಾಂ ಕಮಿಟಿ ಹಾಗೂ ಟಿಪ್ಪು ಕ್ರಾಂತಿ ಸೇನೆಯಿಂದ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಟಿಪ್ಪು ಕ್ರಾಂತಿ ಸೇನೆಯ ಖಾಜಂಬರ ನಧಾಪ ಮಾತನಾಡಿ, ಡೋಣೂರ ಗ್ರಾಮದ ಆಸರೆ ಕಾಲೋನಿಯಲ್ಲಿ ಮುಸ್ಲಿಂ ಸಮುದಾಯ ಬಾಂಧವರಿಗೆ ಪ್ರಾರ್ಥನಾ ಮಂದಿರ, ದರ್ಗಾ, ಉರ್ದು ಶಾಲೆ, ಈದ್ಗಾ ಹಾಗೂ ಖಬರಸ್ತಾನಕ್ಕೆ ಸೂಕ್ತವಾದ ಸ್ಥಳವಿಲ್ಲ. ಬೇರೆ ಸಮಾಜ ಬಾಂಧವರು ತಮ್ಮ ಜಾಗೆಯನ್ನು ಗುರುತಿಸಿಕೊಂಡು ತಮ್ಮ ಕಬ್ಜಾದಲ್ಲಿ ಇಟ್ಟುಕೊಂಡಿದ್ದಾರೆ. ಮುಸ್ಲಿಂ ಸಮಾಜ ಬಾಂಧವರಿಗೆ ಯಾವುದೇ ಜಾಗವನ್ನು ಇದುವರೆಗೂ ಗುರುತಿಸಿ ಕೊಟ್ಟಿಲ್ಲ. ಇದರಿಂದ ಮುಸ್ಲಿ ಸಮಾಜ ಬಾಂಧವರಿಗೆ ದಿನಾಲೂ ನಮಾಜ ಮಾಡಲು ತೊಂದರೆಯಾಗುತ್ತಿದೆ. ನಮ್ಮ ಸಮಾಜ ಬಾಂಧವರಿಗೆ ಪ್ರಾರ್ಥನಾ ಮಂದಿರ, ದರ್ಗಾ, ಉರ್ದು ಶಾಲೆ, ಈದ್ಗಾ ಹಾಗೂ ಖಬರಸ್ತಾನಕ್ಕೆ ಸೂಕ್ತವಾದ ಸ್ಥಳವನ್ನು ಶೀಘ್ರವೇ ಗುರುತಿಸಿಕೊಡಬೇಕು. ನಮ್ಮ ಸಮಾಜದ ಜಾಗವನ್ನು ನಾವೇ ಗುರುತಿಸಿ ಪಡೆದುಕೊಳ್ಳಲು ಹೋದರೆ ಗ್ರಾಮದಲ್ಲಿ ಅಶಾಂತಿ ಹುಟ್ಟುವ ಸಂಭವವಿರುತ್ತದೆ. ಕೂಡಲೇ ತಾಲೂಕಾಡಳಿತವು ನಮ್ಮ ಸಮಾಜ ಬಾಂಧವರಿಗೆ ಸಂಬಂಧಪಟ್ಟಿರುವ ಜಾಗೆಯನ್ನು ಗುರುತಿಸಿ ಕೊಡಬೇಕೆಂದು ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಅಂಜುಮನ್ ಇಸ್ಲಾಂ ಕಮೀಟಿಯ ಅಧ್ಯಕ್ಷ ಅಮೀನಸಾಬ ಹುಡೇದಗಡ್ಡಿ, ಬಂದೇನವಾಜ ಸುತಾರ, ನಾಸೀರ ತಾಂಬೋಳಿ, ಅಬೀದ ತಾಂಬೋಳಿ, ಮಹಿಬೂಬ ಸುತಾರ, ರಹಿಮಾನ ಮುಲ್ಲಾ, ಕಾಶೀಂಸಾಬ ಸುತಾರ, ಸುಲೇಮಾನ ಗೌಂಡಿ, ಅಬುಸಾಬ ಮುಲ್ಲಾ, ಇಸ್ಮಾಯಿಲ್ ಮುಲ್ಲಾ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

