ಕೊಲ್ಹಾರ: ಸಮಾಜದಲ್ಲಿ ರಾಜಕೀಯ ಗಣ್ಯರು ವ್ಯಾಪಾರಸ್ಥರು ಉದ್ಯಮಿಗಳು, ಯುವ ನೇತಾರರು ತಮ್ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಡಂಬರದ ಸಾರ್ವಜನಿಕರಿಗೆ ಪ್ರತಿಷ್ಟೆ ತೋರಿಸುವ ಸಲುವಾಗಿ ಆಚರಣೆ ಮಾಡಿಕೊಳ್ಳುವ ಇಂದಿನ ದಿನಮಾನಗಳಲ್ಲಿ ಕೊಲ್ಹಾರದ ದೇಸಗತಿ ಮನೆತನದ ಯುವ ಮುಖಂಡರಾದ ವಿನೀತಕುಮಾರ ದೇಸಾಯಿಯವರು ತಮ್ಮ ೩೫ನೇ ಹುಟ್ಟುಹಬ್ಬವನ್ನು ಶುಕ್ರವಾರ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿಕೊಂಡಿದ್ದಾರೆ.
ನಸುಕಿನ ಜಾವ ನಾಲ್ಕು ಘಂಟೆಗೆ ಬಾಗಲಕೋಟ ಜಿಲ್ಲೆಯ ಮುಚಖಂಡಿ ಗ್ರಾಮದಲ್ಲಿರುವ ಬಸವೇಶ್ವರ ಸಂಸ್ಥೆಯ ಗೋಶಾಲೆಗೆ ತೆರಳಿ ಸುಮಾರು ೧೧ ಸಾವಿರ ರೂಪಾಯಿಯ ಮೇವು ಖರೀದಿ ಮಾಡಿ ೧೬೦ ಜಾನುವಾರುಗಳಿಗೆ ತಾವೇ ಖುದ್ದಾಗಿ ಮೇವಿನ ಆಹಾರವನ್ನು ಪೂರೈಕೆ ಮಾಡಿದರು ಅದರಂತೆ ಬೆಂಗಳೂರಿನ ಇಸ್ಕಾನ್ ಸಂಸ್ಥೆಯವರು ನಡೆಸಿಕೊಂಡು ಬರುತ್ತಿರುವ ಅನಾಥಾಶ್ರಮಕ್ಕೆ ೧೧ ಸಾವಿರ ರೂಪಾಯಿಗಳ ದೇಣಿಗೆಯನ್ನು ನೀಡಿದರು. ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ತೆರಳಿ ಆಡಳಿತ ಮಂಡಳಿಗೆ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಸಹಾಯ ಮಾಡಿರುವದು ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಜನರಿಗೆ ಇವರು ಮಾಡಿರುವ ಕಾರ್ಯ ಆದರ್ಶ ಪ್ರಾಯವಾಗಿದೆ.
ಕುಟುಂಬವ್ಯವಸ್ಥೆಯಲ್ಲಿ ಬದುಕುವಾಗ ಸಮಾಜದ ಮಧ್ಯದಲ್ಲಿ ನಾವುಗಳು ನಡೆದುಕೊಳ್ಳುವ ರೀತಿ ಪರೋಪಕಾರಂ ಇದಂ ಶರೀರಂ ಎನ್ನುವ ರೀತಿಯಲ್ಲಿ ಕೊಲ್ಹಾರದ ದೇಸಗತಿ ಮನೆತನದವರು ಬಡವರ ದೀನ ದಲಿತರ ಕೂಲಿ ಕಾರ್ಮಿಕರಿಗೆ ಮೊದಲಿನಿಂದಲೂ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು ಅಂತಹ ಮನೆತನದ ವಿನೀತಕುಮಾರ ದೇಸಾಯಿಯವರಿಂದ ಮತ್ತಷ್ಟು ದಾನ ಧರ್ಮ, ನ್ಯಾಯ, ಸತ್ಕಾರ್ಯಗಳು ಜರುಗವಂತಾಗಲಿ ಎಂದು ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರ ಆಶಯವಾಗಿದೆ.
ಈ ವೇಳೆ ಮುರುಘೇಂದ್ರ ಮಹಾಸ್ವಾಮಿಗಳು, ಈರಪ್ಪ ಗಿಡ್ಡಪ್ಪಗೋಳ, ಚನ್ನಪ್ಪ ಬಗಲಿ, ರಾಕೇಶ ಕೆಳಗಿನಮನಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

