ಇಂಡಿ: ತಾಲೂಕಿನ ಅರಣ್ಯ ಪ್ರದೇಶ ಸಾವಳಸಂಗ ಗುಡ್ಡಕ್ಕೆ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ನೀಡಿದರು.
ಅಲ್ಲಿ ಹೊಸದಾಗಿ ನಿರ್ಮಿಸುವ ಅಂತರ ರಾಷ್ಟ್ರೀಯ ಗುಡ್ಡಗಾಡು ಸೈಕ್ಲಿಂಗ್ ಪಾರ್ಕ ಕುರಿತು ಸೈಕ್ಲಿಂಗ್ ಸಂಘದ ಅಧ್ಯಕ್ಷ ದೇಸಾಯಿ ಇವರ ಜೊತೆ ಚರ್ಚೆ ನಡೆಸಿ ಸ್ಥಳ ಪರಿಶೀಲನೆ ನಡೆಸಿದರು.
ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಸಾವಳಸಂಗ ಅರಣ್ಯ ಪ್ರದೇಶವನ್ನು ಪ್ರವಾಸಿ ತಾಣವಾಗಿ ಮಾಡಬೇಕು. ಟ್ರೀ ಪಾರ್ಕ, ಜಿಪಲಾಯಿನ್, ರೋಪವಾಕ್ ಮತ್ತು ಸಾಹಸಮಯ ಕ್ರೀಡೆಗಳಿಗೆ ಪ್ರೋತ್ಸಾಹಿಸುವ ಕ್ರೀಡಾ ಸ್ಥಳಗಳನ್ನು ನಿರ್ಮಿಸಲು ಕೇಳಿಕೊಂಡರು.
ಸಾವಳಸಂಗದಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಲು ಖಾಸಗಿಯವರು ತಮ್ಮ ಜಮೀನು ಮಾರುವವರಿದ್ದರೆ ಈ ಕುರಿತು ಪರಿಶೀಲಿಸಲು ತಿಳಿಸಿದರು.
ನಂತರ ಅಮೃತ ಸರೋವರ ಪ್ರದೇಶವನ್ನು ವೀಕ್ಷಿಸಿದರು.
ಜಿ.ಪಂ ಸಿಇಒ ರಿಷಿ ಆನಂದ, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ರಿಸಿಕೇಶ ಭಗವಾನ, ಇಂಡಿ ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ, ವಲಯ ಅರಣ್ಯಾಧಿಕಾರಿ ಮಂಜುನಾಥ ಧುಳೆ, ಇಒ ಸಂಜಯ ಖಡಗೇಕರ, ಚಡಚಣ ತಹಸೀಲ್ದಾರ ಸಂಜಯ ಇಂಗಳೆ,ಸಾಹಿಲ್ ಧನಶೆಟ್ಟಿ, ವಿನೋದ ಸಜ್ಜನ, ರಾಮಗೌಡ ಸರಬಡಗಿ, ಪಿಡಿಒ ಸಿದ್ದು ಲೋಣಿ, ಗ್ರಾ.ಪಂ ಅಧ್ಯಕ್ಷ,ಉಪಾಧ್ಯಕ್ಷರು ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

