ವಿಜಯಪುರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನನ್ನ ಗಿಡ ನನ್ನ ಭೂಮಿ ತಂಡ ಹಾಗೂ ವಿವಿಧ ಪರಿಸರ ಸಂಘಟನೆಗಳ ಸಹಯೋಗದೊಂದಿಗೆ ಜ್ಞಾನ ಯೋಗಾಶ್ರಮದ ಮಾರ್ಗದರ್ಶನದಲ್ಲಿ ಈ ನಾಡಿನ ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಡೆದಾಡಿದ ಸ್ಥಳವಾದ ಬರಟಗೇರಿ ರಸ್ತೆಯ ಪೂನಮ್ ನಗರದಲ್ಲಿ ಏಕಕಾಲಕ್ಕೆ 200 ಕ್ಕೂ ಹೆಚ್ಚು ಗಿಡಗಳನ್ನು
ಹಚ್ಚುವುದರ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.
ಜ್ಞಾನ ಯೋಗ ಆಶ್ರಮದ ಪೂಜ್ಯಶ್ರೀ ಬಸವಲಿಂಗ ಸ್ವಾಮಿಗಳು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪರಿಸರ ಉಳಿದರೆ ಮಾತ್ರ ಮನುಕುಲದ ಉಳಿವು, ಅದಕ್ಕಾಗಿ ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು, ದಿವ್ಯ ಸಾನಿಧ್ಯವನ್ನು ವಹಿಸಿದ ಈಶಪ್ರಸಾದ ಮಹಾಸ್ವಾಮಿಗಳು ಗುರುದೇವಶ್ರಮ ಅಥರ್ಗಾ ಅವರು ಮಾತನಾಡಿ, ಜಾಗತಿಕ ತಾಪಮಾನವನ್ನು ಪ್ರಕೃತಿ ನಮಗೆ ಕೊಡುವ ಎಚ್ಚರಿಕೆಯ ಗಂಟೆಯನ್ನಾಗಿ ತಿಳಿದುಕೊಂಡು ಗಿಡಗಳನ್ನು ನೆಟ್ಟು ಬೆಳೆಸುವುದೊಂದೇ ಅದಕ್ಕಿರುವ ಪರಿಹಾರ, ಈ ಪವಿತ್ರ ಕಾರ್ಯವನ್ನು ಮಾಡುತ್ತಿರುವ ನನ್ನ ಗಿಡ ನನ್ನ ಭೂಮಿ ತಂಡದ ಕೆಲಸವನ್ನು ಶ್ಲಾಘಿಸಿದರು
ಪ್ರಸ್ತಾವಿಕವಾಗಿ ನನ್ನ ಗಿಡ ನನ್ನ ಭೂಮಿ ತಂಡದ ಸಂಚಾಲಕ ಬಸವರಾಜ ಬೈಚಬಾಳವರು ಮಾತನಾಡಿ, ಸಿದ್ದೇಶ್ವರ ಶ್ರೀಗಳ ಪರಿಸರ ಕಾಳಜಿಯೇ ನಮ್ಮ ತಂಡಕ್ಕೆ ಪ್ರೇರಣೆ ಮತ್ತು ಶಕ್ತಿ , ಹಾಗಾಗಿ ಅವರು ನಡೆದಾಡಿದ ಈ ಜಾಗವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುವುದು ನಮ್ಮ ಸಂಕಲ್ಪ ಎಂದರು.
ತಂಡದ ಸದಸ್ಯ ಸಿದ್ದರಾಮ ಕರಲಗಿ ಸ್ವಾಗತಿಸಿದರು. ಉದಯ ನಾವಲಗಿ ನಿರೂಪಿಸಿದರು. ನೀಲಕಂಠ ವಾಲಿಕಾರ ವಂದಿಸಿದರು.
ಕಾರ್ಯಕ್ರಮದಲ್ಲಿ ತಂಡದ ಸಹ ಸಂಚಾಲಕ ಮಂಜು ಆಸಂಗಿ, ಶಶಿಧರ್ ರೂಡಗಿ, ಗಿರೀಶ್ ಪಾಟೀಲ್, ಶರಣಬಸು ಕುಂಬಾರ, ಪ್ರವೀಣ್ ಕೂಡ್ಗಿ, ರವಿ ಬಿರಾದಾರ್ ಆನಂದ ಅಥಣಿ ವಿಜು ಬೋಸ್ಲೆ, ವೀರೇಶ್ ಮುದುಕಾಮಠ ಸೇರಿದಂತೆ 300 ಹೆಚ್ಚು ಪರಿಸರ ಪ್ರೇಮಿಗಳಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

