Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ

ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬೀಜ ವಿತರಣೆ ಕಾರ್ಯಕ್ಕೆ ಚಾಲನೆ: ತೊಗರಿ ಬೀಜಕ್ಕೆ ಬಹಳ ಬೇಡಿಕೆ
(ರಾಜ್ಯ ) ಜಿಲ್ಲೆ

ಬೀಜ ವಿತರಣೆ ಕಾರ್ಯಕ್ಕೆ ಚಾಲನೆ: ತೊಗರಿ ಬೀಜಕ್ಕೆ ಬಹಳ ಬೇಡಿಕೆ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಮುಂಗಾರು ಹಂಗಾಮಿನ ಆರಂಭದ ಮುನ್ನವೇ ಕೆಲ ದಿನಗಳ ಹಿಂದೆ ಅಲ್ಪಸ್ವಲ್ಪ ಮಳೆರಾಯನ ದರ್ಶನವಾಗುತ್ತಿದ್ದಂತೆ ರೈತ ಬಾಂಧವರು ಬಿತ್ತನೆ ಕಡೆಗೆ ಮುಖ ಮಾಡುತ್ತಿದ್ದಾರೆ. ರೈತ ಬಾಂಧವರು ಬಿತ್ತನೆಗೆ ಬೇಕಾದ ಬೀಜಗಳನ್ನು ಖರೀದಿಸುವುದರಲ್ಲಿ ತಲ್ಲೀನರಾಗಿದ್ದಾರೆ.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಬೀಜ ಪಡೆಯಲು ಸರದಿಯಲ್ಲಿ ನಿಂತು ಮೊದಲು ಟೋಕನ್ ಪಡೆದುಕೊಂಡ ನಂತರ ತಮ್ಮ ಆಧಾರ ಕಾರ್ಡ್ ನೀಡಿ ತಮಗೆ ಅಗತ್ಯವಿರುವ ಬೀಜಗಳಿಗೆ ರಸೀದಿ ಮಾಡಿಸಿಕೊಂಡು ಹಣ ಪಾವತಿ ಮಾಡಿದ ನಂತರ ಬೀಜ ವಿತರಣೆ ಕಾರ್ಯ ಮಾಡುತ್ತಿರುವದು ಕಂಡುಬಂದಿತ್ತು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ಕೃಷಿ ಅಧಿಕಾರಿ ಚಿದಾನಂದ ಹಿರೇಮಠ ಅವರು ಬೀಜ ವಿತರಿಸಿದರು.
ಈ ಸಂದರ್ಭದಲ್ಲಿ ಅರವಿಂದ ಮುರಾಳ, ಪ್ರದೀಪ ಕತ್ನಳ್ಳಿ ಹಣಮಂತ ನಾಗರಾಳ, ರಾಮಣ್ಣ ಹೊಸಮನಿ, ಕಾಜಅಹ್ಮದ ಮುಜಾವರ, ಶಂಕರ ಬಾಗೇವಾಡಿ, ಶಿವಾನಂದ ಕಾರಜೋಳ, ಇಮಾಮ ಚಪ್ಪರಬಂದ, ಆನಂದ ಮ್ಯಾಗೇರಿ ಇತರರು ಇದ್ದರು.
ಮುಂಗಾರು ಹಂಗಾಮಿನಲ್ಲಿ ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ವಿವಿಧ ಬೀಜಗಳ ಬೇಡಿಕೆ ವಿವರ: ಬಸವನಬಾಗೇವಾಡಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ೨.೫೦ ಕ್ವಿಂಟಾಲ್ ಸಜ್ಜೆ, ೩೦೦ ಕ್ವಿಂಟಾಲ್ ಗೋವಿನಜೋಳ, ೩೫೦ಕ್ವಿಂಟಾಲ್ ತೊಗರಿ, ೨ ಕ್ವಿಂಟಾಲ್ ಹೆಸರು, ೨ ಕ್ವಿಂಟಾಲ್ ಉದ್ದು, ೧.೫೦ ಕ್ವಿಂಟಾಲ್ ಸೂರ್ಯಕಾಂತಿ ಸೇರಿ ೬೫೮ ಕ್ವಿಂಟಾಲ್ ಬೀಜಗಳ ಬೇಡಿಕೆಯಿದ್ದರೆ, ಹೂವಿನಹಿಪ್ಪರಗಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ೧ ಕ್ವಿಂಟಾಲ್ ನವಣೆ, ೫ ಕ್ವಿಂಟಾಲ್ ಸಜ್ಜೆ, ೨೫೦ ಕ್ವಿಂಟಾಲ್ ಗೋವಿನಜೋಳ, ೪೫೦ ಕ್ವಿಂಟಾಲ್ ತೊಗರಿ, ೫ ಕ್ವಿಂಟಾಲ್ ಹೆಸರು, ೨ ಕ್ವಿಂಟಾಲ್ ಉದ್ದು, ೨೦ ಕ್ವಿಂಟಾಲ್ ಶೇಂಗಾ, ೫ ಕ್ವಿಂಟಾಲ್ ಸೂರ್ಯಕಾಂತಿ ಸೇರಿ ೭೩೮ ಕ್ವಿಂಟಾಲ್ ಬೀಜ ಬೇಡಿಕೆಯಿದೆ. ಕೊಲ್ಹಾರ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ೧೦ ಕ್ವಿಂಟಾಲ್ ಸಜ್ಜೆ, ೮೫೦ ಕ್ವಿಂಟಾಲ್ ಗೋವಿನಜೋಳ, ೨೫೦ ಕ್ವಿಂಟಾಲ್ ತೊಗರಿ, ೫ ಕ್ವಿಂಟಾಲ್ ಹೆಸರು, ೨ ಕ್ವಿಂಟಾಲ್ ಸೂರ್ಯಕಾಂತಿ ಸೇರಿ ೧೧೧೭ ಕ್ವಿಂಟಾಲ್ ಬೀಜದ ಬೇಡಿಕೆಯಿದೆ. ಮನಗೂಳಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ೫ ಕ್ವಿಂಟಾಲ್ ಸಜ್ಜೆ, ೫೦೦ ಕ್ವಿಂಟಾಲ್ ಗೋವಿನಜೋಳ, ೧೦೦೦ ಕ್ವಿಂಟಾಲ್ ತೊಗರಿ, ೫ ಕ್ವಿಂಟಾಲ್ ಹೆಸರು, ೫ ಕ್ವಿಂಟಾಲ್ ಉದ್ದು, ೧೦ ಕ್ವಿಂಟಾಲ್ ಶೇಂಗಾ, ೫ ಕ್ವಿಂಟಾಲ್ ಸೂರ್ಯಕಾಂತಿ ಸೇರಿ ೧೫೩೦ ಕ್ವಿಂಟಾಲ್ ಬೀಜದ ಬೇಡಿಕೆಯಿದೆ. ನಿಡಗುಂದಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ೬೦೦ ಕ್ವಿಂಟಾಲ್ ಗೋವಿನಜೋಳ, ೧೫೦ ಕ್ವಿಂಟಾಲ್ ತೊಗರಿ, ೫ ಕ್ವಿಂಟಾಲ್ ಹೆಸರು, ೨ ಕ್ವಿಂಟಾಲ್ ಸೂರ್ಯಕಾಂತಿ ಸೇರಿ ೭೫೭ ಕ್ವಿಂಟಾಲ್ ಬೀಜದ ಬೇಡಿಕೆಯಿದೆ. ಅಖಂಡ ತಾಲೂಕಿಗೆ ಎಲ್ಲ ಬೀಜಗಳು ಸೇರಿ ಒಟ್ಟು 4,800 ಕ್ವಿಂಟಾಲ್ ಬೇಡಿಕೆಯಿದೆ. ಇದರಲ್ಲಿ 662.87 ಕ್ವಿಂಟಾಲ್ ಬೀಜ ಪೂರೈಕೆಯಾಗಿದೆ.
ಬಸವನಬಾಗೇವಾಡಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ೩೦.೭೨ ಕ್ವಿಂಟಾಲ್ ಗೋವಿನ ಜೋಳ ಬಂದಿದೆ. ಇದರಲ್ಲಿ ೮.೭೨ ಕ್ವಿಂಟಾಲ್ ವಿತರಣೆಯಾಗಿದೆ. ೯೭.೮ ಕ್ವಿಂಟಾಲ್ ತೊಗರಿ ಬಂದಿದ್ದು. ಇದರಲ್ಲಿ ೫೬.೮೫ ಕ್ವಿಂಟಾಲ್ ತೊಗರಿ ಬೀಜ ವಿತರಣೆಯಾಗಿದೆ. ೨.೪ ಕ್ವಿಂಟಾಲ್ ಹೆಸರು ಬೀಜ ಬಂದಿದೆ. ಇದರಲ್ಲಿ ೫೫ ಕೆಜಿ ಹೆಸರು ವಿತರಣೆಯಾಗಿದೆ. ಹೂವಿನಹಿಪ್ಪರಗಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ೧೦ ಕ್ವಿಂಟಾಲ್ ಗೋವಿನ ಜೋಳ ಬಂದಿದೆ. ಇದುವರೆಗೂ ಗೋವಿನಜೋಳ ಮಾರಾಟವಾಗಿಲ್ಲ. ೧೩೨.೬ ಕ್ವಿಂಟಾಲ್ ತೊಗರಿ ಬೀಜ ಬಂದಿದೆ. ಇದರಲ್ಲಿ ೮೩.೮ ಕ್ವಿಂಟಾಲ್ ವಿತರಣೆಯಾಗಿದೆ. ೨.೪ ಕ್ವಿಂಟಾಲ್ ಹೆಸರು ಬೀಜ ಬಂದಿದೆ. ಇದರಲ್ಲಿ ೨ ಕೆಜಿ ವಿತರಣೆಯಾಗಿದೆ. ೨.೧ ಕ್ವಿಂಟಾಲ್ ಸಜ್ಜೆ ಬೀಜ ಬಂದಿದೆ. ಸಜ್ಜೆ ಬೀಜ ವಿತರಣೆಯಾಗಿಲ್ಲ. ಕೊಲ್ಹಾರ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ೬೦.೩೨ ಕ್ವಿಂಟಾಲ್ ಗೋವಿನಜೋಳ ಬೀಜ ಬಂದಿದೆ. ಇದರಲ್ಲಿ ೨೦.೨ ಕ್ವಿಂಟಾಲ್ ವಿತರಣೆಯಾಗಿದೆ. ೪೩.೮ ಕ್ವಿಂಟಾಲ್ ತೊಗರಿ ಬೀಜ ಬಂದಿದೆ. ಇದರಲ್ಲಿ ೨೨.೨ ಕ್ವಿಂಟಾಲ್ ವಿತರಣೆಯಾಗಿದೆ. ೩ ಕ್ವಿಂಟಾಲ್ ಹೆಸರು ಬೀಜ ಬಂದಿದೆ. ಇದರಲ್ಲಿ ೬ ಕೆಜಿ ವಿತರಣೆಯಾಗಿದೆ. ಮನಗೂಳಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ೪೦.೬೮ ಕ್ವಿಂಟಾಲ್ ಗೋವಿನಜೋಳ ಬೀಜ ಬಂದಿದೆ. ಇದರಲ್ಲಿ ೧.೩೪ ಕ್ವಿಂಟಾಲ್ ವಿತರಣೆಯಾಗಿದೆ. ೧೧೭ ಕ್ವಿಂಟಾಲ್ ತೊಗರಿ ಬೀಜ ಬಂದಿದೆ. ಇದರಲ್ಲಿ ೬೧.೭೫ ಕ್ವಿಂಟಾಲ್ ವಿತರಣೆಯಾಗಿದೆ. ೩ ಕ್ವಿಂಟಾಲ್ ಹೆಸರು ಬೀಜ ಬಂದಿದೆ. ಇದರಲ್ಲಿ ೬ ಕೆಜಿ ವಿತರಣೆಯಾಗಿದೆ. ನಿಡಗುಂದಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ೧೧೨.೨ ಕ್ವಿಂಟಾಲ್ ೧೧೨.೨ ಕ್ವಿಂಟಾಲ್ ತೊಗರಿ ಬೀಜ ಬಂದಿದೆ. ಇದರಲ್ಲಿ ೭೫.೫೫ ಕ್ವಿಂಟಾಲ್ ವಿತರಣೆಯಾಗಿದೆ. ೨ ಕ್ವಿಂಟಾಲ್ ಹೆಸರು ಬೀಜ ಬಂದಿದೆ. ಇದರಲ್ಲಿ ೫೫ ಕೆಜಿ ವಿತರಣೆಯಾಗಿದೆ ಎಂದು ಕೃಷಿ ಇಲಾಖೆಯು ತಿಳಿಸಿದೆ.
ಅಖಂಡ ತಾಲೂಕಿನಲ್ಲಿ ಬಹುತೇಕ ರೈತರು ತೊಗರಿ ಬಿತ್ತನೆ ಮಾಡಲು ಮುಂದಾಗಿರುವುದರಿಂದಾಗಿ ತೊಗರಿ ಬೀಜಕ್ಕೆ ಬಹು ಬೇಡಿಕೆ ಕಂಡು ಬರುತ್ತಿದೆ. ಒಣಬೇಸಾಯಿಕ್ಕೆ ಟಿಎಸ್ತ್ರಿಆರ್ ತೊಗರಿ ಬೀಜ ರೈತರು ಖರೀದಿ ಮಾಡುತ್ತಿದ್ದಾರೆ. ಎಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ ಬೀಜ ಸದ್ಯ ದಾಸ್ತಾನು ಇದೆ. ಬೀಜಕ್ಕೆ ತೊಂದರೆಯಾಗಿಲ್ಲ. ಅಗತ್ಯವಿರುವ ಗೊಬ್ಬರ ಗೊಬ್ಬರ ಮಳಿಗೆಗಳಲ್ಲಿ ದಾಸ್ತಾನು ಇದೆ.
ಬಸವನಬಾಗೇವಾಡಿ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಖರೀದಿಸಲು ಆಗಮಿಸಿದ್ದ ಬಸವನಹಟ್ಟಿಯ ರೈತ ಇಬ್ರಾಹಿಂ ಹಳ್ಳಿ ಅವರನ್ನು ಮಾತನಾಡಿಸಿದಾಗ, ಕೆಲ ದಿನಗಳ ಹಿಂದೆ ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಮಳೆಯಾಗುವ ಲಕ್ಷಣ ಗೋಚರಿಸಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬೀಜ ಖಾಲಿಯಾದರೆ ತೊಂದರೆಯಾಗುತ್ತದೆ.ಅದಕ್ಕಾಗಿ ಈಗಲೇ ಬೀಜ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದೇನೆ. ಬಿತ್ತನೆ ಅಗತ್ಯವಿರುವ ಮಳೆಯಾದ ನಂತರ ಬಿತ್ತನೆ ಕಾರ್ಯ ಮಾಡಲಾಗುವುದು. ಈ ಸಲ ಬೀಜದ ದರ ಹೆಚ್ಚಳವಾಗಿದೆ. ಇದು ಹೊರೆಯಾಗಿದೆ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಚ್.ಯರಝರಿ ಅವರನ್ನು ಸಂಪರ್ಕಿಸಿದಾಗ, ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಎಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ಎಲ್ಲ ಬೀಜಗಳು ದಾಸ್ತಾನು ಇದೆ. ಬೀಜ ವಿತರಣೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಅಖಂಡ ತಾಲೂಕಿನಲ್ಲಿ ಭೂಮಿ ತಯಾರಿಕೆಗೆ ಮಳೆಯಾಗಿದೆ.ಬಿತ್ತನೆಗೆ ಇನ್ನಷ್ಟು ಮಳೆ ಆಗುವ ಅಗತ್ಯವಿದೆ. ರೈತರು ಕಳಪೆ ಬೀಜಗಳನ್ನು ಖರೀದಿಸದೇ ಉತ್ತಮ ಗುಣಮಟ್ಟದ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಬೇಕು. ಅಖಂಡ ತಾಲೂಕಿನಲ್ಲಿರುವ ಐದು ಕೃಷಿ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಬೀಜಗಳ ಪ್ಯಾಕೆಟ್ ಮೇಲೆ ಕ್ಯೂಆರ್ ಕೋಡ್ ಇರುವದರಿಂದ ಅದನ್ನು ಸ್ಕ್ಯಾನ್ ಮಾಡಬೇಕಾಗಿರುವದರಿಂದ ಬೀಜಗಳ ಪ್ಯಾಕೆಟ್ಗಳನ್ನು ಕೊಡುವಾಗ ರೈತರು ಸಹಕರಿಸಬೇಕೆಂದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ

ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ

ಹಿಂದುತ್ವದ ಮೂಲಕ ದೇಶ, ಸಂವಿಧಾನವನ್ನು ಗೌರವಿಸೋಣ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ
    In (ರಾಜ್ಯ ) ಜಿಲ್ಲೆ
  • ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ
    In (ರಾಜ್ಯ ) ಜಿಲ್ಲೆ
  • ಹಿಂದುತ್ವದ ಮೂಲಕ ದೇಶ, ಸಂವಿಧಾನವನ್ನು ಗೌರವಿಸೋಣ
    In (ರಾಜ್ಯ ) ಜಿಲ್ಲೆ
  • ಶಾಸಕ ಮನಗೂಳಿ ಯಿಂದಅಹವಾಲು ಸ್ವೀಕಾರ
    In (ರಾಜ್ಯ ) ಜಿಲ್ಲೆ
  • ಇಂದು ವ್ಯಸನಮುಕ್ತ ಶಿಬಿರದ ಸಮಾರೋಪ :ಅಲ್ಲಾಪೂರ
    In (ರಾಜ್ಯ ) ಜಿಲ್ಲೆ
  • ಸಿಂದಗಿ: ಇಂದು ವಿದ್ಯುತ್ ವ್ಯತ್ಯೆಯ
    In (ರಾಜ್ಯ ) ಜಿಲ್ಲೆ
  • ಒಕ್ಕಲಿಗನೊಕ್ಕದಿರೆ ಬಿಕ್ಕುವುದು ಈ ಜಗವೆಲ್ಲ..
    In ವಿಶೇಷ ಲೇಖನ
  • ಕುಡಿವ ನೀರಿನ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಿ
    In (ರಾಜ್ಯ ) ಜಿಲ್ಲೆ
  • ಶರಣ ಭೋಗಣ್ಣನವರ ಕುರಿತು ಸಂಶೋಧನೆ ಅಗತ್ಯ :ಗೋಗಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.