ಹುಚ್ಚು ಮನಸಿದು ನಿನ್ನ
ಹಚ್ಚಿಕೊಂಡಿದೆ ನಲ್ಲ
ತುಚ್ಛವೆಣಿಸೇ ಕನಸು
ನುಚ್ಚು ನೂರೆಲ್ಲ
ರಚ್ಚೆ ಹಿಡಿದಿದೆ ಹೃದಯ
ಹೆಚ್ಚಿ ಪ್ರೀತಿಯ ಕಾವು
ಮುಚ್ಚು ಮರೆಯಿಲ್ಲದೆ
ಬಿಚ್ಚಿಹುದು ಭಾವ
ಹಚ್ಚೆ ಹಾಕಿಸಿಕೊಂಡೆ
ಮೆಚ್ಚಿ ನಿನ್ನಯ ಹೆಸರ
ವೆಚ್ಚವೇ ಇಲ್ಲದೆಯೆ
ಸ್ವಚ್ಛ ಮನಸಾರ…
ಕೊಚ್ಚಿಹೋಗುವೆ ನಾನು
ನೆಚ್ಚಿ ನೀಡಲು ಸ್ಥಾನ
ಮುಚ್ಚಿ ನಿನ್ನೆದೆಯೊಳಗೆ
ಬೆಚ್ಚಗಿರಿಸೆನ್ನ……