ವಿಜಯಪುರ: ಜಾನಪದ ಸಾಹಿತ್ಯ ಕೇವಲ ಮನರಂಜನೆಯ ವಸ್ತು ಅಲ್ಲ. ಅದು ಸಾರ್ವತ್ರಿಕ ಮೌಲ್ಯಗಳನ್ನು ಹಾಡು, ಗಾದೆ, ಒಡಪು, ಕಥೆ ಮತ್ತು ನುಡಿಗಳ ಮೂಲಕ ಜನತೆಗೆ ಕಲಾತ್ಮಕವಾಗಿ ತಲುಪಿಸಿ ಬದುಕು ಸುಧಾರಿಸುವ ಶ್ರೇಷ್ಠ ಪರಂಪರೆಯಾಗಿದೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಅಭಿಪ್ರಾಯಪಟ್ಟರು
ಕನ್ನಡ ಜಾನಪದ ಪರಿಷತ್ ತಾಲೂಕಾ ಘಟಕ ನಿಡಗುಂದಿ ಹಾಗೂ ಮಹರ್ಷಿ ವಾಲ್ಮೀಕಿ ಸಾಂಸ್ಕೃಿತಿಕ ಸಂಘ ಮುದ್ದಾಪುರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮುದ್ದಾಪುರ ಮಾರುತೇಶ್ವರ ದೇವಾಲಯದಲ್ಲಿ ಜಾನಪದ ಕಲಾ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ನಮ್ಮ ಹಳ್ಳಿಗಳು ಜಾನಪದ ಸಂಸ್ಕೃತಿಯನ್ನು ಜೋಪಾನವಾಗಿ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ . ಸಮಾಜ ಮತ್ತು ಸಂಘ ಸಂಸ್ಥೆಗಳು ಕಲಾವಿದರನ್ನು ಬೆಳೆಸಬೇಕೆಂದು ಮನವಿ ಮಾಡಿದರು.
ನಿಡಗುಂದಿ ತಾಲೂಕಾ ಕ ಜಾ ಪ ಅಧ್ಯಕ್ಷ ವೈ ಎಸ್ ಗಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕನ್ನಡ ಜಾನಪದ ಪರಿಷತ್ ವತಿಯಿಂದ ಹಳ್ಳಿಗಳಲ್ಲಿ ಕಲಾವಿದರನ್ನು ಗುರುತಿಸಿ ಅವರನ್ನು ಬೆಳೆಸುವ ಕೆಲಸ ಮಾಡುತ್ತಾ, ಕಲೆ-ಕಲಾವಿದರಗೆ ರಕ್ಷಣೆ ಒದಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮುದ್ದೇಬಿಹಾಳ ತಾಲ್ಲೂಕಾ ಕ ಜಾ ಪ ಅಧ್ಯಕ್ಷ ಎ ಆರ್ ಮುಲ್ಲಾ ನಮ್ಮ ಹಿರಿಯರು ಜನಪದ ನುಡಿಗಳ ಮೂಲಕ ಜನತೆಗೆ ಹೆಜ್ಜೆ ಹೆಜ್ಜೆಗೂ ಅರಿವು ಮೂಡಿಸುತ್ತ ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ಅಸರೆಯಾಗಿದ್ದಾರೆ ಎಂದರು .
ಶಿಕ್ಷಕರು ಹಾಗೂ ಕಲಾವಿದರಾದ ಸಿದ್ದು ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕ ಜಾ ಪ ಬಸವನಬಾಗೇವಾಡಿ ಆಧ್ಯಕ್ಷ ದೇವೇಂದ್ರ ಗೋನಾಳ,ದೇವರಹಿಪ್ಪರಗಿ ಅಧ್ಯಕ್ಷ ನಾನಾಗೌಡ ಪಾಟೀಲ ವಲಯ ಅಧ್ಯಕ್ಷ ಚಾಂದಸಾಬ ವಾಲಿಕಾರ, ಜಿಲ್ಲಾ ಘಟಕದ ಸದಸ್ಯ ಮೌಲಸಾಹೇಬ ಜಹಾಗೀರದಾರ ಎಸ್ ಅಯ್ ವಗ್ಗರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಳಿಯಾಳದ ಸೂತ್ರದ ಗೊಂಬೆ, ಭರತನಾಟ್ಯ, ತಮಟೆವಾದ್ಯ, ಉಪ್ಪಲದಿನ್ನಿ ಹೆಜ್ಜೆಮೇಳ, ಮುದ್ದಾಪುರ ಸಂಪ್ರದಾಯ ಪದ ಸೇರಿದಂತೆ ಸುಮಾರು ಹದಿನೈದು ಕಲಾ ತಂಡಗಳ ಪ್ರದರ್ಶನ ನಡೆಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

