ವಿಜಯಪುರ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆ ಇರುತ್ತದೆ. ಸೂಕ್ತ ವೇದಿಕೆ ಸಿಕ್ಕಾಗ ಅದು ಹೊರಗಡೆ ಬರುತ್ತದೆ. ನಾವು ಯಾವ ಶಾಲೆಯಲ್ಲಿ ಓದುತ್ತೇವೆ ಎನ್ನುವುದು ಮುಖ್ಯವಲ್ಲ. ಕಠಿಣ ಪರಿಶ್ರಮವೇ ನಮ್ಮ ಸಾಧನೆಗೆ ಮಾರ್ಗವಾಗುತ್ತದೆ ಎಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಿ.ಎಲ್.ಚವ್ಹಾಣ್‌ರವರು ಹೇಳಿದರು.
ಶನಿವಾರದಂದು ಬಂಜಾರಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು. ಎಲ್ಲಿಯೇ ಓದಿದರೂ ಶ್ರದ್ಧೆಯಿಂದ ಅಭ್ಯಾಸ ಮಾಡಿ, ಮುಂದೆ ಬರಬೇಕು. ಕಲಿತ ಶಾಲೆ, ತಂದೆ-ತಾಯಿಯರ ಕೀರ್ತಿ ಬೆಳಗುವ ಮಕ್ಕಳು ನಾವಾಗಬೇಕು. ಸತತ ಪ್ರಯತ್ನ ಕಠಿಣ ಪರಿಶ್ರಮ, ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಹಾಗೂ ಸಾಧಿಸಬೇಕೆಂಬ ಛಲವೊಂದಿದ್ದರೆ ಎಂತಹ ಸಾಧನೆಯನ್ನು ಮಾಡಬಹುದು ಎಂದು ಹೇಳಿದರು.
ಈ ವೇಳೆಯಲ್ಲಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಇ.ಡಿ.ಲಮಾಣಿಯವರು ಮಾತನಾಡುತ್ತ. ನಮ್ಮ ಜೀವನದಲ್ಲಿ ಎದುರಾಗುವ ಎಲ್ಲ ಸಂಕಷ್ಟ, ನೋವು-ನಲಿವು, ಅಡೆತಡೆ, ತೊಂದರೆ, ಸಮಸ್ಯೆ ಮತ್ತು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಸೋಲೇ ಗೆಲುವಿನ ಮೂಲ ಎಂಬ ನಾಣ್ಣುಡಿಯಂತೆ ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ನಿಂತು ಹೋರಾಡಿದರೆ ಯಶಸ್ಸು ಲಬಿಸುತ್ತದೆ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿ, ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳಾದ ತೃಪ್ತಿ ತೋದಲಬಾಗಿ, ಆರತಿ ಚವ್ಹಾಣ್, ಅಶ್ವಿನಿ ಚವ್ಹಾಣ್, ರೇಣುಕಾ ಕೋಲಕಾರ, ಅಜೀತ ಚವ್ಹಾಣ್, ಚಂಚಲಾ ಕಾಂಬಳೆ, ಲಕ್ಷ್ಮಿ ರಾಠೋಡ, ಐಶ್ವರ್ಯ ಪಟ್ಟಣದ ಹಾಗೂ ಸುಹಾಸಿನಿ ಕಿಟ್ಟದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸಂದೀಪ ರಾಠೋಡ, ಶಿಕ್ಷಕರುಗಳಾದ ಆರ್.ವಿ.ದೇಶಪಾಂಡೆ, ಎ.ಎಂ.ನಾಗೊಂಡ, ಆರ್.ಎನ್.ಬಕಾಟೆ, ಆರ್.ವಿ.ಭುಜಂಗನವರ, ಎಂ.ಎಲ್.ಚವ್ಹಾಣ್, ಜೆ.ಕೆ.ರಾಠೋಡ, ಎಸ್.ಡಿ.ಚವ್ಹಾಣ್, ಎಸ್.ಬಿ.ಒಡೆಯರ, ಎಸ್.ಕೆ.ಶಿಂಧೆ, ಎಸ್.ಎಂ.ಮಾಳಿ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

