ವಿಜಯಪುರ: ವೈದ್ಯಕೀಯ ಕ್ಷೇತ್ರದಲ್ಲಿ ಮಾನವೀಯ ಮೌಲ್ಯ ಸೇವಾ ಮನೋಭಾವವನ್ನು ಗುರುತಿಸುವ ಹಾಗೂ ಗೌರವಿಸುವ ಫ್ಲೋರೆನ್ಸ್ ನೈಟಿಂಗ್ ಗೇಲ್ ಅವರ ಜನ್ಮದಿನಾಚರಣೆಯನ್ನು ವಿಶ್ವದ್ಯಂತ ದಾದಿಯರ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ ಎಂದು ಐ ಎಂ ಎ ರಾಜ್ಯ ಶಾಖೆಯ ಏಎಂಎಸ್ ದ ಕಾರ್ಯದರ್ಶಿ ಡಾ. ಸುರೇಶ ಕಾಗಲ್ಕರ್ ಹೇಳಿದರು.
ನಗರದ ಕಿಡ್ನಿ ಕೇರ್ ಆಸ್ಪತ್ರೆಯಲ್ಲಿ ಇತ್ತೀಚಿಗೆ ಅಂತರಾಷ್ಟ್ರೀಯ ದಾದಿಯರ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಸಮಯದಲ್ಲಿ ಯೋಧರಂತೆ ಜೀವನವನ್ನೇ ಮುಡುಪಾಗಿಟ್ಟು ರೋಗಿಯನ್ನು ರಕ್ಷಿಸುವ ಕಾಯಕದಲ್ಲಿ ಹಗಲು ರಾತ್ರಿ ಎನ್ನದೆ ದುಡಿದಿದ್ದಾರೆ. ದಾದಿಯರು ನಗುಮುಖದಿಂದ ಶಿವ ನಿರ್ವಹಣೆಯನ್ನು ಮಾಡುವರು, ನೋವಿನಲ್ಲಿ ಧೈರ್ಯ ತುಂಬುವುದು ಕಷ್ಟದಲ್ಲಿ ಸಹಾಯ ಮಾಡುವ ಏಕೈಕ ಗುಣ ಇರುವುದು ಅದು ದಾದಿಯರ ಕರ್ತವ್ಯದಲ್ಲಿ ಇರುತ್ತದೆ ಅವರು ತಾಯಿಯ ರೂಪದಲ್ಲಿ ಅಕ್ಕ ತಂಗಿಯರ ರೂಪದಲ್ಲಿ ನಾವು ಕಾಣಬಹುದಾಗಿದೆ ಅವರ ಸೇವೆಗೆ ಬೆಲೆ ಕಟ್ಟಲಾಗದು ಎಂದು ಹೇಳಿದರು
ಸಮಾರಂಭದಲ್ಲಿ ವಿಜಯ್ ಬಡಿಗೇರ, ಬಸ್ಸು ಶಾಸ್ತ್ರಿ, ವಿಜಯ್, ಶಬನಾ, ಸಂತೋಷ್, ಪವಿತ್ರ, ಮುಜಬ್ ಮುಂತಾದವರು ಭಾಗವಹಿಸಿದ್ದರು ಕಾರ್ಯಕ್ರಮವನ್ನು ಸಾಗರ್ ನಿರ್ವಹಿಸಿ ವಂದನಾರ್ಪಣೆ ಮಾಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

