ಚಡಚಣ: ರಕ್ತಹೀನತೆ ಮತ್ತು ಅಪೌಷ್ಠಿಕ ಕಾರಣದಿಂದ ಬಳಲಿದಂತೆ ಕಾಣುವ ಮಕ್ಕಳಲ್ಲಿ ಜಂತು ಹುಳು ಸಾಧ್ಯತೆ ಇರುತ್ತದೆ. ಈ ಸಮಸ್ಯೆ ಇದ್ದವರಿಗೆ ಸೇವಿಸುವ ಆಹಾರದ ಶೇ.೩೦ರಿಂದ ೪೦ರಷ್ಟು ಭಾಗ ಜಂತು ಹುಳುಗಳ ಪಾಲಾಗುತ್ತದೆ. ಹೀಗಾಗಿ ರಕ್ತಹೀನತೆ, ದೇಹದ ತೂಕ ಹಾಗೂ ನೆನಪಿನ ಶಕ್ತಿ ಕಡಿಮೆಯಾಗುವುದರ ಜತೆಗೆ ನಾನಾ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಮಾತ್ರೆಗಳ ವಿತರಣೆ ಅಗತ್ಯವಿದೆ. ಮಕ್ಕಳಲ್ಲಿ ಕಂಡು ಬರುವ ಜಂತುಹುಳು ಸಮಸ್ಯೆ ಬಗ್ಗೆ ನಿರ್ಲಕ್ಷಿಸದಿರಿ…! ಎಂದು ರೇವತಗಾಂವ ಸಮುದಾಯ ಆರೋಗ್ಯಾಧಿಕಾರಿ ಶ್ರೀಧರ ಬಂಡಗರರವರು ಹೇಳಿದರು.
ರೇವತಗಾಂವ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಕೋಚಿಂಗ್ ಕ್ಲಾಸ್‌ನಲ್ಲಿ ಬುಧವಾರದಂದು ‘ರಾಷ್ಟ್ರೀಯ ಜಂತುಹುಳು ನಿರ್ಮೂಲನಾ’ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಜಂತುಹುಳು ಮಾತ್ರೆಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು. ಜಂತುಹುಳು ಎಂದರೆ ಮಾನವನ ಕರುಳಿನಿಂದ ಪೋಷಕಾಂಶಗಳನ್ನು ಹೀರಿಕೊಂಡು ಜೀವಿಸುವ ಪರಾವಲಂಬಿಗಳು. ಅಲ್ಲದೆ ಜಂತುಹುಳುವಿನ ಸೋಂಕಿನಿAದಾಗಿ ಮಕ್ಕಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ತಿಳಿಸಿದರು.
ಈ ವೇಳೆಯಲ್ಲಿ ಕೋಚಿಂಗ್ ಕ್ಲಾಸ್‌ನ ಸಂಚಾಲಕರಾದ ಮಲ್ಲು ಮಾನೆಯವರು ಮಾತನಾಡುತ್ತ. ಮಕ್ಕಳಲ್ಲಿ ಜಂತು ಹುಳುಗಳ ಬಾಧೆಯಿಂದ ರಕ್ತ ಹೀನತೆ ಹಾಗೂ ಅವರ ಬೌದ್ಧಿಕ ಬೆಳವಣಿಗೆ ಕುಂಠಿತಗೊಳ್ಳಬಹುದು. ಅವರ ಬುದ್ದಿಶಕ್ತಿ ಕಡಿಮೆಯಾಗಬಹುದು. ಶಾಲಾ ಹಾಜರಾತಿ ಕಡಿಮೆಯಾಗಿ ಕ್ರಮೇಣ ಶಾಲೆಯಿಂದ ಹೊರಬೀಳುವ ಸಾಧ್ಯತೆ ಇದೆ. ರಾಜ್ಯಾದ್ಯಂತ ೧ ರಿಂದ ೨ ವರ್ಷದ ಮಕ್ಕಳಿಗೆ ಅರ್ಧ ಮಾತ್ರೆ ಹಾಗೂ ೨ ರಿಂದ ೧೯ ವರ್ಷದ ವರೆಗಿನ ಮಕ್ಕಳಿಗೆ ಒಂದೊಂದು ಮಾತ್ರೆಗಳನ್ನು ಪ್ರತಿವರ್ಷ, ವರ್ಷಕ್ಕೆ ಎರಡು ಬಾರಿ ಜಂತು ಹುಳು ನಿರ್ಮೂಲನೆಯ ಅಲ್ಬೆಂಡಝೋಲ್ ಮಾತ್ರೆಗಳನ್ನು ನೀಡಿ, ಈ ಹೊಟ್ಟೆ ಹುಳುಗಳ ನಿರ್ಮೂಲನೆಗಾಗಿ ಸರ್ಕಾರವು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನವನ್ನು ಆಚರಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಾದ ಸುವರ್ಣ ಅಂಕಲಗಿ, ಶೋಭಾ ಪೂಜಾರಿ ಸೇರಿದಂತೆ ಕೋಚಿಂಗ್ ಕ್ಲಾಸ್‌ನ ಮಾರ್ಗದರ್ಶಕರಾದ ಎಸ್.ಎಂ.ಮಾಳಿ, ವಿ.ಆರ್.ದಶವಂತ, ಬೈಲಪ್ಪ ಹೇರೂರ, ಶಿವಾನಂದ ಅರಸಗೊಂಡ, ಪ್ರೀಯಂಕಾ ವಾಲಿಕಾರ, ದೀಪಾ ಹಾವಿನಾಳ, ಸಾವಿತ್ರಿ ದಾಭೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

