ವಿಜಯಪುರ: ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಜಂಬಗಿ ಕೆರೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಜಂಬಗಿ, ಆಹೇರಿ, ಅಂಕಲಗಿ, ಹುಣಶ್ಯಾಳ, ಮಾದಾಳ ಗ್ರಾಮದ
ನೂರಾರು ರೈತರು ಗುರುವಾರ ಟೆಂಟ್ ಹಾಕಿ ಹಸಿರು ಧ್ವಜ ಹಿಡಿದು ಜಿಲ್ಲಾಧಿಕಾರಿ ಹಾಗೂ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.
ಜಂಬಗಿ ಗ್ರಾಮದ ಮಾಜಿ ಗ್ರಾ.ಪಂ ಸದಸ್ಯ ಸಂಗಮೆಶ ಗುದಳೆ ಅವರು ಮಾತನಾಡುತ್ತಾ, ಜಂಬಗಿ ಕೆರೆ ಜಿಲ್ಲೆಯಲ್ಲಿಯೇ ೨ನೇ ಅತಿದೊಡ್ಡ ಕೆರೆಯಾಗಿದ್ದು, ಹಾಗೂ ಹುಣಶ್ಯಾಳ (ಮಾದಾಳ) ಕೆರೆಗಳಲ್ಲಿ ನೀರು ತುಂಬಿದರೆ ಸುತ್ತಮುತ್ತಲಿನ ೫-೬ ಹಳ್ಳಿಗಳ ರೈತರಿಗೆ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗುವುದು ಮಾತ್ರವಲ್ಲದೇ, ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಮೂಲಗಳು ಅಭಿವೃದ್ಧಿ ಹೊಂದುತ್ತವೆ. ಈಗ ಕೆರೆ ನೀರು ಖಾಲಿಯಾಗಿ ಜಾನುವಾರುಗಳಿಗೂ ಕುಡಿಯಲು ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಕೂಡಲೇ ಈ ಎಲ್ಲಾ ಕೆರೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ ಅವರು ಮಾತನಾಡುತ್ತಾ, ಜಿಲ್ಲೆಯ ಎಲ್ಲಾ ಕೆರೆಗಳು ತುಂಬುತ್ತಿದ್ದರು, ಜಂಬಗಿ ಹಾಗೂ ಹುಣಶ್ಯಾಳ ಕೆರೆ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೀರು ತುಂಬದೇ ಪುರಾಣ ಹೇಳುತ್ತಿದ್ದಾರೆ, ಅನೇಕ ಬಾರಿ ಕರೆ ಮಾಡಿದರೂ ಇಲ್ಲ ಸಲ್ಲದ ಕಥೆ ಹೇಳಿ ಹೋರಾಟದ ಸ್ಥಳಕ್ಕೆ ಬರದೇ ತಲೆ ತಪ್ಪಿಸಿಕೊಳ್ಳುತ್ತಿದ್ದಾರೆಎಂದರು.
ಮುಖಂಡ ಪ್ರಕಾಶ ದಿಂಡವಾರ ಮಾತನಾಡುತ್ತಾ, ರಾಂಪೂರ ವ್ಯಾಪ್ತಿಯಿಂದ ನಮಗೆ ಬರುವುದು ಅಸಾಧ್ಯದ ಮಾತು, ಸಮೀಪದ ಕಗ್ಗೊಡ ಗ್ರಾಮದಲ್ಲಿರುವ ಮುಖ್ಯ ಕಾಲುವೆಗಳಿಂದ ಹಳ್ಳದ ಮೂಲಕ ಜಂಬಗಿಯ ಕೆರೆ ನೀರು ತುಂಬಿಸಬಹುದು ಎಂದು ಸಲಹೆ ನೀಡಿದರು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೆಶ ಸಗರ, ಮುಖಂಡರಾದ ಗ್ರಾ.ಪಂ ಅಧ್ಯಕ್ಷರಾದ ಶ್ರೀಶೈಲ ಮಸೂತಿ, ಸದಸ್ಯರಾದ ಸುರೇಶ ತಳವಾರ, ಮುತ್ತಪ್ಪ ನಾಯ್ಕೋಡಿ, ಮಾಜಿ ಸದಸ್ಯರಾದ ರಮೇಶ ಕೋಣಸಿರಸಗಿ, ಶರಣಪ್ಪ ಜಮಖಂಡಿ, ರಾಮಣ್ಣ ಸವಳಿ, ನಿಂಗಪ್ಪ ಗೇರಡೆ, ಆಹೇರಿ ಗ್ರಾ.ಪಂ ಮಾಜಿ ಅಧ್ಯಕ್ಷರು ಬಸವರಾಜ ಗಾಣಗೇರ, ಬಸವರಾಜ ಮಸೂತಿ, ರಾಮಸಿಂಗ ರಜಪೂತ, ಅನಮೇಶ ಜಮಖಂಡಿ, ನಿಜಲಿಂಗಪ್ಪ ತೇಲಿ, ಬಸನಗೌಡ ಬಿರಾದಾರ, ಮಲ್ಲಿಕಾರ್ಜುನ ನಾಗಠಾಣ, ಬಸವಂತ ತೇಲಿ, ಮಹದೇವಪ್ಪ ತೇಲಿ, ಸಾತಲಿಂಗಯ್ಯ ಸಾಲಿಮಠ, ಮಹಾದೇವ ಕದಮ, ಕಲ್ಲಪ್ಪ ಪಾರಶೆಟ್ಟಿ, ರಾಜು ಹೊನ್ನಳ್ಳಿ, ಬಸಯ್ಯ ಆಲಗೋಡ, ಮಹಿಳಾ ಮುಖಂಡರಾದ ಗಂಗೂಬಾಯಿ ಹಚಡದ, ಸಂಗೀತಾ ರಾಠೋಡ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
ಜಂಬಗಿ ಕೆರೆಗೆ ನೀರು ಬಿಡಲು ಆಗ್ರಹಿಸಿ ರೈತರ ಅನಿರ್ದಿಷ್ಟ ಧರಣಿ
Related Posts
Add A Comment

